AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shikaripur: ಅಂಟಿ ಮರ್ಡರ್ ಕೇಸ್ ಇನ್ನೂ ನಿಗೂಢ! ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯಿಂದಲೇ ನಡೆಯಿತಾ ಹತ್ಯೆ? ಇನ್ನು ಮಕ್ಕಳ ಭವಿಷ್ಯವೇನು?

Shivamogga: ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ಗ್ರಾಮದಲ್ಲಿ ದನದ ಕೊಟ್ಟಿಗೆಯಲ್ಲಿ ತಾಯಿ ಮತ್ತು ಆಕೆಯ ಪ್ರಿಯತಮ ರೊಮಾನ್ಸ್ ಮಾಡುವ ಸಮಯದಲ್ಲಿ ಅಲ್ಲಿಗೆ ಮಗ ಎಂಟ್ರಿ ಕೊಟ್ಟಿದ್ದ. ಇಬ್ಬರೂ ಒಟ್ಟಿಗೆ ಮಲಗಿದ್ದನ್ನು ನೋಡಿದ ಮಗನಿಗೆ ಶಾಕ್ ಆಗಿತ್ತು. ತಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಹಾಲೇಶ್ ನಾಯ್ಕನನ್ನು ಹಿಡಿಯಲು ಮಗ ಮುಂದಾಗಿದ್ಧ. ಮುಂದೆ?

Shikaripur: ಅಂಟಿ ಮರ್ಡರ್ ಕೇಸ್ ಇನ್ನೂ ನಿಗೂಢ! ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯಿಂದಲೇ ನಡೆಯಿತಾ ಹತ್ಯೆ? ಇನ್ನು ಮಕ್ಕಳ ಭವಿಷ್ಯವೇನು?
ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯಿಂದಲೇ ಹತ್ಯೆ ನಡೆಯಿತಾ?
TV9 Web
| Edited By: |

Updated on: Apr 04, 2023 | 4:04 PM

Share

ಗಂಡ ತೀರಿ ಹೋಗಿ 15 ವರ್ಷವಾಗಿತ್ತು. ಇಬ್ಬರು ಗಂಡು ಮಕ್ಕಳನ್ನು ವಿಧವೆ ತಾಯಿ ಸಾಕಿ ಬೆಳೆಸಿ ದೊಡ್ಡವರನ್ನಾಗಿ ಮಾಡಿದ್ದಳು. ಗಂಡು ಮಕ್ಕಳು ತಾಯಿಗೆ ಸದ್ಯ ಆಸರೆಯಾಗಿದ್ದರು. ಈ ನಡುವೆ ವಿಧವೆಗೆ ಆ ಒಬ್ಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ (Illicit Relation) ಶುರುವಾಗಿತ್ತು. ಹೀಗೆ ಅನೈತಿಕ ಸಂಬಂಧ ಗುಟ್ಟು ರಟ್ಟಾಗಿತ್ತು. ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಹೀಗೆ ಸಿಕ್ಕಿಬಿದ್ದ ಇಬ್ಬರೂ ಘಟನಾ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಮುಂದೆ, ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಶವ ಪತ್ತೆಯಾಗಿದೆ. ಆ ಮಹಿಳೆಯ ಮರ್ಡರ್ ರಹಸ್ಯದ ಕತೆ ಇಲ್ಲಿದೆ. 2023, ಮಾರ್ಚ್ 11 ರ ರಾತ್ರಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ (Shikaripur, Shivamogga) ಚಿಕ್ಕಮಾಗಡಿ ಗ್ರಾಮದಲ್ಲಿ ಒಂದು ಘಟನೆ ನಡೆದಿತ್ತು. ಜೇಬಿಬಾಯಿ ಎಂಬ ಮಹಿಳೆಗೆ ಅದೇ ಗ್ರಾಮದ ಹಾಲೇಶ್ ನಾಯ್ಕ್ ಜೊತೆ ಅನೈತಿಕ ಸಂಬಂಧವಿತ್ತು. ಆ ದಿನ ಇಬ್ಬರೂ ಮನೆಯ ಸಮೀಪದ ದನದ ಕೊಟ್ಟಿಗೆಯಲ್ಲಿ ಸಂಗಮಿಸಿದ್ದರು. ಇಬ್ವರೂ ಸೇರಿ ರೊಮಾನ್ಸ್ ಮಾಡುವ ಸಮಯದಲ್ಲಿ ಅಲ್ಲಿಗೆ ಜೇಬಿಬಾಯಿ ಮಗ ಮಂಜಾ ನಾಯ್ಕ ಎಂಟ್ರಿ ಕೊಟ್ಟಿದ್ದ. ಇಬ್ಬರೂ ಒಟ್ಟಿಗೆ ಮಲಗಿದ್ದನ್ನು ನೋಡಿದ ಮಗನಿಗೆ ಶಾಕ್ ಆಗಿತ್ತು. ತಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ (paramour) ಹಾಲೇಶ್ ನಾಯ್ಕ ನನ್ನು ಹಿಡಿಯಲು ಮಗ ಮಂಜಾ ನಾಯ್ಕ್ ಮುಂದಾಗಿದ್ಧಾನೆ.

ಈ ವೇಳೆ ಅಲ್ಲಿಂದ ಹಾಲೇಶ್ ಮತ್ತು ಜೇಬಿಬಾಯಿ ಕಾಲ್ಕಿತ್ತಿದ್ದರು. ಆದರೆ, ಮರುದಿನ ಪಾಳುಬಿದ್ದ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಜೇಬಿಬಾಯಿಯ ಶವ ಮಗ ಮಂಜಾ ನಾಯ್ಕ್ ಕಣ್ಣಿಗೆ ಬಿದ್ದಿತ್ತು. ಮರುದಿನ ಬೆಳಗ್ಗೆಯಿಂದ ಹುಡುಕಾಡಿದರೂ ಸಿಗದ ತಾಯಿ ಕೊನೆಗೂ ಸಿಕ್ಕಿದ್ದು ಹೆಣವಾಗಿ. ಹೀಗೆ ತಾಯಿ ಬಳಿ ಹೋಗಿ ನೋಡಿದ್ರೆ, ಅವಳಿಗೆ ಗುಪ್ತಾಂಗ ಮತ್ತು ತೊಡೆಯ ಮೇಲೆ ಬಲವಾಗಿ ಕಚ್ಚಿರುವ ಗಾಯಗಳಿದ್ದವು. ಇದೊಂದು ಆತ್ಮಹತ್ಯೆ ಪ್ರಕರಣವಲ್ಲ. ಪ್ರೀ ಪ್ಲ್ಯಾನ್ ಮಾಡಿ ಜೇಬಿಬಾಯಿ ಮರ್ಡರ್ ಎಂದು ಶಿಕಾರಿಪುರ ಪೊಲೀಸರಿಗೆ ಮೃತಳ ಮಗನು ದೂರು ಕೊಟ್ಟಿದ್ದನು.

ಈ ಮಧ್ಯೆ, ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಹಾಲೇಶ್ ನಾಯ್ಕ್ ಎಸ್ಕೇಪ್ ಆಗಿದ್ದಾನೆ. ಇತ್ತ ಕುಟುಂಬಸ್ಥರು ಜೇಬಿಬಾಯಿ ಕೊಲೆಯಾಗಿದೆ. ಪೊಲೀಸರು ಸೂಕ್ತ ತನಿಖೆ ಮಾಡುತ್ತಾರೆ ಅಂತಾ ನಂಬಿದ್ದರು. ಆದ್ರೆ ಪೊಲೀಸರು ಈ ಪ್ರಕರಣವನ್ನು ತುಂಬಾ ಹಗುರವಾಗಿ ತೆಗೆದುಕೊಂಡು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಇಂದು ಎಸ್ಪಿ ಕಚೇರಿಗೆ ಬಂದು ದೂರು ಕೊಟ್ಟಿದ್ಧಾರೆ. ಅದಕ್ಕೂ ಮೊದಲು ಎಸ್ಪಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು.

ಇದರ ಬಳಿಕ ಜೇಬಿಬಾಯಿ ಕೊಲೆಯಾಗಿದೆ. ಅವಳ ಮೃತದೇಹದ ಮೇಲೆ ಅನೇಕ ಗಾಯಗಳಾಗಿವೆ. ಹೀಗಾಗಿ ಇದು ಆತ್ಮಹತ್ಯೆ ಕೇಸ್ ಅಲ್ಲ. ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೇ ಮಹಿಳೆಯನ್ನು ಮರ್ಡರ್ ಮಾಡಿದ್ದಾರೆಂದು ಮೃತಳ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಸದ್ಯ ಗ್ರಾಮಸ್ಥರು ಜೇಬಿಬಾಯಿ ಸಾವಿನ ಹಿಂದೆ ಇರುವ ವ್ಯಕ್ತಿಗಳನ್ನು ಬಂಧಿಸುವ ಮೂಲಕ ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಿದೆ. ಸದ್ಯ ಎಸ್ಪಿ ಅವರು ಕೊಲೆ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವುದಕ್ಕೆ ಖಡಕ್ ಸೂಚನೆ ಕೊಟ್ಟಿದ್ಧಾರೆ. ಮಗನಿಗೆ ಸಿಕ್ಕ ಬಿದ್ದ ಜೇಬಿಬಾಯಿ ಮತ್ತು ಹಾಲೇಶ್ ನಾಯ್ಕ ಇಬ್ಬರಲ್ಲಿ ಜೇಬಿಬಾಯಿ ಶವ ಮಾತ್ರ ಪತ್ತೆಯಾಗಿದೆ.

ಇನ್ನು ಹಾಲೇಶ್ ನಾಯ್ಕಗೆ ರಾಜಕೀಯ ಪ್ರಭಾವವಿದೆ. ಈ ಹಿನ್ನೆಲೆಯಲ್ಲಿ ಹಾಲೇಶ್ ನಾಯ್ಕ್ ಈ ಪ್ರಕರಣದಿಂದ ಬಚಾವ್ ಆಗಲು ತಂತ್ರಗಾರಿಕೆ ಹೆಣೆಯುತ್ತಿದ್ಧಾನೆ. ಮಹಿಳೆಯ ಕೊಲೆ ಕೇಸ್ ಅನ್ನು ಆತ್ಮಹತ್ಯೆ ಅಂತಾ ಬಿಂಬಿಸಲು ಹಾಲೇಶ್ ನಾಯ್ಕ್ ಬಿಂಬಿಸಿದ್ಧಾನಂತೆ.

ಪತಿ ಇಲ್ಲದೇ ಇಬ್ಬರ ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದ ತಾಯಿಯ ಬಗ್ಗೆ ಮಕ್ಕಳಿಗೆ ಹೆಮ್ಮೆಯಿತ್ತು. ಈ ನಡುವೆ ಮಹಿಳೆಯು ಹಾಲೇಶ್ ನಾಯ್ಕ್ ಗೆ ಸಿಕ್ಕು ತನ್ನ ಬದುಕು ಹಾಳು ಮಾಡಿಕೊಂಡಿದ್ದಾಳೆ. ಇನ್ನು ಹಾಲೇಶ್ ನಾಯ್ಕನು ತನ್ನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯು ಜೀವಂತವಾಗಿದ್ದರೆ ತನಗೆ ತೊಂದರೆ ಅಂತಾ ಅವಳ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸದ್ಯ 20 ದಿನಗಳಿಂದ ಮಹಿಳೆಯ ಸಾವು ಕೇಸ್ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.

ವರದಿ: ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ 

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?