ತುಂಗಾ ನದಿ ಸೇತುವೆ ಮೇಲೆಯೇ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು: ಮುಂದೇನಾಯ್ತು?

ಶಿವಮೊಗ್ಗದ ತುಂಗಾ ಸೇತುವೆಯ ಮೇಲೆ ರೈಲು ಚಲಿಸುತ್ತಿದ್ದಾಗ ಆರು ಬೋಗಿಗಳು ಬೇರ್ಪಟ್ಟವು. ಉಳಿದ ಬೋಗಿಗಳು ಇಂಜಿನ್ ಜೊತೆ ಮುಂದೆ ಸಾಗಿವೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾವುದೇ ಪ್ರಾಣಹಾನಿ ಸಂಭವಿಸದೆ ದೊಡ್ಡ ಅಪಾಯ ತಪ್ಪಿದೆ. ಮಾಹಿತಿ ತಿಳಿದು ರೈಲ್ವೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ತುಂಗಾ ನದಿ ಸೇತುವೆ ಮೇಲೆಯೇ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು: ಮುಂದೇನಾಯ್ತು?
ರೈಲಿನಿಂದ ಬೇರ್ಪಟ್ಟ ಬೋಗಿಗಳು
Edited By: ವಿವೇಕ ಬಿರಾದಾರ

Updated on: Aug 06, 2025 | 6:46 PM

ಶಿವಮೊಗ್ಗ, ಆಗಸ್ಟ್​ 06: ಚಲಿಸುತ್ತಿರುವಾಗಲೇ ರೈಲಿನ (Train) ಬೋಗಿಗಳು ಬೇರ್ಪಟ್ಟು ಸೇತುವೆ ಮೇಲೆಯೇ ನಿಂತಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ದೊಡ್ಡ ದುರಂತವೊಂದು ತಪ್ಪಿದೆ. ರೈಲು ಸಂಖ್ಯೆ 16205 ತಾಳಗುಪ್ಪದಿಂದ ಮೈಸೂರಿಗೆ ಹೊರಟಿತ್ತು. ರೈಲು ಶಿವಮೊಗ್ಗ (Shivamogga) ನಗರದ ಹೊಳೆ ಬಸ್ ನಿಲ್ದಾಣ ಬಳಿ ಇರುವ ತುಂಗಾ ಸೇತುವೆ ಮೇಲೆ ಬರುತ್ತಿದ್ದಂತೆ ಏಕಾಏಕಿ 6 ಬೋಗಿಗಳು ರೈಲಿನಿಂದ ಬೇರ್ಪಟ್ಟಿವೆ. ಉಳಿದ ಬೋಗಿಗಳು ಇಂಜಿನ ಜೊತೆ ಮುಂದೆ ಸಾಗಿವೆ. ರೈಲು ಸ್ವಲ್ಪ ದೂರ ಮುಂದೆ ಹೋಗಿ ನಿಂತಿದೆ.

ಮಾಹಿತಿ ತಿಳಿದು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಎಂಜಿನಿಯರ್ ಮತ್ತು ಮೆಕ್ಯಾನಿಕಲ್ ಸುಮಾರು 48 ನಿಮಿಷ ಕಾರ್ಯಾಚರಣೆ ನಡೆಸಿ ಬೇರ್ಪಟ್ಟ ಬೋಗಿಗಳನ್ನು ಜೋಡಿಸುವಲ್ಲಿ ಯಶಸ್ವಿಯಾದರು. ಬೋಗಿ ಜೋಡಣೆ ಬಳಿಕ ರೈಲು ಸಂಚಾರ ಪುನರಾರಂಭವಾಗಿದೆ. ಶಿವಮೊಗ್ಗ ರೇಲ್ವೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:39 pm, Wed, 6 August 25

Basavaraj Yaraganavi
Follow Us