ಪುತ್ರ ವ್ಯಾಮೋಹದಿಂದ ಈಶ್ವರಪ್ಪ ಹೊರಗೆ ಬಂದಿದ್ದರೆ ಇನ್ನೂ ನಿಲ್ಲುತ್ತಿದ್ದರು; ಆಯನೂರು ಮಂಜುನಾಥ್ ಟಾಂಗ್

‘ಇಷ್ಟು ವರ್ಷ ಇದ್ದ ಒಂದೇ ತರನಾದ ರಾಜಕಾರಣ ಇದೀಗ ಮಗ್ಗಲು ಬದಲಾಯಿಸಿದ್ದು, ಈಶ್ವರಪ್ಪ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸುಧೀರ್ಘ ರಾಜಕೀಯ ಪ್ರಯಾಣದಲ್ಲಿ ಈಶ್ವರಪ್ಪನವರಿಗೆ ವ್ಯಕ್ತಿಗತವಾಗಿ ದ್ವೇಷಿಗಳು ಕಡಿಮೆ. ಎಲ್ಲರೊಂದಿಗೆ ಸ್ನೇಹಭಾವದಿಂದ ಇದ್ದಾರೆ. ಪುತ್ರ ವ್ಯಾಮೋಹದಿಂದ ಹೊರಗೆ ಬಂದಿದ್ದರೆ ಅವರು ಇನ್ನೂ ನಿಲ್ಲುತ್ತಿದ್ದರು ಎಂದು ಎಂ.ಎಲ್.ಸಿ. ಆಯನೂರು ಮಂಜುನಾಥ್

ಪುತ್ರ ವ್ಯಾಮೋಹದಿಂದ ಈಶ್ವರಪ್ಪ ಹೊರಗೆ ಬಂದಿದ್ದರೆ ಇನ್ನೂ ನಿಲ್ಲುತ್ತಿದ್ದರು; ಆಯನೂರು ಮಂಜುನಾಥ್ ಟಾಂಗ್
ಕೆಎಸ್​ ಈಶ್ವರಪ್ಪ,ಆಯನೂರು ಮಂಜುನಾಥ್
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 12, 2023 | 1:01 PM

ಶಿವಮೊಗ್ಗ: ‘ಇಷ್ಟು ವರ್ಷ ಇದ್ದ ಒಂದೇ ತರನಾದ ರಾಜಕಾರಣ ಇದೀಗ ಮಗ್ಗಲು ಬದಲಾಯಿಸಿದ್ದು, ಈಶ್ವರಪ್ಪ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸುಧೀರ್ಘ ರಾಜಕೀಯ ಪ್ರಯಾಣದಲ್ಲಿ ಈಶ್ವರಪ್ಪನವರಿಗೆ ವ್ಯಕ್ತಿಗತವಾಗಿ ದ್ವೇಷಿಗಳು ಕಡಿಮೆ. ಅವರು ಎಲ್ಲರೊಂದಿಗೆ ಸ್ನೇಹಭಾವದಿಂದ ಇದ್ದಾರೆ. ಪುತ್ರ ವ್ಯಾಮೋಹದಿಂದ ಹೊರಗೆ ಬಂದಿದ್ದರೆ ಅವರು ಇನ್ನೂ ನಿಲ್ಲುತ್ತಿದ್ದರು. ಅವರ ನಿರ್ಗಮನ ಸ್ವಲ್ಪ ಆಘಾತಕಾರಿ ಮತ್ತು ಬೇಸರವಾಗಿದೆ ಎಂದು ಎಂ.ಎಲ್.ಸಿ. ಆಯನೂರು ಮಂಜುನಾಥ್(Ayanur Manjunath) ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಈಶ್ವರಪ್ಪ(K. S. Eshwarappa) ಅತ್ಯುತ್ತಮ ಕೆಲಸ ಮಾಡುತ್ತಿದ್ದರೂ ಕೂಡ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಅವರು ಅವರ ನಾಲಿಗೆ ಮತ್ತು ಅವರ ಮನೆಯಲ್ಲಿರುವ ವೈರಿಯಿಂದಾಗಿ ಇಂದು ಟಿಕೆಟ್ ಸಿಕ್ಕಿಲ್ಲ. ಇದೀಗ ತನ್ನದಲ್ಲದ ತಪ್ಪಿಗೆ ಅವರು ರಾಜಕೀಯದಿಂದ ನಿವೃತ್ತಿ ಆಗಿದ್ದಾರೆ. ಅವರ ನಿರ್ಗಮನಕ್ಕೆ ನಾವ್ಯಾರೂ ಕಾರಣರಲ್ಲ. ಒಂದು ಅವರ ನಾಲಿಗೆ ಮತ್ತೊಂದು ಅವರ ಮನೆಯಲ್ಲೇ ಇರುವ ಅವರ ಪುತ್ರನ ಕಾರಣದಿಂದಾಗಿ ಅವರು ನಿರ್ಗಮನವಾದಂತಾಗಿದೆ ಎಂದರು.

ಎಂದಿಗೂ ಈಶ್ವರಪ್ಪ ನನ್ನ ಟಾರ್ಗೆಟ್ ಆಗಿರಲಿಲ್ಲ. ನೌಕರರ, ಕಾರ್ಮಿಕರ ಹಿತದೃಷ್ಟಿಯಿಂದ ನಾನು ಸದನ ಪ್ರವೇಶಿಸಲು ಅವಕಾಶ ಕೇಳಿದ್ದೇನೆ. ಇದರ ಹೊರತಾಗಿ ನನಗೆ ಈಶ್ವರಪ್ಪ ದ್ವೇಷಿಯಲ್ಲ. ಈಶ್ವರಪ್ಪನವರಿಗೆ ಟಿಕೆಟ್ ನೀಡದೇ ನನಗೆ ನೀಡಿ ಎಂದು ಕೇಳಿದ್ದೇನೆ ಅಷ್ಟೆ, ನಾನು ಈಶ್ವರಪ್ಪರ ರಾಜಿನಾಮೆಯಿಂದ ವಿಚಲಿತನಾಗಿಲ್ಲ. ನನಗೆ ಈಗಲೂ ಟಿಕೆಟ್ ಸಿಗುವ ಎಲ್ಲಾ ಆಶಾಭಾವನೆ ಇನ್ನೂ ಇದೆ. ಆದರೆ ಯಾವ ಪಕ್ಷದಿಂದ ಎಂದು ಈಗಲೇ ಹೇಳಲ್ಲ. ಯಾವ ಪಕ್ಷಗಳು ಕೂಡ ಇನ್ನೂ ಟಿಕೆಟ್ ಘೋಷಿಸಿಲ್ಲ.

ಇದನ್ನೂ ಓದಿ:ಚುನಾವಣೆ: ನೆಮ್ಮದಿಯ ಬದುಕಿಗೊಂದು ಆಶಾಕಿರಣ; ಪ್ರಸ್ತುತ ರಾಜಕೀಯ ಹೇಗಿದೆ?

ಬಿಜೆಪಿಯಲ್ಲಿ ನನಗೆ ಸಿಕ್ಕಿರುವ ಬೆಂಬಲ ಜಾಸ್ತಿಯಾಗಿದೆ. ಸಾರ್ವಜನಿಕವಾದ ಘಟನೆಗಳ ಆಧರಿಸಿ ಒಂದೆರೆಡು ದಿನಗಳಲ್ಲಿ ನಾನು ನನ್ನ ತೀರ್ಮಾನ ಮಾಡುತ್ತೆನೆ. ಮುಷ್ಟಿ ಕಟ್ಟಿಕೊಂಡು ರಾಜಕಾರಣ ಮಾಡುವುದೇ ರಾಜಕಾರಣದ ಗುರಿ. ನಾನು ಬೌಲಿಂಗ್ ಮಾಡದೇ ಬಾಲನ್ನು ಜೇಬಿನಲ್ಲಿಟ್ಟುಕೊಂಡು ವಿಕೆಟ್ ಉರುಳಿಸಬಹುದು. ಮತ್ತೊಮ್ಮೆ ಕಾದು ನೋಡಿ ಎನ್ನುವ ಮೂಲಕ ಆಯನೂರು ಮಂಜುನಾಥ್ ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ