ಶಿವಮೊಗ್ಗ, ತೀರ್ಥಹಳ್ಳಿ ವ್ಯಾಪ್ತಿಯ ಎಪಿಎಂಸಿ ಕಾಮಗಾರಿ ಹೆಸರಲ್ಲಿ ಕೋಟ್ಯಂತರ ರೂ ಅಕ್ರಮ ನಡೆದಿದೆ -ಜಿಲ್ಲಾ ಕಾಂಗ್ರೆಸ್ ಆರೋಪ
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ಎಸ್ ಸುಂದರೇಶ್ ಪತ್ರಿಕಾಗೋಷ್ಠಿ ನಡೆಸಿ ಶಿವಮೊಗ್ಗ, ತೀರ್ಥಹಳ್ಳಿ ವ್ಯಾಪ್ತಿಯ ಎಪಿಎಂಸಿ ಮಳಿಗೆಗಳ ಕಾಮಗಾರಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.
ಶಿವಮೊಗ್ಗ: ಎಪಿಎಂಸಿ ವಾಣಿಜ್ಯ ಮಳಿಗೆಗಳ ಕಾಮಗಾರಿಯಲ್ಲಿ ಅಕ್ರಮ ಆರೋಪ ಕೇಳಿ ಬಂದಿದೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ಎಸ್ ಸುಂದರೇಶ್ ಪತ್ರಿಕಾಗೋಷ್ಠಿ ನಡೆಸಿ ಶಿವಮೊಗ್ಗ, ತೀರ್ಥಹಳ್ಳಿ ವ್ಯಾಪ್ತಿಯ ಎಪಿಎಂಸಿ ಮಳಿಗೆಗಳ ಕಾಮಗಾರಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ. ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದಲ್ಲಿರುವ ನಿರ್ಮಿತಿ ಕೇಂದ್ರ ನಾಗರಾಜ್ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಭ್ರಷ್ಠಾಚಾರದ ಆರೋಪ ಮಾಡಿದ್ದಾರೆ.
ಕಳೆದ 15 ವರ್ಷದಿಂದ ನಾಗರಾಜ್ ನಿರ್ಮಿತಿ ಕೇಂದ್ರದಲ್ಲಿ ಇದ್ದಾರೆ. ಈ ನಿರ್ಮಿತಿ ಕೇಂದ್ರದಿಂದ ಕಟ್ಟಲಾಗುವ ಕಟ್ಟಡಗಳನ್ನ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಯಬೇಕು ಎಂಬ ನಿಯಮವಿದೆ. ಆದರೆ ನಿರ್ಮಿತಿ ಕೇಂದ್ರದಿಂದ ಕಟ್ಟಲಾಗುವ ಕಟ್ಟಡಗಳನ್ನ ನಿರ್ಮಿತಿ ಕೇಂದ್ರವೆಂದು ತೋರಿಸಲಾಗುತ್ತದೆ. ಇಲ್ಲಿ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಯಾವ ಮಿಷಿನರಿಗಳೇ ಇರುವುದಿಲ್ಲ. ಆದರೂ ಎಲ್ಲಾ ರಾಜಕೀಯ ಪಕ್ಷಗಳ ಜೊತೆ ಅಡ್ಜೆಸ್ಟ್ ಮೆಂಟ್ ನಡೆಸಿ 35-40% ಕಮಿಷನ್ ಲೆಕ್ಕಚಾರದಲ್ಲಿ ಕಾಮಗಾರಿ ನಡೆಯುತ್ತವೆ ಎಂದು ಆರೋಪಿಸಿದರು.
ಎಪಿಎಂಸಿಯಲ್ಲೂ ಭ್ರಷ್ಠಾಚಾರ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಎಪಿಎಂಸಿ ವಾಣಿಜ್ಯ ಮಳಿಗೆಗಳ ಕಟ್ಟಡದ ಮಳಿಗೆಗಳಿಗೆ 10 ಕೋಟಿ ರೂ.ಮೊತ್ತದ ಕಾಮಗಾರಿಯಾಗಿದ್ದು 10 ಅಡಿ ಕಟ್ಟಡ ಇನ್ನೂ ಏರೇ ಇಲ್ಲ ಆಗಲೇ. 2 ಕೋಟಿ ರೂ ಹಣ ವರ್ಕ್ ಶಿಪ್ ಬಿಡುಗಡೆ ಮಾಡಲಾಗಿದೆ. ಎಪಿಎಂಸಿಯ ವಿಜಯಕುಮಾರ್ ಮತ್ತು ಪ್ರಸಾದ್ ಎಂಬ ಅಧಿಕಾರಿಗಳ ಶಾಮೀಲಾಗಿರುವ ಆರೋಪವಿದೆ. ಪಕ್ಷ ಇದರ ವಿರುದ್ಧ ಹೋರಾಡಲಿದೆ ಎಂದರು. ಸಾಗರ ಮುಖ್ಯ ರಸ್ತೆಯ ಮತ್ತೊಂದು ವಾಣಿಜ್ಯ ಸಣ್ಣ ಮಳಿಗೆಗಳಿಗೆ 3-50 ಕೋಟಿ ರೂ.ವಿನ ಕಾಮಗಾರಿ ಇದ್ದು, ಇದಕ್ಕೆ 75 ಲಕ್ಷ ರೂ ಬಿಡುಗಡೆ ಮಾಡಲಾಗುತ್ತಿದೆ. ತೀರ್ಥಹಳ್ಳಿಯ ಎಪಿಎಂಸಿಯಲ್ಲಿಯೂ ವಾಣಿಜ್ಯ ಮಳಿಗೆ ಕಾಮಗಾರಿಯ 10 ಕೋಟಿ ರೂ.ಗೆ ಪ್ರತಿ ಕಾಮಗಾರಿಗೆ ವರ್ಕ್ ಶಿಪ್ ಆಗಿ 1 ಕೋಟಿ ಬಿಡುಗಡೆ ಆಗಿದೆ. ಇದನ್ನ ಗುಲ್ಬರ್ಗ ಗುತ್ತಿಗೆದಾರನಿಗೆ ನೀಡಲಾಗಿದೆ. ಇದನ್ನ ಎಪಿಎಂಸಿ ಬೆಂಗಳೂರಿನ ಎಸ್ ಇ ಮೊನ್ಬೆ ವಿಸಿಟ್ ಮಾಡಿ ಅನುಮೋದನೆ ನೀಡಿ ಹೋಗಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಬೇಕು.ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಪಕ್ಷ ಎಸಿಬಿಗೆ ಈ ಬಗ್ಗೆ ದೂರು ನೀಡಲಾಗುತ್ತಿದೆ. ಪ್ರತಿ ಇಲಾಖೆಯಲ್ಲಿ ಭ್ರಷ್ಠಾಚಾರ ನಡೆಸಲಾಗುತ್ತಿದೆ ಎಂದರು.
ಏನಿದು ವರ್ಕ್ ಶಿಪ್ ಕ್ವಾಂಟಿಟಿ ಎಕ್ಸೆಸ್ ಗೆ ಹಣ ಬಿಡುಗಡೆ ಆಗಬೇಕೆಂಬ ನಿಯಮವಿದೆ. ಇದನ್ನ ವರ್ಕ್ ಶಿಪ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಂದು ಅಡಿ ಕಟ್ಟಡ ಏರಿಸಲು ವರ್ಕ್ ಶಿಪ್ ಹಣದಿಂದ ಕಾಮಗಾರಿಯ ಹೆಚ್ಚುವರಿ ಹಣ ನೀಡಲಾಗುತ್ತದೆ. ಆದರೆ 10 ಕೋಟಿ ರೂ. ಅನುನೋದನೆ ಕಾಮಗಾರಿ ಇದ್ದರೆ. ವರ್ಕ್ ಶಿಪ್ ಹಣವನ್ನ ಹೆಚ್ಚುವರಿ ಮಾಡಿಕೊಂಡು ಕಾಮಗಾರಿ ಆರಂಭದ ಹಂತದಲ್ಲಿ ಬಿಡುಗಡೆ ಮಾಡಿಕೊಳ್ಳಲಾಗುತ್ತಿದೆ. ಇದನ್ನ ಕೊನೆಯಲ್ಲಿ ಬಿಡುಗಡೆ ಮಾಡಿಕೊಳ್ಳಬೇಕು ಎಂದು ವಿವರಿಸಿದರು.
ಶಿವಮೊಗ್ಗದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:11 pm, Fri, 13 May 22