ಶಿರಸಿಯಲ್ಲಿ ನಡುರಸ್ತೆಯಲ್ಲೇ ನಡುಕ ಹುಟ್ಟಿಸಿದ ಗ್ಯಾಂಗ್‌ವಾರ್!: 6 ಯುವಕರ ವಿರುದ್ಧ ಪ್ರಕರಣ ದಾಖಲು

ಶಿರಸಿಯಲ್ಲಿ ನಡೆದ ಸಾಮಾನ್ಯ ಬೈಕ್ ಅಪಘಾತವು ಎರಡು ಗುಂಪುಗಳ ನಡುವೆ ಭೀಕರ ಗ್ಯಾಂಗ್‌ವಾರ್‌ಗೆ ತಿರುಗಿದೆ. ಸಿಂಪಿಗಲ್ಲಿಯಲ್ಲಿ ನಡೆದ ಯುವಕರ ಮಾರಾಮಾರಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಆರು ಯುವಕರ ವಿರುದ್ಧ ಶಿರಸಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಮತ್ತಷ್ಟು ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಶಿರಸಿಯಲ್ಲಿ ನಡುರಸ್ತೆಯಲ್ಲೇ ನಡುಕ ಹುಟ್ಟಿಸಿದ ಗ್ಯಾಂಗ್‌ವಾರ್!: 6 ಯುವಕರ ವಿರುದ್ಧ ಪ್ರಕರಣ ದಾಖಲು
ಗ್ಯಾಂಗ್‌ವಾರ್
Edited By:

Updated on: May 23, 2026 | 2:38 PM

ಶಿರಸಿ, ಮೇ.23: ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪಟ್ಟಣವಾದ ಶಿರಸಿಯಲ್ಲಿ ಕೇವಲ ಒಂದು ಬೈಕ್ ಅಪಘಾತದ ವಿಚಾರವಾಗಿ ಎರಡು ಗುಂಪುಗಳ ನಡುವೆ ಭೀಕರ ಗ್ಯಾಂಗ್‌ವಾರ್ ನಡೆದಿದೆ. ನಗರದ ಸಿಂಪಿಗಲ್ಲಿಯ ನಡುರಸ್ತೆಯಲ್ಲೇ ಯುವಕರ ಎರಡು ಗುಂಪುಗಳು ಪರಸ್ಪರ ಅಟ್ಟಾಡಿಸಿಕೊಂಡು ಮಾರಾಮಾರಿ ನಡೆಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಶಿರಸಿ ಟೌನ್ ಪೊಲೀಸ್ ಠಾಣೆಯಲ್ಲಿ 6 ಯುವಕರ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಮೇ 21ರ ರಾತ್ರಿ ಶಿರಸಿಯ ದೇವಿಕೆರೆ ಬಳಿ ದ್ವಿಚಕ್ರ ವಾಹನಗಳ ನಡುವೆ ಸಣ್ಣದೊಂದು ಅಪಘಾತ ನಡೆದಿದೆ. ಈ ಅಪಘಾತದ ವಿಚಾರವಾಗಿ ಎರಡು ಕೋಮುಗಳ ಯುವಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ವೈಷಮ್ಯ ಬೆಳೆದಿತ್ತು. ಇದೇ ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡ ಯುವಕರ ಗುಂಪು, ಸಿಂಪಿಗಲ್ಲಿಯಲ್ಲಿ ಮುಖಾಮುಖಿಯಾದಾಗ ಏಕಾಏಕಿ ಬೀದಿಯಲ್ಲೇ ರಣರಂಗ ಸೃಷ್ಟಿಯಾಗಿದೆ.

ಇದನ್ನೂ ಓದಿ: ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!

ನಡುರಸ್ತೆಯಲ್ಲಿ ಯುವಕರು ಪರಸ್ಪರ ಗೂಸಾ ಮಾಡಿಕೊಳ್ಳುತ್ತಿದ್ದ ಭೀಕರ ದೃಶ್ಯಗಳು ಸ್ಥಳೀಯ ಸಿಸಿಕ್ಯಾಮರಾದಲ್ಲಿ (CCTV) ಸರೆಆಗಿವೆ. ಈ ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸಿರುವ ಶಿರಸಿ ನಗರ ಠಾಣೆಯ ಪೊಲೀಸರು, ಗಲಾಟೆಯಲ್ಲಿ ಭಾಗಿಯಾಗಿದ್ದ ಅಯಾನ್ ಟಿನಮೇಕ‌ರ್, ಸರ್ಫರಾಜ್ ಟಿನಮೇಕ‌ರ್, ಆದಿಲ್​ ಸಕ್ಕರಖಾನ್, ಅಭಯ್ ಹುದಾರ್‌, ಸರ್ವೇಶ ಹಿರೇಮಠ ಮತ್ತು ಆಕಾಶ್ ಕುಂದನಗಾರ ಎಂಬ ಆರು ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 2:38 pm, Sat, 23 May 26

Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
Follow Us