ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಜಿಲ್ಲೆಯ ಕಾಂಗ್ರೆಸ್ ಮಹಾನಗರಪಾಲಿಕೆ ಸದಸ್ಯೆ ಉಮಾದೇವಿ ಅವರ ಪತಿ ಶಿವರಾಜ್ ವಿರುದ್ಧ ಬಡವರಿಗೆ ಭೂಮಿ ನೀಡುವ ನೆಪದಲ್ಲಿ ಮಹಾ ವಂಚನೆ ನಡೆಸಿದ ಆರೋಪ ಕೇಳಿಬಂದಿದೆ. ಬೂದಿಹಾಳ ಸರ್ವೇ ನಂಬರ್ 125ರಲ್ಲಿ ಸುಮಾರು 7.87 ಎಕರೆ ಸರ್ಕಾರಿ ಹಳ್ಳದ ಜಾಗವನ್ನು ಒತ್ತುವರಿ ಮಾಡಿ ಶಿವರಾಜ್ ಅವರು ಲೇಔಟ್ ನಿರ್ಮಿಸಿದ್ದರು. ಈ ಲೇಔಟ್‌ನಲ್ಲಿ ಬಡ ಕುಟುಂಬಗಳಿಗೆ ಒಂದೂವರೆಯಿಂದ ಎರಡು ಲಕ್ಷ ರೂಪಾಯಿಗಳಿಗೆ ಪ್ಲಾಟ್‌ಗಳನ್ನು ಮಾರಾಟ ಮಾಡಿದ್ದರು.
ಬಳ್ಳಾರಿ, ಮೇ 23: ಜಿಲ್ಲೆಯ ಕಾಂಗ್ರೆಸ್ ಮಹಾನಗರಪಾಲಿಕೆ ಸದಸ್ಯೆ ಉಮಾದೇವಿ ಅವರ ಪತಿ ಶಿವರಾಜ್ ವಿರುದ್ಧ ಬಡವರಿಗೆ ಭೂಮಿ ನೀಡುವ ನೆಪದಲ್ಲಿ ಮಹಾ ವಂಚನೆ ನಡೆಸಿದ ಆರೋಪ ಕೇಳಿಬಂದಿದೆ. ಬೂದಿಹಾಳ ಸರ್ವೇ ನಂಬರ್ 125ರಲ್ಲಿ ಸುಮಾರು 7.87 ಎಕರೆ ಸರ್ಕಾರಿ ಹಳ್ಳದ ಜಾಗವನ್ನು ಒತ್ತುವರಿ ಮಾಡಿ ಶಿವರಾಜ್ ಅವರು ಲೇಔಟ್ ನಿರ್ಮಿಸಿದ್ದರು. ಈ ಲೇಔಟ್‌ನಲ್ಲಿ ಬಡ ಕುಟುಂಬಗಳಿಗೆ ಒಂದೂವರೆಯಿಂದ ಎರಡು ಲಕ್ಷ ರೂಪಾಯಿಗಳಿಗೆ ಪ್ಲಾಟ್‌ಗಳನ್ನು ಮಾರಾಟ ಮಾಡಿದ್ದರು.
ಜನರು ಸಾಲ ಮಾಡಿ ಮನೆಗಳನ್ನು ನಿರ್ಮಿಸಿಕೊಂಡ ನಂತರ, ಜಿಲ್ಲಾಡಳಿತವು ತೆರವು ಕಾರ್ಯಾಚರಣೆಗೆ ಮುಂದಾಗಿದೆ. ಇದರಿಂದ ವಂಚನೆಗೆ ಒಳಗಾದ ಬಡ ಕುಟುಂಬಗಳು ಬೀದಿಪಾಲಾಗಿವೆ. ನಮ್ಮದೇ ಸರ್ಕಾರವಿದೆ, ಭಯಪಡಬೇಡಿ ಎಂದು ಭರವಸೆ ನೀಡಿ ಶಿವರಾಜ್ ಹಣ ಪಡೆದಿದ್ದರು ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಇದೀಗ ಸಂತ್ರಸ್ತರು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

