ಹೆತ್ತವರಿಗೆ ಪಾದಪೂಜೆ, ಮಕ್ಕಳ ಸೇವೆಗೆ ಪೋಷಕರ ಆನಂದಭಾಷ್ಪ

ಹೆತ್ತವರಿಗೆ ಪಾದಪೂಜೆ, ಮಕ್ಕಳ ಸೇವೆಗೆ ಪೋಷಕರ ಆನಂದಭಾಷ್ಪ

ಶಿವಮೊಗ್ಗ: ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಭಕ್ತಿ ಭಾವದಿಂದ ಪಾದಪೂಜೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ವಿದ್ಯಾರ್ಥಿಗಳುತಮ್ಮನ್ನ ಹೆತ್ತು ಹೊತ್ತು ಸಾಕಿದವರ ಪಾದಪೂಜೆ ಮಾಡುತ್ತಿರುವ ದೃಶ್ಯ ಕಂಡು ಬಂದಿದ್ದು ಶಿವಮೊಗ್ಗ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ. ಈ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ತಂದೆ ತಾಯಿಗಳು ಪಾದಪೂಜೆ ಮಾಡಿ ಅವರ ಆಶೀರ್ವಾದ ಪಡೆದ್ರು. ಪೂಜಾ ಸಮಾಗ್ರಿಗಳನ್ನು ತಂದು ಶಾಲಾ ಆವರಣದಲ್ಲಿ ಪಾದ ಪೂಜೆ ಮಾಡಿದ್ರು. ಮಕ್ಕಳಿಗೆ ಶಾಲೆಯಲ್ಲಿ ಸಿಗುವ ಸಂಸ್ಕಾರವೇ ಮಕ್ಕಳ ಜೀವನದ ದಾರಿಯನ್ನು ಬದಲಿಸುತ್ತದೆ ಅನ್ನೋ ಗುರಿ ಇಟ್ಕೊಂಡು ಶಾಲಾ ಆಡಳಿತ ಮಂಡಳಿ ಈ ಕಾರ್ಯಕ್ರಮ ಆಯೋಜಿಸಿತ್ತು.

ಸತತ 15 ವರ್ಷದಿಂದ ಈ ಶಾಲೆಯಲ್ಲಿ ಮಕ್ಕಳಿಗೆ ಪಾದಪೂಜೆ ಮಾಡುವ ಸಂಪ್ರದಾಯ ರೂಡಿಸಿಕೊಂಡು ಬಂದಿದೆ. ಹೊಸ ವರ್ಷದಂದು ಹೆತ್ತವರ ಪಾದ ಪೂಜೆ ಮಾಡಿದ್ರೆ, ಮಕ್ಕಳಿಗೆ ವರ್ಷ ಪೂರ್ತಿ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ. ಇನ್ನು ತಮ್ಮ ತಮ್ಮ ಮಕ್ಕಳು ಹೀಗೆ ಬಹಿರಂಗವಾಗಿ ಪಾದಪೂಜೆ ಮಾಡಿಸಿಕೊಂಡ ಪೋಷಕರ ಕಣ್ಣುಗಳಲ್ಲಿ ಆನಂದಭಾಷ್ಪ ಹರಿಯಿತು.

ಆಧುನಿಕ ಜೀವನದ ಭರಾಟೆಯಲ್ಲಿ ತಂದೆ ತಾಯಿ ಮತ್ತು ಮಕ್ಕಳ ನಡುವಿನ ಸಂಬಂಧ ಹಾಗೂ ಮೌಲ್ಯಗಳು ಕಡಿಮೆಯಾಗುತ್ತಿವೆ. ಹೀಗಾಗಿ ಮಕ್ಕಳಲ್ಲಿ ತಮ್ಮ ತಂದೆ ತಾಯಿಗಳ ಮೇಲೆ ಗೌರವ ಹೆಚ್ಚಿಸಲು ಮಾಡಿದ ಈ ಕಾರ್ಯಕ್ರಮ ಅರ್ಥ ಪೂರ್ಣವಾಗಿತ್ತು.

Click on your DTH Provider to Add TV9 Kannada