
ಶಿವಮೊಗ್ಗ, ಅ.12: ರೈಲು ಪ್ರಯಾಣಿಕರ ಭದ್ರತೆ, ಸುರಕ್ಷತೆ ಹಾಗೂ ಸುಖಕರ ಪ್ರಯಾಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು (South Western Railway) ಮಹತ್ವದ ನಿರ್ಧಾರ ಕೈಗೊಂಡಿದೆ. ಸಾಂಪ್ರದಾಯಿಕ ಐಸಿಎಫ್ (ICF) ಬೋಗಿಗಳ ಬದಲಾಗಿ ಅತ್ಯಾಧುನಿಕ, ಸುಸಜ್ಜಿತ ಲಿಂಕೆ ಹಾಫ್‌ಮನ್ ಬುಷ್ (LHB) ಜರ್ಮನ್ ತಂತ್ರಜ್ಞಾನದ ಬೋಗಿಗಳನ್ನು 6 ಪ್ರಮುಖ ಜೋಡಿ ರೈಲುಗಳಿಗೆ ಅಳವಡಿಸಲು ನಿರ್ಧರಿಸಿದೆ. ಅಕ್ಟೋಬರ್ 20 ರಿಂದ ಹಂತ ಹಂತವಾಗಿ ಈ ನೂತನ ಎಲ್‌ಎಚ್‌ಬಿ ಬೋಗಿಗಳು ಸಂಚಾರ ಆರಂಭಿಸಲಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ ಅನುಭವ ನೀಡಲಿವೆ.
ಮೈಸೂರಿನಿಂದ: ಅಕ್ಟೋಬರ್ 20, 2026 ರಿಂದ
ತಾಳಗುಪ್ಪದಿಂದ: ಅಕ್ಟೋಬರ್ 21, 2026 ರಿಂದ
ತಾಳಗುಪ್ಪದಿಂದ: ಅಕ್ಟೋಬರ್ 21, 2026 ರಿಂದ
ಶಿವಮೊಗ್ಗದಿಂದ: ಅಕ್ಟೋಬರ್ 21, 2026 ರಿಂದ
ನಂಜನಗೂಡಿನಿಂದ: ಅಕ್ಟೋಬರ್ 22, 2026 ರಿಂದ
ಮೈಸೂರಿನಿಂದ: ಅಕ್ಟೋಬರ್ 22, 2026 ರಿಂದ
ಮೈಸೂರಿನಿಂದ: ಅಕ್ಟೋಬರ್ 22, 2026 ರಿಂದ
ಚಾಮರಾಜನಗರದಿಂದ: ಅಕ್ಟೋಬರ್ 24, 2026 ರಿಂದ
ಚಾಮರಾಜನಗರದಿಂದ: ಅಕ್ಟೋಬರ್ 22, 2026 ರಿಂದ
ತಿರುಪತಿಯಿಂದ: ಅಕ್ಟೋಬರ್ 23, 2026 ರಿಂದ
ತಿರುಪತಿಯಿಂದ: ಅಕ್ಟೋಬರ್ 23, 2026 ರಿಂದ
ಚೆನ್ನೈ ಸೆಂಟ್ರಲ್‌ನಿಂದ: ಅಕ್ಟೋಬರ್ 23, 2026 ರಿಂದ
ಹಳೆಯ ವ್ಯವಸ್ಥೆ (21 ಬೋಗಿಗಳು): 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 2 ಎಸಿ 3-ಟೈರ್, 10 ಸ್ಲೀಪರ್, 5 ಜನರಲ್ ಹಾಗೂ 2 ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಬೋಗಿಗಳು. ನೂತನ ಎಲ್‌ಎಚ್‌ಬಿ ವ್ಯವಸ್ಥೆ (19 ಬೋಗಿಗಳು) ಮಾಡಲಾಗಿದೆ. 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 3 ಎಸಿ 3-ಟೈರ್, 7 ಸ್ಲೀಪರ್, 5 ಜನರಲ್, 1 ದಿವ್ಯಾಂಗ ಸ್ನೇಹಿ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಬೋಗಿ ಹಾಗೂ 1 ಜನರೇಟರ್ ಕಾರ್ ಬೋಗಿ ಇರಲಿದೆ. ಇನ್ನು ಇಲಾಖೆ ಪ್ರಮುಖ ಸೂಚನೆಯನ್ನು ಕೂಡ ನೀಡಿ ರೈಲು ಸಂಖ್ಯೆ 56217/56218, 56205/56206 ಮತ್ತು 56203/56204 ರ ಎಸಿ ಬೋಗಿಗಳನ್ನು ಅಗತ್ಯವಿದ್ದರೆ ಲಾಕ್ ಮಾಡಿದ ಸ್ಥಿತಿಯಲ್ಲಿ ಕೊಂಡೊಯ್ಯಲಾಗುತ್ತದೆ ಎಂದು ನೈಋತ್ಯ ರೈಲ್ವೆ ಸ್ಪಷ್ಟಪಡಿಸಿದೆ).
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ