ರಾಜ್ಯದಲ್ಲಿರುವುದು 8-10 ಪರ್ಸೆಂಟ್ ಕಮಿಷನ್ ಸರ್ಕಾರ: ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ

ಜಮೀರ್ ಹೃದಯವಂತ ರಾಜಕಾರಣಿ. ಶಕ್ತಿ ಮೀರಿ ಸಹಾಯ ಮಾಡುತ್ತಿದ್ದಾರೆ. ಇಂತಹ ಶಾಸಕನನ್ನ ಪಡೆದಿರುವ ಚಾಮರಾಜಪೇಟೆ ಜನರು ಧನ್ಯರು. ಎರಡನೇ ಅಲೆ ಬರುತ್ತೆ ಅಂತ ತಜ್ಞರು ವರದಿ ಕೊಟ್ಟಿದ್ರು. ಆದ್ರೆ ಸರ್ಕಾರ ಆ ವರದಿಯನ್ನ ನಿರ್ಲಕ್ಷ್ಯ ಮಾಡಿತು. ಇದರ ಪರಿಣಾಮದಿಂದ ಎರಡನೇ ಅಲೆಯಲ್ಲಿ ತೊಂದರೆ ಎದುರಿಸಬೇಕಾಯ್ತು.

ರಾಜ್ಯದಲ್ಲಿರುವುದು 8-10 ಪರ್ಸೆಂಟ್ ಕಮಿಷನ್ ಸರ್ಕಾರ: ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Follow us
TV9 Web
| Updated By: sandhya thejappa

Updated on: Jun 19, 2021 | 2:33 PM

ಬೆಂಗಳೂರು: ರಾಜ್ಯದಲ್ಲಿ ಇರುವುದು ಎಂಟರಿಂದ ಹತ್ತು ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕಮಿಷನ್ ಸರ್ಕಾರವಾಗಿದೆ ಎಂದು ಆರೋಪಿಸಿದ್ದಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ ಮಾತ್ರ ಕಮಿಷನ್ ಪಡೀತಿಲ್ಲ, ಪಿಡಬ್ಲೂಡಿ ಸೇರಿ ಎಲ್ಲ ಇಲಾಖೆಗಳಲ್ಲೂ ಕಮಿಷನ್ ಪಡಿಯುತ್ತಿದ್ದಾರೆ. ಕಮಿಷನ್ ತೆಗೆದುಕೊಂಡೇ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ವಿಜಯೇಂದ್ರ ಪಾಲು ಎಷ್ಟಿದೆ ಎಂದು ಗೊತ್ತಿಲ್ಲ ಎಂದು ಹೇಳಿದರು.

ಜಮೀರ್ ಹೃದಯವಂತ ರಾಜಕಾರಣಿ. ಶಕ್ತಿ ಮೀರಿ ಸಹಾಯ ಮಾಡುತ್ತಿದ್ದಾರೆ. ಇಂತಹ ಶಾಸಕನನ್ನ ಪಡೆದಿರುವ ಚಾಮರಾಜಪೇಟೆ ಜನರು ಧನ್ಯರು. ಎರಡನೇ ಅಲೆ ಬರುತ್ತೆ ಅಂತ ತಜ್ಞರು ವರದಿ ಕೊಟ್ಟಿದ್ರು. ಆದ್ರೆ ಸರ್ಕಾರ ಆ ವರದಿಯನ್ನ ನಿರ್ಲಕ್ಷ್ಯ ಮಾಡಿತು. ಇದರ ಪರಿಣಾಮದಿಂದ ಎರಡನೇ ಅಲೆಯಲ್ಲಿ ತೊಂದರೆ ಎದುರಿಸಬೇಕಾಯ್ತು. ಬೆಡ್, ಆಕ್ಸಿಜನ್, ವೆಂಟಿಲೇಟರ್, ಐಸಿಯು ಸಿಗದೆ ಮೃತಪಟ್ಟರು. ಜನರ ಪ್ರಾಣ ರಕ್ಷಣೆ ಮಾಡಬೇಕಾದದ್ದು ಸರ್ಕಾರದ ಕರ್ತವ್ಯ ಎಂದು ವಿಪಕ್ಷ ನಾಯಕ ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದೆ. ಜನರ ಆರೋಗ್ಯ ಕಾಪಾಡುವುದು ಅವರ ಜವಾಬ್ದಾರಿ. ಕಾಂಗ್ರೆಸ್ ಪಕ್ಷದ ವತಿಯಿಂದ ಸರ್ಕಾರಕ್ಕೆ ನಾನು ಮನವಿ ಮಾಡಿದ್ದೆ. ಜನರಿಗೆ 10 ಕೆ.ಜಿ ರೇಷನ್, 10 ಸಾವಿರ ಕೊಡಿ ಅಂದಿದ್ದೆ. ಒಂದು ಕೋಟಿಗೂ ಹೆಚ್ಚು ಬಿಪಿಎಲ್ ಕಾರ್ಡ್ ಹೋಲ್ಡರ್ ಇದ್ದಾರೆ. ಇವರೆಲ್ಲರಿಗೂ 10 ಸಾವಿರ ಪರಿಹಾರ ಕೊಡಿ ಅಂದಿದ್ದೆ. ಚಿಲ್ಲರೆ ದುಡ್ ಕೊಡ್ತೀವಿ ಅಂತ ಅನೌನ್ಸ್ ಮಾಡಿದ್ದಾರೆ. ಅದು ಕೂಡಾ ಸಿಕ್ಕಿಲ್ಲ ಎಂದು ತಿಳಿಸಿದರು.

ಕೊವಿಡ್ ನಿಯಂತ್ರಿಸುವುದಕ್ಕೆ 130 ಕೋಟಿ ಜನರಿಗೆ ವ್ಯಾಕ್ಸಿನ್ ಸಿಗಬೇಕು. ಅನೇಕ ದೇಶಗಳು ವ್ಯಾಕ್ಸಿನ್ ಹಂಚಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆರೂವರೆ ಕೋಟಿ ವ್ಯಾಕ್ಸಿನ್ ಬೇರೆ ದೇಶಕ್ಕೆ ಯಾಕೆ ಕೊಟ್ರಿ. ನಮ್ಮ ದೇಶದ ಜನರಿಗೆ ಮೊದಲು ವ್ಯಾಕ್ಸಿನ್ ಕೊಡಿ. ಹೊಟ್ಟೆಗೆ ಹಿಟ್ಟಿಲ್ಲ ಅಂದ್ರೂ ಜುಟ್ಟಿಗೆ ಮಲ್ಲಿಗೆ ಹೂವು ಅನ್ನೋ ಹಾಗೇ ಮಾಡಿದ್ರಿ. ಈ ಸರ್ಕಾರಕ್ಕೆ ಸತ್ತವರ ಅಂತ್ಯಸಂಸ್ಕಾರ ಮಾಡೋಕೆ ಆಗಿಲ್ಲ. ಸತ್ತವರ ಸಂಖ್ಯೆಯಲ್ಲಿ ಸುಳ್ಳು ಹೇಳಿದ್ರು. ಈ ಸರ್ಕಾರ ಹಸಿ ಸುಳ್ಳು ಹೇಳೋದ್ರಲ್ಲಿ ಎಕ್ಸ್​ಪರ್ಟ್​ ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಸರ್ಕಾರ ಇದ್ದಿದ್ದರೆ 10 ಕೆಜಿ ಉಚಿತ ಅಕ್ಕಿ ಕೊಡುತ್ತಿದ್ದೆ. ನಮ್ಮ ಸರ್ಕಾರ ಮತ್ತೆ ಬಂದರೆ ತಲಾ 10 ಕೆಜಿ ಅಕ್ಕಿ ಕೊಡುತ್ತೀವಿ. ಇಂದಿರಾ ಕ್ಯಾಂಟೀನ್ ಹೆಚ್ವು ಮಾಡುತ್ತೀವಿ. ಇವರಿಗೆ ಇಂದಿರಾ ಕ್ಯಾಂಟೀನ್ ಕಂಡರೆ ವಾಕರಿಕೆ. ಇವರು ಬಡವರ ವಿರೋಧಿಗಳು. ಕೊರೊನಾ ಇರಲಿ, ಇಲ್ಲದಿರಲಿ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ಹೇಳಿದ ವಿಪಕ್ಷ ನಾಯಕ, ಎಲ್ಲರೂ ವ್ಯಾಕ್ಸಿನ್ ತಗೋಳಿ. ಕಡ್ಡಾಯವಾಗಿ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಿ ಎಂದರು.

ಇದನ್ನೂ ಓದಿ

ಕೊರೊನಾ ಮೂರನೇ ಅಲೆಯ ಮುನ್ನವೇ ನಡೆಯಲಿದೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ

100 ವರ್ಷಕ್ಕೊಮ್ಮೆ ಈ ರೀತಿ ಸಮಸ್ಯೆ ಬರುತ್ತೆ; ಇಂಥಾ ಸಮಯದಲ್ಲಿ ನನಗೆ ಸಹಾಯ ಮಾಡುವ ಅವಕಾಶ ಸಿಕ್ಕಿದೆ: ಶಾಸಕ ಜಮೀರ್ ಅಹ್ಮದ್

(Siddaramaiah accused the government of being an 8 to 10 Percent Commission in the state)