ಇನ್ಸುಲಿನ್ ಮರೆತು ವಿ. ನಿಲ್ದಾಣದಲ್ಲಿ 1 ಗಂಟೆಯಿಂದ ಆತಂಕದಲ್ಲಿರುವ ಸಿದ್ದರಾಮಯ್ಯ
ಬೆಳಗಾವಿ: ಕುಂದಾನಗರಿಗೆ ಭೇಟಿ ಕೊಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಜೊತೆ ಅತ್ಯಗತ್ಯವಾಗಿರುವ ಇನ್ಸುಲಿನ್ ಔಷಧಿ ತರುವುದನ್ನು ಮರೆತು ಆತಂಕದ ಕ್ಷಣಗಳನ್ನು ಎದುರಿಸುವಂತಾಗಿದೆ. ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿರುವ ಸಿದ್ದರಾಮಯ್ಯ ತಮ್ಮ ಮಧುಮೇಹ ಕಾಯಿಲೆಗೆ ಇನ್ಸುಲಿನ್ ತಗೆದುಕೊಳ್ಳುತ್ತಾರೆ. ಆದರೆ ತಮ್ಮೊಟ್ಟಿಗೆ ಇನ್ಸುಲಿನ್ ತರುವುದನ್ನು ಮರೆತ ನಾಯಕರು ಔಷಧಿಗಾಗಿ ಒಂದು ಗಂಟೆಯ ಕಾಲ ಕಾದು ಕೂರುವ ಆತಂಕದ ಸ್ಥಿತಿ ಎದುರಾಯ್ತು. ನಾಯಕರ ಪರಿಸ್ಥಿತಿ ಕಂಡ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬೆಳಗಾವಿ ನಗರದಿಂದ ಇನ್ಸುಲಿನ್ ತಂದು ನೀಡಿದ. ಆದರೆ ನಾನು ಬಳಸುವ […]

ಬೆಳಗಾವಿ: ಕುಂದಾನಗರಿಗೆ ಭೇಟಿ ಕೊಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಜೊತೆ ಅತ್ಯಗತ್ಯವಾಗಿರುವ ಇನ್ಸುಲಿನ್ ಔಷಧಿ ತರುವುದನ್ನು ಮರೆತು ಆತಂಕದ ಕ್ಷಣಗಳನ್ನು ಎದುರಿಸುವಂತಾಗಿದೆ.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿರುವ ಸಿದ್ದರಾಮಯ್ಯ ತಮ್ಮ ಮಧುಮೇಹ ಕಾಯಿಲೆಗೆ ಇನ್ಸುಲಿನ್ ತಗೆದುಕೊಳ್ಳುತ್ತಾರೆ. ಆದರೆ ತಮ್ಮೊಟ್ಟಿಗೆ ಇನ್ಸುಲಿನ್ ತರುವುದನ್ನು ಮರೆತ ನಾಯಕರು ಔಷಧಿಗಾಗಿ ಒಂದು ಗಂಟೆಯ ಕಾಲ ಕಾದು ಕೂರುವ ಆತಂಕದ ಸ್ಥಿತಿ ಎದುರಾಯ್ತು.
ನಾಯಕರ ಪರಿಸ್ಥಿತಿ ಕಂಡ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬೆಳಗಾವಿ ನಗರದಿಂದ ಇನ್ಸುಲಿನ್ ತಂದು ನೀಡಿದ. ಆದರೆ ನಾನು ಬಳಸುವ ಇನ್ಸುಲಿನ್ ಬೇರೆ ಎಂದು ಸಿದ್ದರಾಮಯ್ಯ ಅದನ್ನು ನಿರಾಕರಿಸಿದರು. ಹಾಗಾಗಿ, ಸಿದ್ದರಾಮಯ್ಯಗೆ ಇನ್ಸುಲಿನ್ ತರಿಸಲು ಮಾಜಿ ಶಾಸಕ ಅಶೋಕ್ ಪಟ್ಟಣ್ ಹರಸಾಹಸ ಪಡುತ್ತಿದ್ದಾರೆ. ಇನ್ನೂ ಸಿದ್ದರಾಮಯ್ಯ ಅವರಿಗೆ ಅಗತ್ಯವಿರುವ ಇನ್ಸುಲಿನ್ ದೊರೆತಿಲ್ಲ.
‘ಔಷಧಿ ಕೊಟ್ಟರು ಆದರೆ ಸೂಜಿ ಕೊಡಲಿಲ್ಲ’ ನಾನು ಡಯಾಬಿಟಿಕ್. ಇನ್ಸುಲಿನ್ ತಗೋಬೇಕು. ಅದರೆ, ಅದನ್ನು ಮನೆಯಲ್ಲಿ ಹಾಕಿಯೇ ಇಲ್ಲ. ಹಾಗಾಗಿ, ಅದನ್ನ ತರಲು ನಗರಕ್ಕೆ ಕಳಿಸಿದ್ದೆ. ಅವರು ಇನ್ಸುಲಿನ್ ಕೊಟ್ಟಿದ್ದಾರೆ, ಆದರೆ ನೀಡಲ್ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
Published On - 10:48 am, Mon, 19 October 20



