
ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿಯಲಾಗಿದೆ. 2023 ರಲ್ಲಿ ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಮಾಳಿಂಗರಾಯ ದೇವಸ್ಥಾನದ ಅರ್ಚಕರು ಭವಿಷ್ಯ ನುಡಿದಿದ್ದಾರೆ.
ಮಾಳಿಂಗರಾಯ ದೇವಸ್ಥಾನದ ಅರ್ಚಕ ಕೆಂಚಪ್ಪ ಪೂಜಾರಿ ಈ ಭವಿಷ್ಯ ನುಡಿದಿದ್ದಾರೆ. ಮಾಳಿಂಗರಾಯ ಕಂಬಳಿ ಬಿಸಿ ಮಳೆ ತರಿಸಿದ್ದಾರೆ ಬಿಜಗುಂದಿಯಲ್ಲಿ, ಬೆಂಗಳೂರಿನ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮತ್ತೆ ಕಂಬಳಿ ಬೀಸುತ್ತೆ, ಮಾಳಿಂಗರಾಯ ದೇವಸ್ಥಾನದ ಎಲ್ಲಾ ಪೂಜಾರಿಗಳ ಧ್ವನಿ ಇದು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾಲಹಳ್ಳಿಯಲ್ಲಿ ಭವಿಷ್ಯ ನುಡಿದಿದ್ದು, ಮಾಳಿಂಗರಾಯ ಕಲ್ಯಾಣ ಮಂಟಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಮುಂದೆ ಸಿದ್ದರಾಮಯ್ಯ ಸಿಎಂ ಆಗಿ ಬಂದ ಮೇಲೆ ಇದ್ದಕ್ಕಿಂತ ದೊಡ್ಡ ಕಾರ್ಯಕ್ರಮ ಮಾಡೋದಿದೆ ಎಂದು ಅರ್ಚಕರು ಹೇಳಿದ್ದಾರೆ.