ಕಲಾಪ್ರಿಯರನ್ನು ಸೆಳೆಯುತ್ತಿದೆ ಉಡುಪಿಯ ಚಿತ್ರಾಲಯ ಆರ್ಟ್ ಗ್ಯಾಲರಿ; ಮಣ್ಣಿನಲ್ಲಿಯೇ ತಯಾರಾಗುತ್ತೆ ವಿಶಿಷ್ಟ ಕಲಾಕೃತಿ

ಆವೆ ಮಣ್ಣು ತಂದು ಹದವಾಗಿ ಕಲಸಿ ಅದನ್ನು ಗಡಿಗೆಯಿಂದ ಬಡಿದು ನಂತರ ನುನುಪಾದ ಮಣ್ಣಿನಿಂದ, ತಮ್ಮ ಕಲ್ಪನೆಯನ್ನು ಕೈಯಲ್ಲಿ ಮೂಡಿಸುವ ಇವರ ಕೈಚಳಕ ನೋಡುಗರನ್ನು ನೆಬ್ಬೆರಗಾಗಿಸುತ್ತದೆ. ಚಿತ್ರಾಲಯದಲ್ಲಿ ಮಣ್ಣು ಮೂರ್ತಿಯಾಗಿ ಅರಳಿರುವ ಈ ಕಲಾಕೃತಿಗಳು ಕಲಾಪ್ರೇಮಿಗಳ ಮನಸ್ಸಿನೊಂದಿಗೆ ಮಾತನಾಡುತ್ತದೆ ಎನ್ನುವುದು ವಿಶೇಷ.

ಕಲಾಪ್ರಿಯರನ್ನು ಸೆಳೆಯುತ್ತಿದೆ ಉಡುಪಿಯ ಚಿತ್ರಾಲಯ ಆರ್ಟ್ ಗ್ಯಾಲರಿ; ಮಣ್ಣಿನಲ್ಲಿಯೇ ತಯಾರಾಗುತ್ತೆ ವಿಶಿಷ್ಟ ಕಲಾಕೃತಿ
ಕಲಾಪ್ರಿಯರನ್ನು ಸೇಳೆಯುತ್ತಿದೆ ಉಡುಪಿಯ ಚಿತ್ರಾಲಯ ಆರ್ಟ್ ಗ್ಯಾಲರಿ
Follow us
TV9 Web
| Updated By: preethi shettigar

Updated on:Jul 05, 2021 | 9:26 AM

ಉಡುಪಿ: ಕರಾವಳಿ ಭಾಗಕ್ಕೆ ಪ್ರವಾಸಕ್ಕೆ ಹೋಗುವವರ ಮೊದಲ ಆಯ್ಕೆ ಸಮುದ್ರ ತಾಣಗಳಾಗಿರುತ್ತದೆ. ಅದರಲ್ಲೂ ಉಡುಪಿ ಜಿಲ್ಲೆಗೆ ಹೋಗುವ ಪ್ರವಾಸಿಗರು, ದೇವಸ್ಥಾನಗಳಿಗೆ, ಸಮುದ್ರಕ್ಕೆ ಹೋಗೋದು ಸಾಮಾನ್ಯ. ಆದರೀಗ ಇಲ್ಲಿನ ಪ್ರವಾಸಿಗರನ್ನು ಅದರಲ್ಲೂ ಕಲಾಪ್ರೇಮಿಗಳನ್ನು ಚಿತ್ರಾಲಯ ಎನ್ನುವ ಕಲಾ ಗ್ಯಾಲರಿ ಕೈ ಬೀಸಿ ಕರೆಯುತ್ತಿದೆ. ಚಿತ್ರಾಲಯದ ನೂರಾರು ವಿಶಿಷ್ಟ ಕಲಾಕೃತಿಗಳು, ವಿವಿಧ ರೀತಿಯ ಸಂದೇಶಗಳನ್ನು ನೀಡುವುದರ, ಜತೆಗೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ಉಡುಪಿ ಜಿಲ್ಲೆಯ ಪಲಿಮಾರು ಚಿತ್ರಾಲಯ ಆರ್ಟ್ ಗ್ಯಾಲರಿಯಲ್ಲಿ ಕುದುರೆ, ವಿಶ್ವೇಶ್ವರಯ್ಯ, ನಂದಿ ಸಹಿತ ನೂರಾರು ಮಣ್ಣಿನ ಕಲಾಕೃತಿಗಳಿದ್ದು, ವೆಂಕಟರಮಣ ಕಾಮತ್ ಎನ್ನುವವರು ಈ ಕಲಾಕೃತಿಗಳನ್ನು ತಯಾರಿಸುತ್ತ್ತಿದ್ದಾರೆ. ವೆಂಕಿ ಪಲಿಮಾರ್ ಎಂದು ಕರೆಸಿಕೊಳ್ಳುವ ಈ ಕಲಾವಿದ ಬಾಲ್ಯದಿಂದಲೂ ಮಣ್ಣಿನೊಂದಿಗೆ ಆಟವಾಡುತ್ತಾ ಇಂತಹ ವಿಶಿಷ್ಟ ಕಲೆಯನ್ನು ಏಕಲವ್ಯನಂತೆ ಗುರು ಇಲ್ಲದೇ ಕಲಿತಿದ್ದಾರೆ .

ಆವೆ ಮಣ್ಣು ತಂದು ಹದವಾಗಿ ಕಲಸಿ ಅದನ್ನು ಗಡಿಗೆಯಿಂದ ಬಡಿದು ನಂತರ ನುನುಪಾದ ಮಣ್ಣಿನಿಂದ, ತಮ್ಮ ಕಲ್ಪನೆಯನ್ನು ಕೈಯಲ್ಲಿ ಮೂಡಿಸುವ ಇವರ ಕೈಚಳಕ ನೋಡುಗರನ್ನು ನೆಬ್ಬೆರಗಾಗಿಸುತ್ತದೆ. ಚಿತ್ರಾಲಯದಲ್ಲಿ ಮಣ್ಣು ಮೂರ್ತಿಯಾಗಿ ಅರಳಿರುವ ಈ ಕಲಾಕೃತಿಗಳು ಕಲಾಪ್ರೇಮಿಗಳ ಮನಸ್ಸಿನೊಂದಿಗೆ ಮಾತನಾಡುತ್ತದೆ ಎನ್ನುವುದು ವಿಶೇಷ.

ವೃತ್ತಿಯಲ್ಲಿ ಡ್ರಾಯಿಂಗ್ ಅಧ್ಯಾಪಕರಾಗಿರುವ ವೆಂಕಟರಮಣ ಅವರ ಕೈಯಲ್ಲಿ ಅರಳಿದ ತುಳುನಾಡಿನ ಭೂತಾರಾದನೆ, ಯಕ್ಷಗಾನ, ಕಂಬಳ, ಜನಪದ ಸಂಸ್ಕ್ರತಿ, ಗ್ರಾಮೀಣ ಬದುಕು, ಸಹಿತ ಬುದ್ಧ, ವಿಶ್ವೇಶ್ವರಯ್ಯ, ಮೀರಾ ಬಾಯಿ ಮುಂತಾದ ಕಲಾಕೃತಿಗಳು ವಿಶೇಷವಾಗಿ ಆಕರ್ಷಿಸುತ್ತದೆ. ವೆಂಕಟರಮಣ ಅವರು ಮಣ್ಣಿನಿಂದ ಕಲಾಕೃತಿಗಳನ್ನು ತಯಾರಿಸುವುದು ಮಾತ್ರವಲ್ಲದೇ, ಜಲವರ್ಣ, ಮರಳುಶಿಲ್ಪ, ತೈಲವರ್ಣ ಥರ್ಮಕೋಲ್ ಕಲಾಕೃತಿಗಳನ್ನು ರಚಿಸುವುದರಲ್ಲೂ ನೈಪುಣ್ಯತೆ ಗಳಿಸಿದ್ದಾರೆ.

ವೆಂಕಟರಮಣ ಅವರು ಆಸಕ್ತರಿಗೆ ಉಚಿತವಾಗಿ ಈ ವಿಶೇಷ ಕಲೆಯನ್ನು ಹೇಳಿಕೊಡುತ್ತಿದ್ದು, ದೇಶ ವಿದೇಶಗಳಿಂದಲೂ ಇವರಿದಲ್ಲಿಗೆ ಬಂದು ಅನೇಕರು ಮಣ್ಣಿನ ಕಲೆ ತರಬೇತಿ ಪಡೆದುಕೊಳ್ಳುತ್ತಿದ್ದಾರೆ ಎಂದು ತರಬೇತಿ ಪಡೆಯುತ್ತಿರುವ ಶಕುಂತಲಾ ಶೆಣೈ ಹೇಳಿದ್ದಾರೆ.

ಸದ್ಯ ಈ ವಿಶೇಷ ಕಲಾಕೃತಿಗಳನ್ನು ನೋಡಲು, ಕಲಾಸಕ್ತರು ಬರುತ್ತಿದ್ದು, ನೀವು ಕೂಡ ಉಡುಪಿ ಕಡೆ ಬಂದರೆ ಈ ಚಿತ್ರಾಯಲಕ್ಕೆ ಒಮ್ಮೆ ಭೇಟಿ ನೀಡಿ, ವಿಶೇಷ ಅನುಭವ ಪಡೆದುಕೊಳ್ಳಿ. ಮಣ್ಣಿನ ಕಲೆಯಲ್ಲಿ ಆಸಕ್ತಿ ಇದ್ದರೆ ವೆಂಕಟರಮಣ ಕಾಮತ್​ ಅವರ ಬಳಿ ಉಚಿತವಾಗಿ ತರಬೇತಿಯನ್ನು ಪಡೆದುಕೊಳ್ಳಿ.

ಇದನ್ನೂ ಓದಿ: ಶಿವಮೊಗ್ಗ ರಂಗಾಯದಲ್ಲಿ ಕಲಾಕೃತಿಗಳ ಅನಾವರಣ: ಸಿಮೆಂಟ್​ನಲ್ಲಿ ನಿರ್ಮಾಣವಾದ ಕಲೆಗೆ ಮನಸೋತ ಸ್ಥಳೀಯರು

ತ್ಯಾಜ್ಯಾ ವಸ್ತುಗಳಿಗೆ ಸಿಕ್ತು ಮರುಜೀವ: ಚಿತ್ರಕಲಾ ಶಿಕ್ಷಕಿಯ ಮಾರ್ಗದರ್ಶನದಲ್ಲಿ ನೂರಾರು ಕಲಾಕೃತಿಗಳನ್ನ ತಯಾರಿಸಿದ ಶಾಲಾ ಮಕ್ಕಳು‌..!

Published On - 9:10 am, Mon, 5 July 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ