ಪಂಡರಾಪುರದ ಐತಿಹಾಸಿಕ ವಿಠಲ ಜಾತ್ರೆಗೆ ಕರ್ನಾಟಕದಿಂದ ತೆರಳುವ ಭಕ್ತರಿಗೆ ವಿಶೇಷ ಬಸ್ ವ್ಯವಸ್ಥೆ, ಗಮನಿಸಬೇಕಾದ ಅಂಶ ಇಲ್ಲಿದೆ
ಆಷಾಢ ಏಕಾದಶಿಯಂದು ಮಹಾರಾಷ್ಟ್ರದ ಪಂಡರಾಪುರದ ಐತಿಹಾಸಿಕ ವಿಠಲ ಜಾತ್ರೆಗೆ ಕರ್ನಾಟಕದಿಂದ ಹೋಗಲು ಬಯಸುವ ಭಕ್ತರಿಗೆ ವಿಶೇಷ ಸಾರಿಗೆ ಬಸ್ಗಳ ವ್ಯವಸ್ಥೆಯನ್ನು ಕೆಎಸ್ಆರ್ಟಿಸಿ ಕಲ್ಪಿಸುತ್ತಿದೆ. ಗಮನದಲ್ಲಿಡಬೇಕಾದ ಅಂಶಗಳು ಇಲ್ಲಿವೆ ನೋಡಿ.

ವಿಜಯಪುರ: ಆಷಾಢ ಏಕಾದಶಿಯಂದು ಮಹಾರಾಷ್ಟ್ರದ ಪಂಡರಾಪುರದ ಐತಿಹಾಸಿಕ ವಿಠಲ ಜಾತ್ರೆ (Pandharpur Vitthal Festival)ಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಕೊರೋನಾ ಸೋಂಕು ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಕಾಣಿಸಿಕೊಳ್ಳದ ಈ ಆಚರಣೆಯನ್ನು ಈ ಬಾರಿ ನಡೆಸಲು ವಿಠಲ ದೇವಸ್ಥಾನ ಸಜ್ಜಾಗಿದೆ. ಈ ಜಾತ್ರೆಗೆ ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಈ ಮಹೋತ್ಸವದಲ್ಲಿ ಭಾಗವಹಿಸಲು ಹೋಗುವವರಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮುಂದಾಗಿದೆ. ವಿಜಯಪುರ ನಗರದಿಂದ ಜಾತ್ರೆಗೆ ತೆರಳುವ ಭಕ್ತರಿಗೆ ಸಾರಿಗೆ ಇಲಾಖೆ ಸೌಲಭ್ಯ ಕಲ್ಪಿಸುತ್ತಿದೆ.
ಇದನ್ನೂ ಓದಿ: Spiritual: ಮಾತೆಯರಿಗೆ ಕುಂತಿಯ ಆಶೀರ್ವಾದವೇನು? ‘ಭಾಗ್ಯವಂತಂ ಪ್ರಸೂಯೇತ’ ಎಂದರೇನು?
ಯಾವ ಕೇಂದ್ರಗಳಲ್ಲಿ ಬಸ್ ವ್ಯವಸ್ಥೆ?
ಪಂಡರಾಪುರಕ್ಕೆ ತೆರಳುವ ಯಾತ್ರಾರ್ಥಿಗಳ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದ ಕೇಂದ್ರಬಿಂದುಗಳಾದ ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟಿ, ವಿಜಯಪುರ ವಿಭಾಗದ ಬಸವನ ಬಾಗೇವಾಡಿ ಘಟಕಗಳಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಯಾತ್ರಾರ್ಥಿಗಳು ಘಟಕ ವ್ಯವಸ್ಥಾಪಕರ ಕಚೇರಿ ಸಂಖ್ಯೆ 7760992251, 7760992263, 7760992264ಕ್ಕೆ ಕರೆ ಮಾಡಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಚಾಣಕ್ಯ ಹೇಳಿರುವ ಈ ತತ್ವಗಳನ್ನು ಅನುಸರಿಸಿ
ಗಮನದಲ್ಲಿಡಬೇಕಾದ ಅಂಶ
Published On - 1:37 pm, Sat, 9 July 22