ಬೆಂಗಳೂರು: ಸದಾಶಿವ ನಗರದ ಬಳಿ ಮಹಿಳೆಯರ ಮೈ ಮುಟ್ಟಿ ವಿಕೃತಿ ಮೆರೆದಿದ್ದ ವ್ಯಕ್ತಿಯನ್ನು ಪೊಲೀಸರು (Bengaluru Police) ಬಂಧಿಸಿದ್ದಾರೆ. ಜುಲೈ ಮೂರರಂದು ಸದಾಶಿವ ನಗರದಲ್ಲಿ ಸೈಕಲ್ ಜಾಥ ಇತ್ತು. ಈ ಕಾರ್ಯಕ್ರಮದ ನಂತರ ಅರೋಪಿ ಗಂಗಾಧರ್ ತೆರಳುತಿದ್ದ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಮಹಿಳೆಯರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ಅರೋಪಿಯನ್ನು ಅರೆಸ್ಟ್ ಮಾಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಗಂಗಾಧರ್ ಫಡ್ ಡೆಲಿವರಿ ಬಾಯ್ ಅಗಿ ಕೆಲಸ ಮಾಡುತ್ತಿದ್ದಾನೆ. ನಗರದ ಬೇರೆ ನೇರೆ ಭಾಗದಲ್ಲೂ ಇದೇ ರೀತಿ ಕೃತ್ಯ ಎಸಗಿರುವ ಬಗ್ಗೆ ವಿಚಾರಣೆ ಮುಂದುವರಿದಿದೆ.
ಕುಖ್ಯಾತ ಕಳ್ಳರ ಬಂಧನ: ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕುಖ್ಯಾತ ಕಳ್ಳರು ಅರೆಸ್ಟ್ ಆಗಿದ್ದಾರೆ. ತಮಿಳುನಾಡು ರಾಜ್ಯದ ವೀರಮಣಿ, ಹರೀಶ್, ಧರ್ಮಣ್ ಬಂಧಿತ ಆರೋಪಿಗಳು. ಆರೋಪಿಗಳಯ ಬೆಂಗಳೂರು ದಕ್ಷಿಣ ತಾಲೂಕಿನ ಕಾಟನಾಯಕನಪುರದ ಬಳಿ ದರೋಡೆಗೆ ಹೊಂಚು ಹಾಕಿದ್ದರು. ಅಲ್ಲದೆ ಸೆಂಟ್ರಿಂಗ್ ಸಾಮಾನುಗಳನ್ನು ಕಳ್ಳತನ ಮಾಡುತ್ತಿದ್ದರು. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ ಟಾಟಾ ಏಸ್, ಎರಡು ಬೈಕ್ಗಳನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ತುರ್ತಾಗಿ ಸಭೆಯೊಂದರಲ್ಲಿ ಭಾಗವಹಿಸಬೇಕಿದ್ದ ಮುಖ್ಯಮಂತ್ರಿಗಳಿಗೂ ಅನುಭವವಾಯಿತು ಟ್ರಾಫಿಕ್ ಜಾಮ್ ಪೇಚಾಟ
ಗಾಂಜಾ ಮಾರುತ್ತಿದ್ದ ಇಬ್ಬರು ಅರೆಸ್ಟ್!: ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಬಂಧನಕ್ಕೊಳಗಾಗಿದ್ದಾರೆ. ಕಿರಣ್ ಹಾಗೂ ವಿಜಯ್ ಬಂಧಿತ ಆರೋಪಿಗಳು. ಬಂಧಿತರಿಂದ 5 ಕೆ.ಜಿ 110 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಆರೋಪಿಗಳನ್ನ ಬಂಧಿಸಲಾಗಿದ್ದು, ಬಂಧಿತರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆದ ಒಂದೇ ವರ್ಷಕ್ಕೆ ಭ್ರಷ್ಟಾಚಾರ ಬಯಲು; ಟ್ವಿಟರ್ನಲ್ಲಿ ಚಾಟಿ ಬೀಸಿದ ರಾಜ್ಯ ಬಿಜೆಪಿ