AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪೈಸ್‌ಜೆಟ್​ ಏರ್‌ಲೈನ್ಸ್​ನ ಅದೇ ಹಳೆ ಗೋಳು: ಹಿಂಗೆಲ್ಲಾ ಹಿಂಸೆ ಕೊಟ್ರೆ ಯಾರ್​ ವಿಮಾನ ಹತ್ತುತ್ತಾರೆ ಎಂದ ಪ್ರಯಾಣಿಕರು

ದೆಹಲಿಯಿಂದ ಬೆಂಗಳೂರಿಗೆ ಬರಬೇಕಾಗಿದ್ದ ಸ್ಪೈಸ್‌ಜೆಟ್‌ ವಿಮಾನದ ಸಂಚಾರದಲ್ಲಿ ವಿಳಂಬವಾಗಿತ್ತು. 12 ಗಂಟೆಗಳ ಕಾಲ ಪ್ರಯಾಣಿಕರು ಊಟ, ನೀರು ಇಲ್ಲದೆ ಲಾಕ್​ ಆಗಿದ್ದರು. ಇದೀಗ ಇದೇ ಸ್ಪೈಸ್‌ಜೆಟ್‌ ಏರ್‌ಲೈನ್ಸ್‌ ವಿಮಾನ ಮತ್ತೆ ವಿಳಂಬವಾಗಿದೆ. ಬೆಂಗಳೂರಿನಿಂದ ಬೆಳಗ್ಗೆ ಹೋಗಬೇಕಿದ್ದ ವಿಮಾನ ಸಂಜೆ 7ಕ್ಕೆ ಹೋಗುತ್ತೆ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಪೈಸ್‌ಜೆಟ್​ ಏರ್‌ಲೈನ್ಸ್​ನ ಅದೇ ಹಳೆ ಗೋಳು: ಹಿಂಗೆಲ್ಲಾ ಹಿಂಸೆ ಕೊಟ್ರೆ ಯಾರ್​ ವಿಮಾನ ಹತ್ತುತ್ತಾರೆ ಎಂದ ಪ್ರಯಾಣಿಕರು
ಸ್ಪೈಸ್‌ಜೆಟ್‌ ಏರ್‌ಲೈನ್ಸ್‌ ವಿಮಾನ ಮತ್ತೆ ವಿಳಂಬ: ಸ್ಪೈಸ್‌ಜೆಟ್​ ವಿಮಾನಿನ ಅದೇ ಹಳೆ ಗೋಳು: ಹಿಂಗೆಲ್ಲಾ ಹಿಂಸೆ ಕೊಟ್ರೆ ಯಾರ್​ ವಿಮಾನ ಹತ್ತುತ್ತಾರೆ ಎಂದ ಪ್ರಯಾಣಿಕರು
ನವೀನ್ ಕುಮಾರ್ ಟಿ
| Edited By: |

Updated on:Jul 07, 2024 | 5:13 PM

Share

ಬೆಂಗಳೂರು ಗ್ರಾಮಾಂತರ, ಜುಲೈ 07: ಸ್ಪೈಸ್ ಜೆಟ್ ಏರ್​ಲೈನ್ಸ್ (Spice Jet Airlines)​​ ಮಾಡಿಕೊಳ್ಳುವ ಎಡವಟ್ಟುಗಳು ಒಂದೆರಡಲ್ಲ. ತಾಂತ್ರಿಕ ದೋಷದಿಂದ 12 ಗಂಟೆ ಇದೇ ಸ್ಪೈಸ್ ಜೆಟ್ ಏರ್​ಲೈನ್ಸ್ ವಿಮಾನದಲ್ಲಿ ಪ್ರಯಾಣಿಕರು (Passengers) ನಿನ್ನೆ ಲಾಕ್​ ಆಗಿದ್ದರು. ಆ ಘಟನೆ ಮುಗಿಯುತ್ತಿದ್ದಂತೆ ಇಂದು ಮತ್ತೊಂದು ಸಮಸ್ಯೆ ಉಂಟಾಗಿದೆ. ಸ್ಪೈಸ್‌ಜೆಟ್‌ನ SG 8531 ಸಂಖ್ಯೆಯ ವಿಮಾನ ಸಂಚಾರದಲ್ಲಿ ವಿಳಂಬವಾಗಿದ್ದು, ಏರ್‌ಲೈನ್ಸ್‌ ವಿರುದ್ಧ ಪ್ರಯಾಣಿಕರು ಗರಂ ಆಗಿದ್ದಾರೆ.

ಬೆಳಗ್ಗೆ 10.15ಕ್ಕೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ​ದಿಂದ ಕೋಲ್ಕತ್ತಾಗೆ ವಿಮಾನ ತೆರಳಬೇಕಿತ್ತು. ಈಗ ಹೋಗುತ್ತೆ, ಆಗ ಹೋಗುತ್ತೆ ಅಂತ ಹೇಳಿ ಕಾಲಹರಣ ಮಾಡಿಸಿದ್ದು, ಇದೀಗ ಸಂಜೆ 7 ಗಂಟೆಗೆ ವಿಮಾನ ಹೋಗುತ್ತೆ ಎಂದು  ಸಿಬ್ಬಂದಿಗಳು ಹೇಳುತ್ತಿದ್ದಾರೆ. ಹೀಗಾಗಿ ಪ್ರಯಾಣಿಕರ ಪಿತ್ತ ನೆತ್ತಿಗೇರಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದ ರನ್ ​ವೇನಲ್ಲಿ ವಿಡಿಯೋ ಚಿತ್ರೀಕರಿಸಿದ್ದ ಯೂಟ್ಯೂಬರ್​ ಬಂಧನ

ಬೆಳಗ್ಗೆ 9 ಗಂಟೆಗೆ ನೂರಾರು ಪ್ರಯಾಣಿಕರು ಏರ್‌ಪೋರ್ಟ್‌ಗೆ ಬಂದಿದ್ದು, ಟರ್ಮಿನಲ್‌-1ರಲ್ಲೇ ಕಾದು ಕುಳಿತಿದ್ದಾರೆ. ನಿನ್ನೆಯೂ ಸ್ಪೈಸ್‌ಜೆಟ್‌ ವಿಮಾನದ ಸಂಚಾರದಲ್ಲಿ ವಿಳಂಬವಾಗಿತ್ತು. ದೆಹಲಿಯಿಂದ ಬೆಂಗಳೂರಿಗೆ ವಿಳಂಬವಾಗಿ ಸ್ಪೈಸ್‌ಜೆಟ್‌ ವಿಮಾನ ಬಂದಿತ್ತು.

ದೆಹಲಿಯಲ್ಲಿ 12 ಗಂಟೆಗಳ ಕಾಲ ಟೆಕ್ ಆಫ್​ ಆಗದ ವಿಮಾನ: ಲಾಕ್ ಆಗಿ ಅಸ್ವಸ್ಥಗೊಂಡ ಪ್ರಯಾಣಿಕರು

ಅಂದಹಾಗೆ ದೆಹಲಿಯಿಂದ ನಿನ್ನೆ ಸಂಜೆ ಬೆಂಗಳೂರಿಗೆ ಬರಲು ನೂರಕ್ಕೂ ಅಧಿಕ ಜನ ಪ್ರಯಾಣಿಕರು ಸ್ಪೈಸ್ ಜೆಟ್ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದು ಸಂಜೆ 07 ಗಂಟೆ ಸುಮಾರಿಗೆ ದೆಹಲಿಯ ಮೂರನೆ ಟರ್ಮಿನಲ್ ನಲ್ಲಿ ವಿಮಾನ ಸಹ ಏರಿದ್ರು. ಜೊತೆಗೆ ರಾತ್ರಿ 7:40 ಕ್ಕೆ ವಿಮಾನ ಟೇಕ್ ಆಫ್ ಆಗುತ್ತೆ ಅಂತ ಮಧ್ಯರಾತ್ರಿ 01 ಗಂಟೆವರೆಗೂ ಕಾದು ಕುಳಿತಿದ್ದಾರೆ. ಆದರೆ ಮಧ್ಯರಾತ್ರಿ ಒಂದು ಗಂಟೆಯಾದ್ರು ವಿಮಾನ ಟೇಕ್ ಆಫ್ ಆಗದಿದ್ದು ಏರ್ಲೈನ್ಸ್ ಸಿಬ್ಬಂದಿ ಸಹ ಪ್ರಯಾಣಿಕರಿಗೆ ಸಮರ್ಪಕ ಉತ್ತರ ನೀಡಿಲ್ಲ. ಜೊತೆಗೆ ಮಧ್ಯರಾತ್ರಿಯಾದ್ರು ಏರೋಬ್ರಿಡ್ಜ್ ಡೋರ್ ಒಪನ್ ಮಾಡದೆ ವಿಮಾನದಲ್ಲೆ ಮಹಿಳೆಯರು ಮಕ್ಕಳು ಮತ್ತು ಪುರುಷರನ್ನ ಕೂಡಿ ಹಾಕಿದ್ದು ಸಮರ್ಪಕ ಊಟ ತಿಂಡಿ ನೀರು ಸಹ ನೀಡಿರಲಿಲ್ಲ.

ಹೀಗಾಗಿ ಮಧ್ಯರಾತ್ರಿವರೆಗೂ ತಾಳ್ಮೆಯಿಂದಿದ್ದ ಪ್ರಯಾಣಿಕರು ನಂತರ ಏರ್ಲೈನ್ಸ್ ಸಿಬ್ಬಂದಿಯ್ನನ ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ಪ್ರಶ್ನೆ ಮಾಡಿ ಮೊಬೈಲ್​ನಲ್ಲಿ ವಿಡಿಯೋ ಮಾಡಿದವರ ಮೊಬೈಲ್ ಅನ್ನು ಕೆಲ ಸಿಬ್ಬಂದಿ ಹಾಗೂ ಭದ್ರತಾ ಪಡೆ ಹೊಡೆದು ಹಾಕಿರುವುದಾಗಿ ಪ್ರಯಾಣಿಕರು ಆರೋಪಿಸಿದ್ದರು.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಏರ್​ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಮಧ್ಯರಾತ್ರಿ ಪ್ರಯಾಣಿಕರು ಏರ್ಲೈನ್ಸ್ ಸಿಬ್ಬಂದಿ ವಿರುದ್ದ ಆಕ್ರೋಶ ಹೊರ ಹಾಕ್ತಿದ್ದಂತೆ ಪೈಲೆಟ್ ಇಲ್ಲ ಬೆಳಗ್ಗೆ ಬರ್ತಾರೆ ಬೆಳಗ್ಗೆ 06:30 ಕ್ಕೆ ಪ್ಲೈಟ್ ಟೇಕ್ ಆಫ್​ ಆಗುತ್ತೆ ಅಂತ ಹೇಳಿದ್ರಂತೆ. ಜೊತೆಗೆ ರಾತ್ರಿ ಪೂರ್ತಿ ಪ್ರಯಾಣಿಕರಿಗೆ ಏರ್ಲೈನ್ಸ್ ಸಿಬ್ಬಂದಿ ಮಲಗೋಕ್ಕು ವ್ಯವಸ್ಥೆ ಮಾಡದೆ ಕೆಟ್ಟ ಊಟವನ್ನ ಕೊಟ್ಟು ಅಮಾನವೀಯವಾಗಿ ನಡೆಸಿಕೊಂಡಿದ್ದು ಬಿಪಿ ಶುಗರ್ ಪೇಶೆಂಟ್ಗಳು ಪರದಾಡಿದ್ದೇವೆ ಅಂತ ಆಕ್ರೋಶ ಹೊರ ಹಾಕಿದ್ದರು.

ಜೊತೆಗೆ ರಾತ್ರಿ ಪೂರ್ತಿ ಏರೋಬ್ರಿಡ್ಜ್ ಮತ್ತು ಸೀಟ್ಗಳ ಮೇಲೆಯೆ ನಿದ್ದೆ ಮಾಡಿ ಕಾಲಹರಣ ಮಾಡಿದ್ದು ಇಂತಹ ಕೆಟ್ಟ ಅನುಭವ ಯಾವತ್ತು ಆಗಿಲ್ಲ ಏರ್ಲೈನ್ಸ್ ವಿರುದ್ದ ಅಸಮಧಾನ ಹೊರಹಾಕಿದ್ದರು. ಜೊತೆಗೆ ಸ್ಪೈಸ್ ಜೆಟ್ ವಿಮಾನದಲ್ಲೆ ಬೆಳಗ್ಗೆ 10 ಗಂಟೆ ಸುಮಾರಿಗೆ ಕೆಂಪೇಗೌಡ ಏರ್ಪೋಟ್​ಗೆ ಬಂದಿಳಿದ ಪ್ರಯಾಣಿಕರು ಸ್ಪೈಸ್ ಜೆಟ್ ಏರ್ಲೈನ್ಸ್ ವಿರುದ್ದ ಧಿಕ್ಕಾರಗಳನ್ನ ಕೂಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:12 pm, Sun, 7 July 24