AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಟೋಬರ್ ತಿಂಗಳ ರಾಜ್ಯವಾರು GST ಆದಾಯ ವರದಿ ಬಿಡುಗಡೆ: ಪ್ರಥಮ ಸ್ಥಾನದಲ್ಲಿ ಕರ್ನಾಟಕ

ಇತ್ತೀಚೆಗೆ ಜಿಎಸ್‌ಟಿ ಸ್ಲ್ಯಾಬ್ ಬದಲಾವಣೆ ಜಾರಿಗೆ ಬಂದಿತ್ತು. ಇದೀಗ 2025 ಅಕ್ಟೋಬರ್​ನಲ್ಲಿ ಜಿಎಸ್‌ಟಿ ಸಂಗ್ರಹವು ಶೇ 4.6 ರಷ್ಟು ಏರಿಕೆಯಾಗಿದೆ. ಇನ್ನು ಪ್ರಮುಖ ಆರ್ಥಿಕ ರಾಜ್ಯಗಳ ಬೆಳವಣಿಗೆ ದರದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿ ಇದೆ. ಕರ್ನಾಟಕ 14,395 ಕೋಟಿ ರೂ. GST ಸಂಗ್ರಹಿಸಿದೆ.

ಅಕ್ಟೋಬರ್ ತಿಂಗಳ ರಾಜ್ಯವಾರು GST ಆದಾಯ ವರದಿ ಬಿಡುಗಡೆ: ಪ್ರಥಮ ಸ್ಥಾನದಲ್ಲಿ ಕರ್ನಾಟಕ
ಪ್ರಾತಿನಿಧಿಕ ಚಿತ್ರ
ಹರೀಶ್ ಜಿ.ಆರ್​.
| Updated By: ಗಂಗಾಧರ​ ಬ. ಸಾಬೋಜಿ|

Updated on:Nov 01, 2025 | 6:20 PM

Share

ಬೆಂಗಳೂರು, ನವೆಂಬರ್​ 01: 2025ರ ಅಕ್ಟೋಬರ್ ತಿಂಗಳ ರಾಜ್ಯವಾರು ಸರಕು ಮತ್ತು ಸೇವಾ ತೆರಿಗೆ (GST) ಆದಾಯ ವರದಿ ಬಿಡುಗಡೆ ಆಗಿದೆ. 2024ರ ಅಕ್ಟೋಬರ್​ಗೆ ಹೋಲಿಸಿದರೆ 2025ರ ಅಕ್ಟೋಬರ್​ ದೇಶಿಯ ಜಿಎಸ್​​ಟಿ 1,45,052 ಕೋಟಿ ರೂ. ಸಂಗ್ರಹವಾಗಿದೆ, ಅಂದರೆ ಶೇ.2ರಷ್ಟು ಬೆಳವಣಿಗೆ ಹೊಂದಿದೆ. ಆ ಮೂಲಕ ಪ್ರಮುಖ ಆರ್ಥಿಕ ರಾಜ್ಯಗಳ ಬೆಳವಣಿಗೆ ದರದಲ್ಲಿ ಕರ್ನಾಟಕ (Karnataka) ಪ್ರಥಮ ಸ್ಥಾನದಲ್ಲಿ ಇದೆ.

ಜಿಎಸ್‌ಟಿ ಆದಾಯ 1.95 ಲಕ್ಷ ಕೋಟಿ ರೂ ಸಂಗ್ರಹ

ಹಣಕಾಸು ಸಚಿವಾಲಯ ಶನಿವಾರ ರಾಜ್ಯಗಳ ಜಿಎಸ್​​ಟಿ ಆದಾಯದ ಸಂಗ್ರಹ ಮತ್ತು ಬೆಳವಣಿಗೆ ದರ ಮಾಹಿತಿ ಬಿಡುಗಡೆ ಮಾಡಿದೆ. ಆ ಪೈಕಿ ಅಕ್ಟೋಬರ್ ತಿಂಗಳ ಜಿಎಸ್‌ಟಿ ಆದಾಯ 1.95 ಲಕ್ಷ ಕೋಟಿ ರೂ ಸಂಗ್ರಹವಾಗಿದೆ. ತೆರಿಗೆ ಕಡಿತದ ಹೊರತಾಗಿಯೂ ಶೇ. 4.6 ರಷ್ಟು ಏರಿಕೆ ಕಂಡಿದೆ.

ಇದನ್ನೂ ಓದಿ: ಬೆಂಗಳೂರಿನ ಕೆಲ ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ನಿಮಗೆ ಗೊತ್ತಾಗದಂತೆ ವಸೂಲಿ ಮಾಡ್ತಾರೆ ಸೇವಾ ಶುಲ್ಕ, ಜಿಎಸ್​ಟಿ!

ಹಣಕಾಸು ಸಚಿವಾಲಯದ ಮಾಹಿತಿಯ ಪ್ರಕಾರ, ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) 36,547 ಕೋಟಿ ರೂ., ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) 45,134 ಕೋಟಿ ರೂ. ಮತ್ತು ಇಂಟಿಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ) 1,06,443 ಕೋಟಿ ರೂ ಸೇರಿದಂತೆ ಹೆಚ್ಚುವರಿಯಾಗಿ ಸರ್ಕಾರವು ಸೆಸ್‌ನಿಂದ 7,812 ಕೋಟಿ ರೂ. ಸಂಗ್ರಹಿಸಿದೆ.

ಇತರೆ ರಾಜ್ಯಗಳ GST ಸಂಗ್ರಹ ಹೀಗಿದೆ

  • ಕರ್ನಾಟಕ GST ಸಂಗ್ರಹ 14,395 ಕೋಟಿ ರೂ, ಬೆಳವಣಿಗೆ ದರ 10%
  • ಗುಜರಾತ್ GST ಸಂಗ್ರಹ 12,113 ಕೋಟಿ ರೂ, ಬೆಳವಣಿಗೆ ದರ 6%
  • ಮಹಾರಾಷ್ಟ್ರ GST ಸಂಗ್ರಹ 32,025 ಕೋಟಿ ರೂ, ಬೆಳವಣಿಗೆ ದರ 3%
  • ತೆಲಂಗಾಣ ಜಿಎಸ್​ಟಿ ಸಂಗ್ರಹ 5,726 ಕೋಟಿ ರೂ, ಬೆಳವಣಿಗೆ ದರ 10%
  • ತಮಿಳುನಾಡು GST ಸಂಗ್ರಹ 11,588 ಕೋಟಿ ರೂ, ಬೆಳವಣಿಗೆ ದರ 4%
  • ಉತ್ತರ ಪ್ರದೇಶ GST ಸಂಗ್ರಹ 9,806 ಕೋಟಿ ರೂ, ಬೆಳವಣಿಗೆ ದರ 2%

ಜಿಎಸ್​ಟಿ ಸಂಗ್ರಹದಲ್ಲಿ ಕುಸಿತ ಕಂಡ ರಾಜ್ಯಗಳ ವಿವರ

  • ಹಿಮಾಚಲ ಪ್ರದೇಶದಲ್ಲಿ 17%, ಜಾರ್ಖಂಡ್​ನಲ್ಲಿ ಶೇ.15ರಷ್ಟು ಕುಸಿತ
  • ಉತ್ತರಾಖಂಡ್-13%, ಕೇರಳ-2%, ರಾಜಸ್ಥಾನದಲ್ಲಿ ಶೇ.3ರಷ್ಟು ಕುಸಿತ
  • ಜಿಎಸ್​ಟಿ ಸಂಗ್ರಹಣದಲ್ಲಿ ಆಂಧ್ರಪ್ರದೇಶದಲ್ಲಿ ಶೇಕಡಾ 9ರಷ್ಟು ಕುಸಿತ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:18 pm, Sat, 1 November 25