AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ ಸೇರಿ 180 ನಗರಗಳಿಗೆ ‘ಫುಡ್ ಆನ್ ಟ್ರೈನ್’ ಸೇವೆ ವಿಸ್ತರಿಸಿದ ಸ್ವಿಗ್ಗಿ; ಬುಕ್‌ ಮಾಡುವ ವಿಧಾನ ಹೀಗಿದೆ

ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಒಳ್ಳೆಯ ಹೋಟೆಲ್‌ನ ಬಿಸಿ ಬಿಸಿ ಊಟ ಸವಿಯಬೇಕು ಅಂತ ಅನಿಸಿದರೆ, ಈಗ ನೀವು ಪ್ಲಾಟ್‌ಫಾರ್ಮ್‌ಗಳಲ್ಲಿ ಇಳಿದು ಹುಡುಕಾಡಬೇಕಿಲ್ಲ. ಭಾರತದ ಪ್ರಮುಖ ಫುಡ್ ಡೆಲಿವರಿ ಆ್ಯಪ್ 'ಸ್ವಿಗ್ಗಿ' ತನ್ನ ಜನಪ್ರಿಯ 'ಫುಡ್ ಆನ್ ಟ್ರೈನ್' ಸೇವೆಯನ್ನು ಈಗ ದೇಶಾದ್ಯಂತ 180 ನಗರಗಳಿಗೆ ವಿಸ್ತರಿಸಿದೆ. ಕರ್ನಾಟಕದ ದಾವಣಗೆರೆ ಸೇರಿದಂತೆ 17 ರೈಲು ನಿಲ್ದಾಣಗಳಿಗೆ ಈ ಸೇವೆ ಹೊಸದಾಗಿ ಕಾಲಿಟ್ಟಿದೆ. ಹಾಗಾದ್ರೆ, ಬುಕ್‌ ಮಾಡುವುದು ಹೇಗೆ ಎನ್ನುವ ವಿವರ ಇಲ್ಲಿದೆ.

ದಾವಣಗೆರೆ ಸೇರಿ 180 ನಗರಗಳಿಗೆ 'ಫುಡ್ ಆನ್ ಟ್ರೈನ್' ಸೇವೆ ವಿಸ್ತರಿಸಿದ ಸ್ವಿಗ್ಗಿ; ಬುಕ್‌ ಮಾಡುವ ವಿಧಾನ ಹೀಗಿದೆ
Swiggy Food On Train Service
ರಮೇಶ್ ಬಿ. ಜವಳಗೇರಾ
|

Updated on: Jul 08, 2026 | 5:21 PM

Share

ಮುಖ್ಯಾಂಶಗಳು

  • ರೈಲ್ವೆ ಪ್ರಯಾಣಿಕರಿಗೆ ಗುಡ್‌ನ್ಯೂಸ್
  • ದಾವಣಗೆರೆ ಸೇರಿ 180 ನಗರಗಳಿಗೆ 'ಫುಡ್ ಆನ್ ಟ್ರೈನ್' ಸೇವೆ ವಿಸ್ತರಿಸಿದ ಸ್ವಿಗ್ಗಿ
  • ನಿಮ್ಮ ಇಷ್ಟದ ಹೋಟೆಲ್​​​​​​​​​​​​​ನಿಂದ ನೀವು ಕುಳಿತ ಸೀಟಲ್ಲೇ ಸಿಗುತ್ತೆ ಬಿಸಿಬಿಸಿ ಆಹಾರ

ಬೆಂಗಳೂರು, (ಜುಲೈ 08): ದೂರದೂರಿಗೆ ರೈಲಿನಲ್ಲಿ (Train Journey) ಪ್ರಯಾಣಿಸುವಾಗ ಊಟ-ತಿಂಡಿಯ ಚಿಂತೆ ಅನೇಕ ಮಂದಿಯನ್ನು ಕಾಡುತ್ತದೆ. ಇದೀಗ ರೈಲ್ವೆ ನಿಲ್ದಾಣಗಳಲ್ಲಿ ಇಳಿದು ತರಾತುರಿಯಲ್ಲಿ ಆಹಾರ ಖರೀದಿಸುವ ಆತಂಕವನ್ನು ದೂರ ಮಾಡಲು ‘ಸ್ವಿಗ್ಗಿ’ ತನ್ನ ಜನಪ್ರಿಯ ‘ಫುಡ್ ಆನ್ ಟ್ರೈನ್’ (Swiggy Food On Train Service) ಸೇವೆಯನ್ನು ಈಗ ದೇಶಾದ್ಯಂತ 180 ನಗರಗಳಿಗೆ ವಿಸ್ತರಿಸಿದೆ. ಕರ್ನಾಟಕದ  (Karnataka) ದಾವಣಗೆರೆ (Davanagere) ಸೇರಿದಂತೆ 17 ರೈಲು ನಿಲ್ದಾಣಗಳಿಗೆ ಈ ಸೇವೆ ಹೊಸದಾಗಿ ಕಾಲಿಟ್ಟಿದ್ದು, ಬುಕ್ ಮಾಡಿದ್ರೆ ಸಾಕು ನಿಮ್ಮ ನೆಚ್ಚಿನ ಹೋಟೆಲ್‌ನಿಂದ ಊಟವನ್ನು ನೇರವಾಗಿ ನಿಮ್ಮ ರೈಲಿನ ಸೀಟಿಗೇ ತಂದುಕೊಡುತ್ತದೆ.

ಟಿಕೆಟ್ ಸ್ಕ್ಯಾನ್ ಮಾಡಿದರೆ ಸಾಕು, ಊಟ ರೆಡಿ!

ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಸ್ವಿಗ್ಗಿ ಇದೀಗ ‘ಸ್ಕ್ಯಾನ್ ಯುವರ್ ಟಿಕೆಟ್’ ಎಂಬ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಗ್ರಾಹಕರು ಸ್ವಿಗ್ಗಿ ಆ್ಯಪ್‌ನಲ್ಲಿ ತಮ್ಮ ರೈಲು ಟಿಕೆಟ್‌ನ ಫೋಟೋವನ್ನು ಅಪ್‌ಲೋಡ್ ಮಾಡಿದರೆ ಸಾಕು, ಆ್ಯಪ್ ತಾನಾಗಿಯೇ ನಿಮ್ಮ ಪಿಎನ್‌ಆರ್‌ ನಂಬರ್, ಬೋಗಿ ಮತ್ತು ಸೀಟ್ ನಂಬರ್ ಅನ್ನು ಪತ್ತೆಹಚ್ಚಿ, ನಿಮ್ಮ ನೆಚ್ಚಿನ ಹೋಟೆಲ್‌ನಿಂದ ಊಟವನ್ನು ನೇರವಾಗಿ ನಿಮ್ಮ ರೈಲಿನ ಸೀಟಿಗೇ ತಂದುಕೊಡುತ್ತದೆ.

ಇದನ್ನೂ ಓದಿ: ಮನೆ ಮಾಲೀಕರು, ಬಾಡಿಗೆದಾರರು ಆತಂಕ ಪಡಬೇಕಾಗಿಲ್ಲ: ಗೃಹ ಜ್ಯೋತಿ ಬಗ್ಗೆ ಬೆಸ್ಕಾಂ ನೀಡಿದ ಮಾಹಿತಿ ಹೀಗಿದೆ

ಆರ್ಡರ್‌ಗಳಲ್ಲಿ 3 ಪಟ್ಟು ಹೆಚ್ಚಳ

ಬೇಸಿಗೆ ರಜೆಯ ಪ್ರಯಾಣದ ಹಿನ್ನೆಲೆಯಲ್ಲಿ ಸ್ವಿಗ್ಗಿಯ ಈ ಸೇವೆಗೆ ಭಾರಿ ಬೇಡಿಕೆ ಕಂಡುಬಂದಿದೆ. ಏಪ್ರಿಲ್ – ಜೂನ್ 2026ರ ಅವಧಿಯಲ್ಲಿ ‘ಫುಡ್ ಆನ್ ಟ್ರೈನ್’ ಆರ್ಡರ್‌ಗಳು ಕಳೆದ ವರ್ಷಕ್ಕಿಂತ ಬರೋಬ್ಬರಿ 3 ಪಟ್ಟು ಹೆಚ್ಚಾಗಿವೆ. ಕೇವಲ ಒಂದು ಸ್ಟೇಷನ್‌ನಲ್ಲಿ ಮಾತ್ರವಲ್ಲದೆ, ಒಂದೇ ಪಿಎನ್‌ಆರ್‌ ನಂಬರ್ ಬಳಸಿ ಪ್ರಯಾಣದ ಉದ್ದಕ್ಕೂ 2-3 ಸ್ಟೇಷನ್‌ಗಳಲ್ಲಿ ಊಟ ಆರ್ಡರ್ ಮಾಡುವವರ ಸಂಖ್ಯೆ ಶೇ. 300ರಷ್ಟು ಏರಿಕೆಯಾಗಿದೆ.

ರೈಲಿನಲ್ಲಿ ಭಾರತೀಯರು ಹೆಚ್ಚಾಗಿ ತಿನ್ನುವುದೇನು?

ಈ ಬೇಸಿಗೆಯಲ್ಲಿ ರೈಲು ಪ್ರಯಾಣಿಕರು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಆಹಾರಗಳ ದತ್ತಾಂಶ ಕೂಡ ಅಚ್ಚರಿಯ ಮಾಹಿತಿಯನ್ನು ಬಿಚ್ಚಿಟ್ಟಿದೆ.

  •  4 ಲಕ್ಷ ರೊಟ್ಟಿಗಳು: ತವಾ ರೊಟ್ಟಿ, ತಂದೂರಿ ರೊಟ್ಟಿ, ಫುಲ್ಕಾಗಳನ್ನು ಒಳಗೊಂಡಂತೆ ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ರೊಟ್ಟಿಗಳನ್ನು ರೈಲು ಪ್ರಯಾಣಿಕರು ಆರ್ಡರ್ ಮಾಡಿದ್ದಾರೆ. ಇದರ ಜೊತೆಗೆ ಮಸಾಲ ದೋಸೆ, ಆಲೂ ಪರಾಟ ಮತ್ತು ಮ್ಯಾಕ್ ಆಲೂ ಟಿಕ್ಕಿ ಬರ್ಗರ್‌ಗಳು ಹೆಚ್ಚು ಡಿಮ್ಯಾಂಡ್‌ನಲ್ಲಿದ್ದವು.
  •  ನಾನ್ ವೆಜ್‌ನಲ್ಲಿ ಬಿರಿಯಾನಿ ಕಿಂಗ್: ಮಾಂಸಾಹಾರಿ ಖಾದ್ಯಗಳಲ್ಲಿ ‘ಚಿಕನ್ ಬಿರಿಯಾನಿ’ ಅತಿ ಹೆಚ್ಚು ಆರ್ಡರ್ ಆದ ತಿನಿಸಾಗಿದೆ.
  •  ಬೇಸಿಗೆ ಪಾನೀಯಗಳ ಅಬ್ಬರ : ಬಿಸಿಲಿನ ತಾಪಕ್ಕೆ ತಂಪು ಪಾನೀಯಗಳ ಆರ್ಡರ್ ಶೇ. 354ರಷ್ಟು ಹೆಚ್ಚಾಗಿದೆ. ಇದರಲ್ಲಿ ‘ಮ್ಯಾಂಗೋ ಶೇಕ್’ ನಂಬರ್ 1 ಸ್ಥಾನದಲ್ಲಿದ್ದರೆ, ಲಸ್ಸಿ ಆರ್ಡರ್ ಶೇ. 100ರಷ್ಟು ಮತ್ತು ಐಸ್‌ಕ್ರೀಮ್ ಆರ್ಡರ್ ಶೇ. 140ರಷ್ಟು ಏರಿಕೆಯಾಗಿದೆ.

ಪ್ರದೇಶಕ್ಕೆ ತಕ್ಕಂತೆ ರುಚಿಯಲ್ಲಿ ಬದಲಾವಣೆ

ಉತ್ತರ ಭಾರತದ ಪ್ರಯಾಣಿಕರು ರೊಟ್ಟಿ, ಪರಾಟ ಮತ್ತು ಬರ್ಗರ್‌ಗಳಿಗೆ ಆದ್ಯತೆ ನೀಡಿದ್ದರೆ, ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ನೆಲ್ಲೂರು ಬಳಿ ದೋಸೆ ಅತಿ ಹೆಚ್ಚು ಆರ್ಡರ್ ಆಗಿದೆ. ವಿಜಯವಾಡದಲ್ಲಿ ಪ್ರತಿ 5 ಆರ್ಡರ್‌ಗಳಲ್ಲಿ ಒಂದು ಬಿರಿಯಾನಿಯಾಗಿರುತ್ತಿದೆ!

ಪೂರ್ವ ಭಾರತದಲ್ಲಿ ಥಾಲಿ, ಫ್ರೈಡ್ ರೈಸ್ ಹೆಚ್ಚಾಗಿದ್ದರೆ, ಗೋವಾ-ಮಾರ್ಗದಲ್ಲಿ (ಮಡಗಾಂವ್ ಜಂಕ್ಷನ್) ಬಿರಿಯಾನಿಯನ್ನು ಹಿಂದಿಕ್ಕಿ ಬರ್ಗರ್ ಅತಿ ಹೆಚ್ಚು ಮಾರಾಟವಾಗಿದೆ. ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ, ಹಲ್ದಿರಾಮ್ಸ್, ಪ್ಯಾರಡೈಸ್ ಬಿರಿಯಾನಿ ಮತ್ತು ಎ2ಬಿ (ಅಡ್ಯಾರ್ ಆನಂದ ಭವನ್) ಗಳು ಪ್ರಯಾಣಿಕರ ನೆಚ್ಚಿನ ಹೋಟೆಲ್‌ಗಳಾಗಿ ಹೊರಹೊಮ್ಮಿವೆ.

ಫುಡ್ ಆನ್ ಟ್ರೈನ್ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಸ್ವಿಗ್ಗಿಯ ಉಪಾಧ್ಯಕ್ಷ ದೀಪಕ್ ಮಾಲೂ, “ಕಳೆದ ಒಂದು ವರ್ಷದಲ್ಲಿ ಈ ಸೇವೆ ಭಾರಿ ಬೆಳವಣಿಗೆ ಕಂಡಿದೆ. ಮೆಟ್ರೋ ಸಿಟಿಗಳಷ್ಟೇ ಅಲ್ಲದೆ, ಸಣ್ಣ ಸಣ್ಣ ಪಟ್ಟಣಗಳಲ್ಲೂ ಜನರು ಇದೇ ಮೊದಲ ಬಾರಿಗೆ ಡಿಜಿಟಲ್ ಫುಡ್ ಆರ್ಡರ್ ಮಾಡಲು ನಮ್ಮ ಸೇವೆ ಕಾರಣವಾಗಿದೆ. ವಿಶೇಷವಾಗಿ ಮೇ ತಿಂಗಳ ಕೊನೆಯ ವಾರದಲ್ಲಿ ಕಾಲೇಜಿಗೆ ಮರಳುವ ವಿದ್ಯಾರ್ಥಿಗಳ ಆರ್ಡರ್‌ಗಳು ಶೇ. 70ರಷ್ಟು ಹೆಚ್ಚಾಗಿದ್ದವು. ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ 4 ದಿನ ಮುಂಚಿತವಾಗಿಯೇ ಊಟವನ್ನು ಬುಕ್ ಮಾಡಿಕೊಳ್ಳುತ್ತಿರುವುದು ಈ ಸೇವೆಯ ಯಶಸ್ಸಿಗೆ ಸಾಕ್ಷಿ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು
24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ
24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ
ಬೆಳಗಾವಿಯಲ್ಲಿ RSS ವಾರ್ಷಿಕ ಸಭೆ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಮಾತು
ಬೆಳಗಾವಿಯಲ್ಲಿ RSS ವಾರ್ಷಿಕ ಸಭೆ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಮಾತು
ವಯನಾಡು ಭೂಕುಸಿತದ ಬಗ್ಗೆ ಡಿಸಿ ಮೇಘಶ್ರೀ ಮಾಹಿತಿ
ವಯನಾಡು ಭೂಕುಸಿತದ ಬಗ್ಗೆ ಡಿಸಿ ಮೇಘಶ್ರೀ ಮಾಹಿತಿ
ವಯನಾಡು ಗುಡ್ಡ ಕುಸಿತ ದುರಂತದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹೊಟೇಲ್ ಮಾಲೀಕ
ವಯನಾಡು ಗುಡ್ಡ ಕುಸಿತ ದುರಂತದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹೊಟೇಲ್ ಮಾಲೀಕ
ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ: ಕುಸಿದು ಬೀಳುತ್ತಿರುವ ಬಂಡೆಗಲ್ಲುಗಳು
ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ: ಕುಸಿದು ಬೀಳುತ್ತಿರುವ ಬಂಡೆಗಲ್ಲುಗಳು
ಇಂಡೋನೇಷ್ಯಾದ ಭವ್ಯ 'ಪ್ರಂಬಾನನ್' ಶಿವ ದೇವಾಲಯಕ್ಕೆ ಪಿಎಂ ಮೋದಿ ಭೇಟಿ
ಇಂಡೋನೇಷ್ಯಾದ ಭವ್ಯ 'ಪ್ರಂಬಾನನ್' ಶಿವ ದೇವಾಲಯಕ್ಕೆ ಪಿಎಂ ಮೋದಿ ಭೇಟಿ