ವಿಜಯಪುರ: ವೃತ್ತಿಕೌಶಲ್ಯ ಹೆಚ್ಚಿಸಲು ಟಾಟಾ ಟೆಕ್ನಾಲಾಜಿಸ್ ಸಹಯೋಗ.. ಲೋಗೋ ವಿನ್ಯಾಸಕ್ಕೆ ಸ್ಫರ್ಧೆ

ವಿಜಯಪುರ: ವೃತ್ತಿಕೌಶಲ್ಯ ಹೆಚ್ಚಿಸಲು ಟಾಟಾ ಟೆಕ್ನಾಲಾಜಿಸ್ ಸಹಯೋಗ.. ಲೋಗೋ ವಿನ್ಯಾಸಕ್ಕೆ ಸ್ಫರ್ಧೆ
ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ದೃಶ್ಯ

ಜಿಲ್ಲೆಯ ವಿಜಯಪುರ, ಬಸಬಾಗೇವಾಡಿ, ತಿಕೋಟಾ, ನಾಲತವಾಡ, ಇಂಡಿ ಮತ್ತು ಬಬಲೇಶ್ವರದಲ್ಲಿರುವ ಸರ್ಕಾರಿ ತರಬೇತಿ ಸಂಸ್ಥೆಗಳನ್ನು ಗುರುತಿಸಲಾಗಿದ್ದು, ನಿರ್ವಹಣಾ ಮಾಹಿತಿ ವ್ಯವಸ್ಥೆ ಮತ್ತು ಮೇಲ್ವಿಚಾರಣೆಯ 8 ಉಪಸಮಿತಿಗಳನ್ನು ಜಿಲ್ಲಾ ಪರಿಕರ ಕಿಟ್​ಗಳನ್ನು ಸಿದ್ಧಪಡಿಸಲು ರಚಿಸಲಾಗಿದೆ. Tata Technologies

preethi shettigar

| Edited By: sadhu srinath

Feb 17, 2021 | 12:10 PM

ವಿಜಯಪುರ: ವೃತ್ತಿಕೌಶಲ್ಯ ಹೆಚ್ಚಿಸಲು ಜಿಲ್ಲೆಯಲ್ಲಿ ಟಾಟಾ ಟೆಕ್ನಾಲಾಜಿಸ್ (Tata Technologies)  ಸಹಯೋಗದಲ್ಲಿ 6 ಸರ್ಕಾರಿ ತರಬೇತಿ ಸಂಸ್ಥೆಗಳನ್ನು ಉನ್ನತೀಕರಣಗೊಳಿಸಲು ಆಯ್ಕೆಯಾಗಿದ್ದು, ಇವುಗಳನ್ನು ನಿಗದಿತ ಅವಧಿಯಲ್ಲಿ ಪ್ರಾರಂಭಿಸಿ ತರಬೇತಿ ಕಾರ್ಯ ಮುಂದುವರೆಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಿನ್ನೆ ನಡೆದ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಟಾಟಾ ಟೆಕ್ನಾಲಜಿಸ್ ಅವರ ಸಹಭಾಗಿತ್ವದಲ್ಲಿ ರಾಜ್ಯದ 150 ಸರ್ಕಾರಿ ತರಬೇತಿ ಸಂಸ್ಥೆಗಳಲ್ಲಿ ಟೆಕ್ನಾಲಜಿಕಲ್ ಲ್ಯಾಬ್ ಮತ್ತು ವರ್ಕ್​ಶಾಪ್ ಕಟ್ಟಡಗಳನ್ನು ನಿರ್ಮಿಸಲು ಮತ್ತು ನವೀಕರಿಸಲು ನಿರ್ಧರಿಸಲಾಗಿದೆ. ಈ ಪೈಕಿ ಜಿಲ್ಲೆಯ 6 ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಅನುಮೋದನೆ ಸಹ ನೀಡಲಾಗಿದೆ ಎಂದು ತಿಳಿಸಿದರು.

ಆಯ್ಕೆ ಮಾಡಿದ ತರಬೇತಿ ಸಂಸ್ಥೆಗಳು ಯಾವುವು? ಜಿಲ್ಲೆಯ ವಿಜಯಪುರ, ಬಸಬಾಗೇವಾಡಿ, ತಿಕೋಟಾ, ನಾಲತವಾಡ, ಇಂಡಿ ಮತ್ತು ಬಬಲೇಶ್ವರದಲ್ಲಿರುವ ಸರ್ಕಾರಿ ತರಬೇತಿ ಸಂಸ್ಥೆಗಳನ್ನು ಗುರುತಿಸಲಾಗಿದೆ. ನಿರ್ವಹಣಾ ಮಾಹಿತಿ ವ್ಯವಸ್ಥೆ ಮತ್ತು ಮೇಲ್ವಿಚಾರಣೆಯ 8 ಉಪಸಮಿತಿಗಳನ್ನು ಜಿಲ್ಲಾ ಪರಿಕರ ಕಿಟ್ ಸಿದ್ಧಪಡಿಸಲು ರಚಿಸಲಾಗಿದ್ದು, ಎಲ್ಲಾ ಸಮಿತಿಗಳು ಫೆಬ್ರವರಿ 28 ರೊಳಗಾಗಿ ಸಭೆ ಜರುಗಿಸಿ ನಡಾವಳಿ ಪ್ರತಿಗಳನ್ನು ಸಲ್ಲಿಸಲಿವೆ. ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಪ್ರಾರಂಭವಾದ ತರಬೇತಿ ಕೇಂದ್ರಗಳು (2020-21 ನೇ ಸಾಲಿನ) ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದವು. ಆದರೆ ಈಗ ತರಬೇತಿ ಕೇಂದ್ರಗಳಿಗೆ ಮತ್ತೆ ಅನುಮೋದನೆ ಸಿಕ್ಕಿದ್ದು, ಇದರಿಂದಾಗಿ ಸ್ಥಳೀಯ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ.

ತರಬೇತಿಗೆ ಆದ್ಯತೆ: ಇನ್ನು ಜಿಲ್ಲೆಯಲ್ಲಿ ಸಂಕಲ್ಪ ಯೋಜನೆಯಡಿ ಸ್ಥಳೀಯ ಯುವಕ, ಯುವತಿಯರನ್ನು ಆಯ್ಕೆ ಮಾಡಿ ಸ್ಥಳೀಯವಾಗಿ ಉದ್ಯೋಗ ದೊರಕಿಸಲು ಅನುಕೂಲವಾಗುವಂತೆ ಹೊಸ ಉದ್ಯೋಗ ರೋಲ್‍ಗಳನ್ನು ಅಳವಡಿಸಿಕೊಳ್ಳಲು ಎಐಸಿಇಎಸ್ (ಆಲ್​ ಇಂಡಿಯಾ ಕಂಪ್ಯೂಟರ್ ಎಜುಕೇಶನ್ ಸೊಸೈಟಿ) ಮತ್ತು ಶ್ರೀ ದಾನೇಶ್ವರಿ ವಿದ್ಯಾವರ್ಧಕ ಸಂಘ, ನಿಡಗುಂದಿ ಸಂಸ್ಥೆಗಳಲ್ಲಿ ತರಬೇತಿ ನೀಡಲು ಸೂಚಿಸಿಲಾಗಿದೆ.

training

ಟಾಟಾ ಟೆಕ್ನಾಲಾಜಿಸ್ ಸಹಯೋಗದಲ್ಲಿ 6 ಸರ್ಕಾರಿ ತರಬೇತಿ ಸಂಸ್ಥೆಗಳ ಆಯ್ಕೆ

ಈ ವಿಷಯ ಕುರಿತು ಉದ್ಯಮ ಸಂಪರ್ಕ ಉಪಸಮಿತಿ ಮೂಲಕ ವಿವರವಾದ ಮಾಹಿತಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಕೌಶಲ್ಯ ಅಭಿವೃದ್ಧಿ ಇಲಾಖೆಯ ಆಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಫೆಲೋಶಿಪ್ ಪ್ರತಿನಿಧಿ ರಂಜನಿರಾವ್ ಅವರು ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಅವಶ್ಯಕ ಮಾಹಿತಿ ನೀಡಿದರು.

ಲೋಗೋ ವಿನ್ಯಾಸಕ್ಕೆ ಸ್ಫರ್ಧೆ: ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿಯ ಲೋಗೋ ವಿನ್ಯಾಸಗೊಳಿಸಲು ಸ್ಫರ್ಧೆಯನ್ನು ಏರ್ಪಡಿಸುವಂತೆ ಉದ್ದೇಶಿಸಲಾಗಿದೆ. ಈ ಮೂಲಕ ಯುವಕ ಯುವತಿಯರಲ್ಲಿ ಹುದಗಿದ್ದ ಪ್ರತಿಭೆ ಅನಾವರಣಗೊಳ್ಳಲು ಪ್ರೇರಣೆ ನೀಡಿದಂತಾಗುತ್ತದೆ ಮತ್ತು ಕಲಾವಿದರಿಗೆ ಪ್ರೋತ್ಸಾಹಿಸಿದಂತಾಗುತ್ತದೆ. ಈ ಸ್ಫರ್ಧೆಯಲ್ಲಿ ಭಾಗವಹಿಸಲು ಎಲ್ಲಾ ಜಿಲ್ಲೆಯ ಇತಿಹಾಸ, ಸಂಸ್ಕೃತಿ ಮತ್ತು ವಿಶಿಷ್ಟತೆಗಳನ್ನು ಬಿಂಬಿಸುವ ಲಾಂಛನ ವಿನ್ಯಾಸಗೊಳಿಸುವ ಸ್ಫರ್ಧೆಯ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

training

ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್

ಲೋಗೊ ವಿನ್ಯಾಸವನ್ನು ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಅತೀ ಹೆಚ್ಚು ಮೆಚ್ಚುಗೆ ಪಡೆದ ಮೊದಲ 3 ವಿನ್ಯಾಸಗಳಲ್ಲಿ ಅಂತಿಮವಾಗಿ ಒಂದನ್ನು ಆಯ್ಕೆ ಮಾಡಿ ವಿಜೇತರನ್ನು ಘೋಷಿಸಲಾಗುವುದು. ನಂತರದಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು ಬೆಂಗಳೂರು ಇವರಿಗೆ ಅನುಮೋದನೆಗಾಗಿ ಕಳುಹಿಸಲಾಗುವುದು. ಅವರು ವಿಜೇತರನ್ನು ಆಯ್ಕೆ ಮಾಡುತ್ತಾರೆ. ಪ್ರಥಮ ಬಹುಮಾನ 5000, ದ್ವಿತೀಯ ಬಹುಮಾನ 3000, ತೃತೀಯ ಬಹುಮಾನ 1000 ನೀಡಲಾಗುತ್ತಿದ್ದು, ಭಾಗಿಯಾದವರಿಗೆಲ್ಲಾ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ.

ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲ್ಲುಪುಡಿ ಘಟಕ-ಕಲ್ಲು ಗಣಿಗಾರಿಕೆ ಮೇಲೆ ತೀವ್ರ ನಿಗಾ: ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸ್ಪಷ್ಟನೆ

ನಿನ್ನೆ ನಡೆದ ಸಭೆಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ರಮೇಶ ದೇಸಾಯಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ವಿಜಯ ಮೆಕ್ಕಳಕಿ, ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕರಾದ ಸೋಮನಗೌಡ, ಉದ್ಯಮಿ ಎಸ್.ವಿ ಪಾಟೀಲ. ಡಿ.ಎಸ್ ಗುಡ್ಡೋಡಗಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Follow us on

Related Stories

Most Read Stories

Click on your DTH Provider to Add TV9 Kannada