ಲಾರಿ ಹರಿದು ಬಾಲಕ ಸ್ಥಳದಲ್ಲೇ ಸಾವು, ಲಾರಿ ಮೇಲೆ ಜನರಿಂದ ಕಲ್ಲು ತೂರಾಟ
ರಸ್ತೆ ದಾಟುವಾಗ ಕಬ್ಬಿಣದ ರಾಡು ತುಂಬಿಕೊಂಡು ಹೋಗುತ್ತಿದ್ದ ಲಾರಿ ಬಾಲಕನ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಸ್ತೆ ದಾಟುತ್ತಿದ್ದ ಅಕ್ಕ ತಮ್ಮ, ಇನ್ನೊಬ್ಬ ಪಾದಚಾರಿ ಬಾಲಕನಿಗೆ ಲಾರಿ ಡಿಕ್ಕಿ ಹೊಡೆದಿದೆ.
ಬೆಳಗಾವಿ: ಬಾಲಕನ ಮೇಲೆ ಲಾರಿ ಹರಿದು ಬಾಲಕ ಸ್ಥಳದಲ್ಲೇ ಸಾವು, ಈ ಘಟನೆಯಿಂದ ರೊಚ್ಚಿಗೆದ್ದ ಜನ ಕಲ್ಲು ತೂರಾಟ ನಡೆಸಿದ್ದಾರೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ಪೊಲೀಸರ ಎದುರೇ ಲಾರಿ ಮೇಲೆ ಜನರು ಕಲ್ಲು ತೂರಾಟ ನಡೆಸಿದ್ದಾರೆ. ಲಾರಿಯ ಗಾಜು ಹೊಡೆದು ಹಾಕಿದ್ದಾರೆ. ಈ ಘಟನೆಯಿಂದ ಓರ್ವ ಬಾಲಕ ಸಾವು, ಇಬ್ಬರಿಗೆ ಗಂಭೀರ ಗಾಯವಾಗಿದೆ.
ಇದೀಗ ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಬೆಳಗಾವಿ ಕ್ಯಾಂಪ್ ಪ್ರದೇಶದ ವೆಲ್‌ಕಮ್ ಹೋಟೆಲ್ ಬಳಿ ಈ ಅಪಘಾತ ನಡೆದಿದೆ. ರಸ್ತೆ ದಾಟುವಾಗ ಕಬ್ಬಿಣದ ರಾಡು ತುಂಬಿಕೊಂಡು ಹೋಗುತ್ತಿದ್ದ ಲಾರಿ ಬಾಲಕನ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಸ್ತೆ ದಾಟುತ್ತಿದ್ದ ಅಕ್ಕ ತಮ್ಮ, ಇನ್ನೊಬ್ಬ ಪಾದಚಾರಿ ಬಾಲಕನಿಗೆ ಲಾರಿ ಡಿಕ್ಕಿ ಹೊಡೆದಿದೆ. ರಸ್ತೆ ದಾಟುವ ವೇಳೆ ಲಾರಿ ಹರಿದು 10 ವರ್ಷದ ಅರ್ಹಾನ್ ಬೇಪಾರಿ ಸ್ಥಳದಲ್ಲೇ ಸಾವನ್ನಾಪ್ಪಿದ್ದಾನೆ. ಬಾಲಕನ ಅಕ್ಕ ಅತಿಕಾ ಹಾಗೂ ಪಾದಚಾರಿ ಆಯುಷ್ ಎಂಬ ಇಬ್ಬರಿಗೂ ಗಂಭೀರ ಗಾಯವಾಗಿದೆ. ಗಾಯಾಳುಗಳು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳದಲ್ಲಿ ಜಮಾಯಿಸಿದ ನೂರಾರು ಜನರು, ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಡಿಸಿಪಿ ಸ್ನೇಹಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಸ್ಥರ ಮನವೊಲಿಕೆಗೆ ಯತ್ನವನ್ನು ಮಾಡಿದ್ದಾರೆ. ಬೆಳಗಾವಿ ದಕ್ಷಿಣ ಸಂಚಾರಿ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಶಾಸಕ ಅನಿಲ್ ಬೆನಕೆ ಭೇಟಿ. ರಸ್ತೆಯಲ್ಲಿ ಧರಣಿ ನಡೆಸುತ್ತಿದ್ದ ಕುಟುಂಬಸ್ಥರ, ಸ್ಥಳೀಯರ ಮನವೊಲಿಕೆ ಮಾಡಿದ್ದಾರೆ. ಶಾಲಾ ಸಂದರ್ಭದಲ್ಲಿ ಪೊಲೀಸರ ನಿಯೋಜನೆ, ಮಾಡಲಾಗುವುದು ಮತ್ತು ತಪ್ಪಿತಸ್ಥ ಲಾರಿ ಚಾಲಕನ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಶಾಸಕ ಬೆನಕೆ ಭರವಸೆ ಹಿನ್ನೆಲೆ ಸ್ಥಳೀಯರು ಧರಣಿ ವಾಪಸ್ ಪಡೆದಿದ್ದಾರೆ.
ಕುಡಿದ ಲಾರಿ ಚಲಾಯಿಸಿದ್ದೇ ಈ ಅನಾಹುತಕ್ಕೆ ಕಾರಣ ಎಂದು ಹೇಳಲಾಗಿದೆ. ಇದೀಗ ಈ ಪ್ರದೇಶದಲ್ಲಿ ಬೆಳಗ್ಗೆ, ಸಂಜೆ ಲಾರಿಗಳ ಓಡಾಟಕ್ಕೆ ನಿಷೇಧ ಹೆರಲಾಗುವುದು. ಕ್ಯಾಂಪ್ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಮಾಡಲು ಅವಕಾಶ ಇಲ್ಲ. ಸಾಕಷ್ಟು ಬಾರಿ ರಕ್ಷಣಾ ಇಲಾಖೆಯವರ ಜತೆಗೆ ಮಾತುಕತೆ ನಡೆಸಿದ್ರೂ ಅನುಮತಿ ನೀಡ್ತಿಲ್ಲ. ರಸ್ತೆ ಕಿರಿದಾಗಿರುವುದೇ ಇಂದು ಅಪಘಾತಕ್ಕೆ ಕಾರಣವಾಗಿದೆ. ಕ್ಯಾಂಪ್ ಪ್ರದೇಶದಲ್ಲಿ ಸಂಪೂರ್ಣವಾಗಿ ಲಾರಿ ಓಡಾಟ ನಿಷೇಧಿಸುತ್ತೇವೆ ಎಂದು ಶಾಸಕ ಅನಿಲ್ ಬೆನಕೆ ಹೇಳಿದರು.