AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀನಾ ನಾನಾ! ಬೆಂಗಳೂರಿನಲ್ಲಿ ಮಧ್ಯರಾತ್ರಿ ಆಟೋ‌ ಚಾಲಕರಿಬ್ಬರ ಹುಚ್ಚಾಟ: ಡೆಡ್ಲಿ ರೇಸಿಂಗ್ ವಿಡಿಯೋ ವೈರಲ್

ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಥಾಣ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನ ಸವಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿರುತ್ತೆ. ಅದೇ ರೀತಿ ನಿನ್ನೆ ವಾಹನಗಳ ಸಂಚಾರ ಹೆಚ್ಚಾಗಿರುವಾಗಲೆ ಏರ್ಪೋಟ್ ರಸ್ತೆಗಿಳಿದ ಇಬ್ಬರು ಆಟೋ ಚಾಲಕರು ಅಕ್ಷರಶಃ ಹುಚ್ಚಾಟ ಮೆರೆದಿದ್ದಾರೆ.

ನವೀನ್ ಕುಮಾರ್ ಟಿ
| Edited By: |

Updated on: Jul 22, 2024 | 6:17 PM

Share

ದೇವನಹಳ್ಳಿ, ಜುಲೈ 22: ಕೆಂಪೇಗೌಡ ಏರ್ಪೋಟ್ ನ ಪ್ರಮುಖ ರಸ್ತೆ ದಿನದ 24 ಗಂಟೆಯು ವಾಹನಗಳ ಸಂಚಾರ ದಟ್ಟಣೆ ಇರುವುದು ಕಾಮನ್. ಆದರೆ ಇದೇ ರಸ್ತೆಯಲ್ಲಿ ತಡರಾತ್ರಿ ಆಟೋ (auto) ಚಾಲಕರಿಬ್ಬರು ರೇಸ್ ಮಾಡುವ ಮೂಲಕ ಹುಚ್ಚಾಟ ಮೆರೆದಿದ್ದಾರೆ. ಆಟೋ ಚಾಲಕರ ಡೆಡ್ಲಿ ರೇಸಿಂಗ್ (racing) ವಿಡಿಯೋ ಸ್ಥಳಿಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಆಟೋ ಚಾಲಕರ ಈ ಹುಚ್ಚಾಟಕ್ಕೆ ಇತರೆ ವಾಹನ ಸವಾರರು ಒಂದು ಕ್ಷಣ ಶಾಕ್ ಆಗಿದ್ದಾರೆ.

ನಾ ಮುಂದು ತಾ ಮುಂದು

ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಥಾಣ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನ ಸವಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿರುತ್ತೆ. ಅದೇ ರೀತಿ ನಿನ್ನೆ ವಾಹನಗಳ ಸಂಚಾರ ಹೆಚ್ಚಾಗಿರುವಾಗಲೆ ಏರ್ಪೋಟ್ ರಸ್ತೆಗಿಳಿದ ಇಬ್ಬರು ಆಟೋ ಚಾಲಕರು ಅಕ್ಷರಶಃ ಹುಚ್ಚಾಟ ಮೆರೆದಿದ್ದಾರೆ. ಅಂದಹಾಗೆ ಏರ್ಪೋಟ್ ರಸ್ತೆಯ ಹುಣಸಮಾರನಹಳ್ಳಿಯ ಏರ್ ಪೋರ್ಸ್ ಬಳಿ ಹೆದ್ದಾರಿಗೆ ಬಂದ ಇಬ್ಬರು ಚಾಲಕರು ಸುಮಾರು ಐದರಿಂದ ಆರು ಕಿಲೋ ಮೀಟರ್ ನಷ್ಟು ದೂರ ಆಟೋ ರೇಸ್ ಮಾಡಿದ್ದಾರೆ.

ಇದನ್ನೂ ಓದಿ: ರೌಡಿಶೀಟರ್​​ಗಳ ಪರ ಫ್ಯಾನ್​ ಪೇಜ್​ ತೆರೆದಿದ್ದವರಲ್ಲಿ ಬಹುಪಾಲು ಅಪ್ರಾಪ್ತ ಬಾಲಕರು!

ಏರ್ಪೋಟ್ನಿಂದ ಸಾದಹಳ್ಳಿ ಗೇಟ್​ನ ಸಿಗ್ನಲ್​ವರೆಗೂ ನಾ ಮುಂದು ತಾ ಮುಂದು ಅಂತ ಜೀವ ಭಯವೆ ಯಿಲ್ಲದೆ ಒಬ್ಬರಿಗೊಬ್ಬರು ಹೆದ್ದಾರಿಯಲ್ಲಿ ರೇಸ್ ಮಾಡಿದ್ದು ಆಟೋ ಚಾಲಕರ ರೇಸ್​ನ ವಿಡಿಯೋವನ್ನ ಕಾರು ಚಾಲಕರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ಏರ್ಪೋಟ್ ರಸ್ತೆಯಲ್ಲಿ ನೂರಾರು ಕಾರು ಬೈಕ್ ಮತ್ತು ಲಾರಿಗಳ ಒಡಾಟದ ನಡುವೆಯು ಇಬ್ಬರು ಸಮನಾಗಿ ರೇಸಿಂಗ್ ಮಾಡಿದ್ದು ಕಾರು ಚಾಲಕರು 120 ರಲ್ಲಿ ಕಾರನ್ನ ಓಡಿಸುತ್ತಾ ಹೋದ್ರು ಆಟೋ ಚಾಲಕರನ್ನ ಹಿಂದಕ್ಕೆ ಹಾಕಲು ಸಾಧ್ಯವಾಗಿಲ್ಲ. ಅಷ್ಟು ವೇಗವಾಗಿ ಏರ್ಪೋಟ್ ರಸ್ತೆಯಲ್ಲಿ ಇಬ್ಬರು ಚಾಲಕರು ರೇಸ್ ಮಾಡಿದ್ದು ಸಾದಹಳ್ಳಿ ಗೇಟ್ ವರೆಗೂ ರೇಸ್ ಮಾಡಿ ನಂತರ ವಾಪಸ್ ಬೆಂಗಳೂರಿನತ್ತ ಆಟೋ ಚಾಲಕರು ತೆರಳಿದ್ದಾರೆ.

ವಿಡಿಯೋ ವೈರಲ್​

ಇನ್ನೂ ಮೊಬೈಲ್​ನಲ್ಲಿ ಸೆರೆ ಸಿಕ್ಕ ದೃಶ್ಯದಲ್ಲಿ ಆಟೋ ನಂಬರ್ ಅನ್ನ ಚೆಕ್ ಮಾಡಿದ ಚಿಕ್ಕಜಾಲ ಪೊಲೀಸರಿಗೆ ಅದು ನಖಲಿ ನಂಬರ್ ಪ್ಲೇಟ್ ಎನ್ನುವುದು ಗೊತ್ತಾಗಿದ್ದು ಹೆದ್ದಾರಿಯಲ್ಲಿ ಕ್ಯಾಮರಾಗಳ ಮೂಲಕ ಆಟೋಗಳ ಪತ್ತೆಗೆ ಮುಂದಾಗಿದ್ದಾರೆ. ಇನ್ನೂ ವೀಕೆಂಡ್ ಬಂತ್ತು ಅಂದ್ರೆ ಸಾಕು ಏರ್ಪೋಟ್ ರಸ್ತೆಯಲ್ಲಿ ಈ ರೀತಿ ರೇಸ್ ಮತ್ತು ವೀಲಿಂಗ್ ಹಾವಳಿ ಹೆಚ್ಚಾಗಿದ್ದು ಪೊಲೀಸರ ಭಯವೆ ಇಲ್ಲದಂತಾಗಿದೆ ಅಂತ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರ ಜೀವದ ಜೊತೆ ಚಲ್ಲಾಟ; ರಾಜ್ಯದಲ್ಲಿ ಹೆಚ್ಚಾಗ್ತಿದೆ KSRTC, BMTC ಚಾಲಕರ ರೀಲ್ಸ್ ಕ್ರೇಜ್, ಸರ್ಕಾರದಿಂದ ಖಡಕ್ ಎಚ್ಚರಿಕೆ

ಏರ್ಪೋಟ್ ರಸ್ತೆಯಲ್ಲಿ ಹೈಪೈ ಸಿಸಿ ಕ್ಯಾಮರಾಗಳ ಜೊತೆಗೆ ಓವರ್ ಸ್ಪೀಡ್​​ಗೆ ಕಡಿವಾಣ ಹಾಕಿದ್ರು ಆಟೋಗಳ ಮೂಲಕ ಆಟೋ ಚಾಲಕರು ರೇಸ್ ಮಾಡಿ ಹುಚ್ಚಾಟ ಮೆರೆದಿರುವುದು ನಿಜಕ್ಕೂ ವಿಪರ್ಯಾಸ. ಇನ್ನೂ ಈ ಸಂಬಂಧ ಚಿಕ್ಕಜಾಲ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆಟೋ ಚಾಲಕರನ್ನ ಪತ್ತೆ ಹಚ್ಚಿ ಸೂಕ್ತ ಕಾನೂನು ಪಾಠ ಕಲಿಸುವ ಮೂಲಕ ಈ ರೀತಿ ಹುಚ್ಚಾಟ ಮೆರೆಯುವವರಿಗೆ ಬುದ್ದಿ ಕಲಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.