ಕೆಪಿಎಸ್​ಸಿ ಪರೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲ, ಪರೀಕ್ಷೆ ಮುಂದೂಡಲ್ಲ: ಸಿಎಂ ಸಿದ್ದರಾಮಯ್ಯ

ಆ.25ಕ್ಕೆ ಕೆಎಎಸ್​ ಪೂರ್ವಭಾವಿ ಪರೀಕ್ಷೆ ನಿಗದಿಯಾಗಿತ್ತು. ಆದರೆ ಅಂದು ಐಪಿಬಿಎಸ್​ ಪರೀಕ್ಷೆ ಇರುವ ಕಾರಣದಿಂದಾಗಿ ದಿನಾಂಕ ಬದಲಾವಣೆ ಮಾಡಲಾಗಿತ್ತು. ಇದೀಗ ಆ.27ಕ್ಕೆ ಪರೀಕ್ಷೆ ನಿಗದಿಯಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, ಕೆಪಿಎಸ್​ಸಿ ಪರೀಕ್ಷೆಯಲ್ಲಿ ಯಾವುದೇ ಗೊಂದಲ ಇಲ್ಲ. ಪರೀಕ್ಷೆಯನ್ನು ಮುಂದೂಡುವುದಿಲ್ಲ ಎಂದಿದ್ದಾರೆ.

ಕೆಪಿಎಸ್​ಸಿ ಪರೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲ, ಪರೀಕ್ಷೆ ಮುಂದೂಡಲ್ಲ: ಸಿಎಂ ಸಿದ್ದರಾಮಯ್ಯ
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ, ಸಿದ್ದರಾಮಯ್ಯ ಸ್ಪಷ್ಟನೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 24, 2024 | 3:03 PM

ಬೆಂಗಳೂರು, ಆಗಸ್ಟ್​​ 24: ಕೆಪಿಎಸ್​ಸಿ ಪರೀಕ್ಷೆಯಲ್ಲಿ (kpsc exam) ಯಾವುದೇ ಗೊಂದಲ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದ್ದಾರೆ. ಆ.27ಕ್ಕೆ ಕೆಎಎಸ್​ ಪೂರ್ವಭಾವಿ ಪರೀಕ್ಷೆ ನಿಗದಿ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರು ಪರೀಕ್ಷೆ ಮುಂದೂಡಬೇಕೆಂದು ಹೇಳುತ್ತಿದ್ದಾರೆ. ಆದರೆ ನಾವು ಈಗ ಪರೀಕ್ಷೆಯನ್ನು ಮುಂದೂಡುವುದಿಲ್ಲ. ಒಂದು ಪತ್ರಿಕೆಯನ್ನು ಮಾತ್ರ ಮುಂದೂಡಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ ಹಿಂದೆ ಆ.25ಕ್ಕೆ ಕೆಎಎಸ್​ ಪೂರ್ವಭಾವಿ ಪರೀಕ್ಷೆ ನಿಗದಿಯಾಗಿತ್ತು. ಆದರೆ ಅಂದು ಐಪಿಬಿಎಸ್​ ಪರೀಕ್ಷೆ ಇರುವ ಕಾರಣದಿಂದಾಗಿ ದಿನಾಂಕ ಬದಲಾವಣೆ ಮಾಡಲಾಗಿತ್ತು. ಇದೀಗ ಆ.27ಕ್ಕೆ ಪರೀಕ್ಷೆ ನಿಗದಿಯಾಗಿದೆ.

ಇದನ್ನೂ ಓದಿ: KPSC ಭ್ರಷ್ಟಾಚಾರದ ಕೂಪ: ಆ. 27ಕ್ಕೆ KAS ಪೂರ್ವಭಾವಿ ಪರೀಕ್ಷೆ ನಿಗದಿ ಮಾಡಿದಕ್ಕೆ ಅಭ್ಯರ್ಥಿಗಳ ಆಕ್ರೋಶ

384 ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ಸುಮಾರು 2,10,910 ಅಭ್ಯರ್ಥಿಗಳು ಬರೆಯಲಿದ್ದಾರೆ. ಆದರೆ ತರಾತುರಿಯಲ್ಲಿ ದಿನಾಂಕ ಘೋಷಣೆ ಮಾಡಲಾಗಿದೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಕೆಎಸ್​ಆರ್​ಟಿಸಿ ಬಸ್​ ಟಿಕೆಟ್​ ದರ ಏರಿಕೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು 

ಕೆಎಸ್​ಆರ್​ಟಿಸಿ ಬಸ್​ ಟಿಕೆಟ್​ ದರ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ನೀವೇ ಎಲ್ಲವನ್ನೂ ಹೇಳ್ತಿದ್ದೀರಿ. ಈಗ ನೀರಿನ ದರ ಏರಿಕೆ ಎಂದಿದ್ರಿ, ಇನ್ನೂ ಏರಿಸಿಲ್ಲ. ಬಹಳ ವರ್ಷಗಳಿಂದ ನೀರಿನ ದರ ಏರಿಕೆ ಮಾಡಿಲ್ಲ. ಜಲಮಂಡಳಿಯೂ ಕಷ್ಟದ ಪರಿಸ್ಥಿತಿಯಲ್ಲಿ ಇದೆ. ಆದ್ದರಿಂದ ಡಿಸಿಎಂ ಡಿ.ಕೆ.ಶಿವಕುಮಾರ್​ ಹಾಗೆ ಹೇಳಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಹೈಕಮಾಂಡ್ ಬೆಂಬಲ ನೀಡಿದ್ದರೂ ಮುಂದಿದೆ ಬದಲಾವಣೆ? ಕಾಂಗ್ರೆಸ್ ಉನ್ನತ ಮೂಲಗಳಿಂದ ಸುಳಿವು

ಮೂಡ ಪ್ರಕರಣದಲ್ಲಿ ಬಿಜೆಪಿಗರು ಪಾದಯಾತ್ರೆ ಮಾಡಿದರು. ನಾವು ಅದನ್ನು ರಾಜಕಾರಣಿವಾಗಿ ಎದುರಿಸಿದ್ದೇವೆ. ರಾಜ್ಯಪಾಲರ ಪ್ರಾಸ್ಯೂಕ್ಯೂಷನ್ ಸಂವಿಧಾನ ಬಾಹಿರ. ರಾಜಭವನ ದುರ್ಬಳಕೆ ಆಗಿದೆ. ರಾಷ್ಟ್ರಪತಿಗಳಿಗೆ ದೂರು ವಿಚಾರವಾಗಿ ಮಾತನಾಡಿದ್ದು, ಎಲ್ಲಾ ಅಭಿಪ್ರಾಯಗಳು ಮುಕ್ತವಾಗಿವೆ ಎಂದು ಹೇಳಿದ್ದಾರೆ.

ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಿ ನಾವು ತೀರ್ಮಾನ ಮಾಡುತ್ತೇವೆ

ರಾಜ್ಯಪಾಲರು ಸರ್ಕಾರದ 11 ಬಿಲ್​ ವಾಪಸ್​ ಕಳುಹಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ವಾಪಸ್​ ಕಳುಹಿಸಿರುವ ಬಿಲ್​ಗಳು ಸದನದಲ್ಲಿ ಪಾಸ್ ಆಗಿದ್ದವು. ವಿವರಣೆ ಕೇಳಿದ್ರೆ ಕೊಡುತ್ತಿದ್ದೆವು, ಆದರೆ ವಾಪಸ್ ಕಳುಹಿಸಿದ್ದಾರೆ. ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಿ ನಾವು ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.