ಬೆದರಿಕೆ ಇಮೇಲ್ ಪ್ರಕರಣ: ಪ್ರೋಟಾನ್ ಇ-ಮೇಲ್ ವಿರುದ್ಧ ಕೇಂದ್ರ ಕ್ರಮ ಕೈಗೊಂಡಿಲ್ಲ ಎಂದ ಪರಮೇಶ್ವರ್
ಬಾಂಬ್ ಬೆದರಿಕೆ ಮೇಲ್ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪ್ರೋಟಾನ್ ಇ-ಮೇಲ್ ವಿದೇಶದಲ್ಲಿದೆ, ಈ ಬಗ್ಗೆ ಮಾಹಿತಿ ಕೇಳಿದ್ದೇವೆ. ಪ್ರೋಟಾನ್ ಇ-ಮೇಲ್ ಐಡೆಂಟಿಟಿ ಕೇಳಿದ್ದೇವೆ. ಪ್ರೋಟಾನ್ ಇ-ಮೇಲ್ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದ್ದಾರೆ.
ಬೆಂಗಳೂರು, ಮಾರ್ಚ್ 6: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹಸಚಿವ ಜಿ. ಪರಮೇಶ್ವರ್ (Parameshwara) ಅವರಿಗೆ ಬಾಂಬ್ ಬೆದರಿಕೆ ಮೇಲ್ ರಾಜ್ಯಾದ್ಯಂತ ಆತಂಕ ಸೃಷ್ಟಿಸಿದೆ. ಹೀಗಾಗಿ ಬೆದರಿಕೆಯ ಮೇಲ್ ಮಾಡಿರುವ ಕೇಸ್ ತನಿಖೆ ಚುರುಕುಗೊಂಡಿದೆ. ಸದ್ಯ ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪ್ರೋಟಾನ್ ಇ-ಮೇಲ್ ವಿದೇಶದಲ್ಲಿದೆ, ಈ ಬಗ್ಗೆ ಮಾಹಿತಿ ಕೇಳಿದ್ದೇವೆ. ಪ್ರೋಟಾನ್ ಇ-ಮೇಲ್ ಐಡೆಂಟಿಟಿ ಕೇಳಿದ್ದೇವೆ. ಸುಮಾರು 35 ಶಾಲೆಗಳಿಗೆ ಇದೇ ರೀತಿ ಬೆದರಿಕೆ ಇ-ಮೇಲ್ ಬಂದಿತ್ತು. ಪ್ರೋಟಾನ್ ಇ-ಮೇಲ್ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಕೂಡ ಹಲವು ಶಾಲೆಗಳಿಗೆ ಬೆದರಿಕೆ ಮೇಲ್ ಬಂದಿದ್ದವು. ಇಂತಹ ಕೇಸ್ಗಳನ್ನ ಭೇದಿಸುವುದಕ್ಕೆ ಸ್ವಲ್ಪ ಕಷ್ಟ ಆಗುತ್ತೆ. ಬೇರೆ ದೇಶದ ಏಜೆನ್ಸಿಗಳು ಸಪೋರ್ಟ್ ಮಾಡುತ್ತಿಲ್ಲ. ಫೇಸ್ಬುಕ್, ಗೂಗಲ್ನಂಥ ಕಂಪನಿಗಳು ಸಹಕರಿಸಲ್ಲ. ಅಂಥ ಕಂಪನಿ ಸಹಕರಿಸಿದರೆ ಕೇಸ್ ಭೇದಿಸಬಹುದು ಎಂದಿದ್ದಾರೆ.
ಕೇಂದ್ರದ ಇಂಟೆಲಿಜೆನ್ಸ್ ಕೂಡ ಸ್ಥಳೀಯವಾಗಿ ಕೆಲಸ ಮಾಡುತ್ತಾರೆ
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರದ ಇಂಟೆಲಿಜೆನ್ಸ್ ಕೂಡ ಸ್ಥಳೀಯವಾಗಿ ಕೆಲಸ ಮಾಡುತ್ತಾರೆ. ಐಬಿ, ಎನ್ಐಎ ಮಾಹಿತಿಯನ್ನು ಸಂಗ್ರಹಿಸಿ ಹಂಚಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಬಾಂಬ್ ಬೆದರಿಕೆ, ಬಸ್ ಸ್ಟ್ಯಾಂಡ್, ರೈಲ್ವೆ ಬ್ಲಾಸ್ಟ್ ಮಾಡುವುದಾಗಿ ಇಮೇಲ್
ತನಿಖಾ ಸಂಸ್ಥೆಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ. ನಮ್ಮವರು ಕೇಸ್ನಲ್ಲಿ ತುಂಬಾ ಮುಂದೆ ಹೋಗಿದ್ದಾರೆ. ಹೀಗಾಗಿ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಿನ್ನೆ ಕೇಸ್ನಲ್ಲಿ ಮುಖ್ಯ ಲೀಡ್ ಸಿಕ್ಕಿದೆ. ಆದಷ್ಟು ಬೇಗ ಕೇಸನ್ನ ಬೇಧಿಸಲಾಗುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ: ಎನ್ಐಎ ತನಿಖೆ ಆರಂಭ, ಕೆಫೆಯಲ್ಲಿ ಅಧಿಕಾರಿಗಳ ತಲಾಶ್
ಎಫ್ಎಸ್ಎಲ್ ರಿಪೋರ್ಟ್ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಎಫ್ಎಸ್ಎಲ್ ರಿಪೋರ್ಟ್ ಆಧರಿಸಿಯೇ ಮೂವರನ್ನ ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ರಿಪೋರ್ಟ್ ಬಂದಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದೇವೆ. ಈಗ ಬಂಧನ ಮಾಡಲಾಗಿದೆ. ತನಿಖೆ ನಡೆಯುತ್ತಿದೆ. ಬಿಜೆಪಿಯವರು ಅವರನ್ನ ಇವರನ್ನ ಬಂಧಿಸಿ ಇವರನ್ನ ಬಂಧಿಸಿ ಎಂದು ಹೇಳುತ್ತಾರೆ. ಅವರು ವಿರೋಧ ಪಕ್ಷದವರು, ಮಾತನಾಡುವ ಹಕ್ಕಿದೆ ಮಾತನಾಡಲಿ. ಆದರೆ ಸಾಕ್ಷಿಗಳಲ್ಲದೇ ಯಾರನ್ನ ಬಂಧನ ಮಾಡುವುದಕ್ಕೆ ಆಗಲ್ಲ. ತನಿಖೆ ನಡೀತಿದೆ ನಡೆಯಲಿ ಎಂದಿದ್ದರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.