KSRTC, BMTC-NWKSRTC, KKRTC ಸಂಕಷ್ಟದಲ್ಲಿ: ಶಕ್ತಿ ಯೋಜನೆಯ ಬಾಕಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಪತ್ರ

ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಪ್ರಮುಖವಾಗಿದೆ. ಮಹಿಳೆಯರಿಗೆ ರಾಜ್ಯ ಸಾರಿಗೆಯ 4 ನಿಗಮಗಳ ಬಸ್‌ ಗಳಲ್ಲಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಇದೆ. ಸರ್ಕಾರದ ಪಾಲಿಗೆ ಇದು ಮಹತ್ವಾಕಾಂಕ್ಷಿ ಯೋಜನೆ ಆದರೂ, ಇದರಿಂದ 4 ನಿಗಮಗಳು ನಷ್ಟದಲ್ಲಿದೆ. ಈ ಸಂಬಂಧ ಶಕ್ತಿ ಯೋಜನೆಯ ಬಾಕಿ ಹಣ ಬಿಡುಗಡೆಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹಾಗಾದ್ರೆ, ಯಾವ ನಿಗಮದ ಎಷ್ಟು ಹಣ ಬಾಕಿ ಇದೆ ಎನ್ನುವ ಡಿಟೇಲ್ಸ್ ಇಲ್ಲಿದೆ.

KSRTC, BMTC-NWKSRTC, KKRTC ಸಂಕಷ್ಟದಲ್ಲಿ: ಶಕ್ತಿ ಯೋಜನೆಯ ಬಾಕಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಪತ್ರ
Shakti Yojana
Edited By:

Updated on: Aug 14, 2026 | 4:45 PM

ಬೆಂಗಳೂರು, (ಆಗಸ್ಟ್ 14): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKSRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ (KKRTC) ಸಂಸ್ಥೆಗಳು ನಷ್ಟದಲ್ಲಿದೆ. ಕಳೆದ 5 ವರ್ಷಗಳಿಗೆ ಹೋಲಿಕೆ ಮಾಡಿದರೆ ಶಕ್ತಿ ಯೋಜನೆಯಿಂದಾಗಿ (Karnataka Shakathi Scheme) ನಿಗಮಗಳು ಮತ್ತಷ್ಟು ನಷ್ಟ ಅನುಭವಿಸುತ್ತಿವೆ. ಸಿಬ್ಬಂದಿಗೆ ಸಂಬಳ ನೀಡಲು ಸಹ ಹಣವಿಲ್ಲದಂತಾಗಿದೆ. ಹೀಗಾಗಿ ಶಕ್ತಿ ಯೋಜನೆಯ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ನಾಲ್ಕು ನಿಗಮಗಳ ಎಂಡಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 11.06.2023 ರಿಂದ 30.06.2026 ರವರೆಗೆ ಬರೋಬ್ಬರಿ 5,418 ಕೋಟಿ ರೂ. ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಕೆಎಸ್​​​ಆರ್​​​ಟಿಸಿಯ ಅತಿ ಹೆಚ್ಚು ಹಣ ಬಾಕಿ

ಯಾವ್ಯಾವ ನಿಗಮಗಳಿಗೆ ಎಷ್ಟೆಷ್ಟು ಬಾಕಿ ಇದೆ ಎನ್ನುವುದನ್ನು ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಇದರ ಪ್ರಕಾರ, ಅತೀ ಹೆಚ್ಚಿನ ಬಾಕಿ ಹಣವನ್ನು ಕೆಎಸ್ಆರ್ಟಿಸಿಗೆ ಸರ್ಕಾರ ಕೊಡಬೇಕಿದೆ. ಕೆಎಸ್ ಆರ್ ಟಿಸಿಗೆ ಬರೋಬ್ಬರಿ 2,943 ಕೋಟಿ ರೂಪಾಯಿ ಬಾಕಿ ಹಣವನ್ನು ರಾಜ್ಯ ಸರ್ಕಾರ ಕೊಡಬೇಕಿದೆ.

ಬಿಡಿ ಭಾಗಗಗಳ ಖರೀದಿಗೂ ಬಿಎಂಟಿಸಿ ಬಳಿ ಹಣವಿಲ್ಲ

Karnataka Shakathi Scheme: ಶಕ್ತಿ ಯೋಜನೆಯ ಬಾಕಿ ಹಣ ಬಿಡುಗಡೆ ಮಾಡಿ, KSRTC ಎಂಡಿ ಪತ್ರಶಕ್ತಿ ಯೋಜನೆಯ ಬಾಕಿ ಬಿಡುಗಡೆ ಮಾಡದ್ದರಿಂದ ಸಾರಿಗೆ ನಿಗಮಗಳು ತೀವ್ರವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿಗರ ಜೀವನಾಡಿ ಬಿಎಂಟಿಸಿ ಬಳಿ ಸಮಾನು ಖರೀದಿಸಲು ಸಹ ಹಣವಿಲ್ಲ. ನಾಲ್ಕು ವರ್ಷಗಳ ಅವಧಿಯಲ್ಲಿ ಬಿಎಂಟಿಸಿಗೆ ಸರ್ಕಾರ ಬರೋಬ್ಬರಿ 1,019 ಕೋಟಿ ರೂ.ಬಾಕಿ ಹಣ ನೀಡಬೇಕಿದೆ. ಹೀಗಾಗಿ ಸ್ಪೇರ್ ಪಾರ್ಟ್ಸ್ ಖರೀದಿ ಮಾಡಲು ಬಿಎಂಟಿಸಿ ಬಳಿ ಹಣವಿಲ್ಲ. ಸಾರಿಗೆ ನೌಕರಿಗೆ ಬಿಡುಗಡೆ ಮಾಡಬೇಕಿರುವ ವೇತನ ಹಿಂಬಾಕಿ 821 ಕೋಟಿ ರೂ. ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. 2023-24 ರಲ್ಲಿ 205 ಕೋಟಿ ರೂ., 2024-25ರಲ್ಲಿ 194 ಕೋಟಿ ರೂ. 2025-26ರಲ್ಲಿ 496 ಕೋಟಿ ರೂ. ಹಾಗೂ 2026-27ರಲ್ಲಿ 122 ಕೋಟಿ ರೂ. ಬಾಕಿ ಹಣವನ್ನು ಸರ್ಕಾರ ನೀಡಬೇಕಿದೆ.

ಯಾವ ನಿಗಮದ ಎಷ್ಟು ಹಣ ಬಾಕಿ?

ರಾಜ್ಯ ಸರ್ಕಾರ, ಯಾವ ನಿಗಮಕ್ಕೆ ಎಷ್ಟು ಬಾಕಿ ಹಣ ನೀಡಬೇಕು ಎನ್ನುವುದನ್ನು ನೋಡುವುದಾರೆ, ಕೆಎಸ್​​ಆರ್​​​ಸಿಗೆ ಅತಿ ಹೆಚ್ಚು.  ಕೆಎಸ್​​​ಆರ್​​​ಟಿಸಿ- 2,943 ಕೋಟಿ ರೂಪಾಯಿ,  ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 999 ಕೋಟಿ ರೂ., ಬಿಎಂಟಿಸಿ ಗೆ 1,019 ಕೋಟಿ ರೂ., ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 1306 ಕೋಟಿ ರೂಪಾಯಿ ಬಾಕಿ ಇದೆ.

ಇನ್ನು ಈ ಬಗ್ಗೆ ಸಾರಿಗೆ ಸಚಿವ ಭೈರತಿ ಸುರೇಶ್ ಪ್ರತಿಕ್ರಿಯಿಸಿದ್ದು, ಸರ್ಕಾರಕ್ಕೆ ನಾವು ಈಗಾಗಲೇ ಹಣವನ್ನು ಕೇಳಿದ್ದೇವೆ. ಹಂತ ಹಂತವಾಗಿ ನಿಗಮಗಳಿಗೆ ಹಣ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿದ್ದು, ಬಿಡುಗಡೆ ಮಾಡುತ್ತೆ. ಇನ್ನು ಇವಿ ಬಸ್ ಕ್ಯಾನ್ಸಲ್ ಆಗೋದಿಲ್ಲ. ಈಗಾಗಲೇ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇವೆ. ಮುಂದಿನ ಕ್ಯಾಬಿನೆಟ್ ನಲ್ಲಿ 4500 ಎಲೆಕ್ಟ್ರಿಕ್ ಬಸ್ಸುಗಳನ್ನು ತೆಗೆದುಕೊಳ್ಳಲು ಅನುಮತಿ ಸಿಗಲಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us