AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇತನ ಇಲ್ಲ; ಕತ್ತಲೆಯ ದೀಪಾವಳಿ ಆಚರಿಸುವ ದೌರ್ಭಾಗ್ಯವಿದೆ: KSRTC ಸಿಬ್ಬಂದಿ ಆಕ್ರೋಶ

ಕೊರೊನಾ ಹಾವಳಿಯಲ್ಲೂ ಧೃತಿಗೆಡದೆ ಕೆಲಸ ನಿರ್ವಾಹಿಸಿದ KSRTC ಸಿಬ್ಬಂದಿಗೆ ಕತ್ತಲೆಯ ದೀಪಾವಳಿ ಆಚರಿಸುವ ದೌರ್ಭಾಗ್ಯ ಎದುರಾಗಿದೆ. ನೌಕರರಿಂದ ಹಗಲು ರಾತ್ರಿ ದುಡುಸಿಕೊಂಡ ಸಾರಿಗೆ ನಿಗಮಗಳು ದೀಪಾವಳಿ ಹಬ್ಬ ಇದ್ರೂ, ಇನ್ನೂ ಸಹ ನೌಕರರಿಗೆ ಸಂಬಳದ ಭಾಗ್ಯ ಕರುಣಿಸಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಬ್ಬಂದಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಆಫೀಸ್ ಸಿಬ್ಬಂದಿಗಳಿಗೆ ಒಂದನೇ ತಾರೀಖಿನಂದೆ ಸಂಬಳವಾಗ್ತಿತ್ತು. ನಾಲ್ಕರಂದು ಡಿಪೋ ಮೆಕ್ಯಾನಿಕ್ಸ್​ಗೆ ಹಾಗೂ ಏಳನೇ ತಾರೀಖಿನಂದು ಡ್ರೈವರ್ ಕಂಡಕ್ಟರ್ ಗಳಿಗೆ ಸಂಬಳವಾಗ್ತಿತ್ತು. ಆದರೆ ಈ ಬಾರಿ […]

ವೇತನ ಇಲ್ಲ; ಕತ್ತಲೆಯ ದೀಪಾವಳಿ ಆಚರಿಸುವ ದೌರ್ಭಾಗ್ಯವಿದೆ: KSRTC ಸಿಬ್ಬಂದಿ ಆಕ್ರೋಶ
ಪೃಥ್ವಿಶಂಕರ
|

Updated on:Nov 14, 2020 | 12:51 PM

Share

ಕೊರೊನಾ ಹಾವಳಿಯಲ್ಲೂ ಧೃತಿಗೆಡದೆ ಕೆಲಸ ನಿರ್ವಾಹಿಸಿದ KSRTC ಸಿಬ್ಬಂದಿಗೆ ಕತ್ತಲೆಯ ದೀಪಾವಳಿ ಆಚರಿಸುವ ದೌರ್ಭಾಗ್ಯ ಎದುರಾಗಿದೆ.

ನೌಕರರಿಂದ ಹಗಲು ರಾತ್ರಿ ದುಡುಸಿಕೊಂಡ ಸಾರಿಗೆ ನಿಗಮಗಳು ದೀಪಾವಳಿ ಹಬ್ಬ ಇದ್ರೂ, ಇನ್ನೂ ಸಹ ನೌಕರರಿಗೆ ಸಂಬಳದ ಭಾಗ್ಯ ಕರುಣಿಸಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಬ್ಬಂದಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಆಫೀಸ್ ಸಿಬ್ಬಂದಿಗಳಿಗೆ ಒಂದನೇ ತಾರೀಖಿನಂದೆ ಸಂಬಳವಾಗ್ತಿತ್ತು. ನಾಲ್ಕರಂದು ಡಿಪೋ ಮೆಕ್ಯಾನಿಕ್ಸ್​ಗೆ ಹಾಗೂ ಏಳನೇ ತಾರೀಖಿನಂದು ಡ್ರೈವರ್ ಕಂಡಕ್ಟರ್ ಗಳಿಗೆ ಸಂಬಳವಾಗ್ತಿತ್ತು. ಆದರೆ ಈ ಬಾರಿ 14ನೇ ತಾರೀಖಾದ್ರು ಸಂಬಳವಾಗಿಲ್ಲ.

1 ಲಕ್ಷದ 20 ಸಾವಿರ ಸಿಬ್ಬಂಧಿಗಳಿಗೆ ಸಂಬಳವಾಗಿಲ್ಲ.. KSRTC ಯಲ್ಲಿ 38 ಸಾವಿರ ನೌಕರರು ಮತ್ತು ಸಿಬ್ಬಂದಿಗಳಿದ್ದಾರೆ. ಅಲ್ಲದೆ KSRTC, BMTC, NEKRTC ಹಾಗೂ NEKRTC ಸೇರಿ 1 ಲಕ್ಷದ 20 ಸಾವಿರ ನೌಕರರು ಮತ್ತು ಸಿಬ್ಬಂದಿಗಳಿದ್ದಾರೆ. ರಾಜ್ಯದಲ್ಲಿ ಕೋವಿಡ್ ಹೆಚ್ಚಾಗಿರುವ ಕಾರಣದಿಂದ ಸರಿಯಾದ ಸಮಯಕ್ಕೆ ಸಂಬಳವಾಗ್ತಿಲ್ಲ. ಈ ಬಾರಿ ಹಬ್ಬ ಇರೋದ್ರಿಂದ ಸರಿಯಾದ ಸಮಯಕ್ಕೆ ಸಾರಿಗೆ ಸಿಬ್ಬಂದಿಗಳು ಸಂಬಳದ ನಿರೀಕ್ಷೆಯಲ್ಲಿದ್ದರು. ಆದರೆ ಈ ಬಾರಿಯೂ ಇಲ್ಲಿಯವರೆಗೆ ನಿಗಮಗಳು ಸಂಬಳ ಕರುಣಿಸಿಲ್ಲ.

ಬಿಎಂಟಿಸಿಯಲ್ಲೂ ಇದೆ ಗೋಳು.. ಇದು ಕೆಎಸ್ಆರ್ಟಿಸಿ ಕಥೆಯಾದ್ರೆ ಇತ್ತ ಬಿಎಂಟಿಸಿಯಲ್ಲೂ ಇದೆ ಗೋಳು. ಬಿಎಂಟಿಸಿಯಲ್ಲಿ 38 ಸಾವಿರ ಸಿಬ್ಬಂದಿಗಳು ಹಾಗೂ ನೌಕರರಿದ್ದಾರೆ. ಬಿಎಂಟಿಸಿಯಲ್ಲಿ ಪ್ರತಿ ತಿಂಗಳು ಏಳನೇ ತಾರೀಖಿನಂದು ಸಂಬಳ ನೀಡ್ತಿದ್ರು. ಆದರೆ ಈ ಬಾರಿ ಇಲ್ಲಿಯವರೆಗೂ ಸಂಬಳವಾಗಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿಬ್ಬಂದಿಗಳು ನೋವು ತೋಡಿಕೊಳ್ತಿದ್ದಾರೆ. ಕೋವಿಡ್ ಬಳಿಕ ಸಂಬಳಕ್ಕೆ ಸಾರಿಗೆ ನಿಗಮಗಳು ಸರ್ಕಾರವನ್ನೇ ನೆಚ್ಚಿಕೊಂಡಿವೆ. ಹೀಗಾಗಿ ಸರ್ಕಾರ ಕೊಟ್ರೆ ಮಾತ್ರ ನಾವು ನೌಕರರಿಗೆ ಸಂಬಳ ನೀಡಲು ಸಾಧ್ಯ ಎಂದು ನಿಗಮಗಳು ಸಬೂಬು ಹೇಳುತ್ತಿವೆ.

Published On - 12:50 pm, Sat, 14 November 20