’ನನ್ನದು ರಿಯಲ್ ಎಸ್ಟೇಟ್ ವ್ಯವಹಾರ.. ಸ್ನೇಹ ಹೊರತಾಗಿ BDA ಡಾ.ಸುಧಾ ಜೊತೆ ಯಾವುದೇ ವ್ಯವಹಾರಿಕ ಸಂಬಂಧ ಮಾಡಿಲ್ಲ’
ಬೆಂಗಳೂರು: ಕೆಎಎಸ್ ಅಧಿಕಾರಿ ಡಾ.ಸುಧಾ ಮತ್ತು ಸ್ನೇಹಿತೆ ರೇಣುಕಾ ಮನೆ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ9 ಗೆ ಡಾ.ಸುಧಾ ಸ್ನೇಹಿತೆ ರಿಯಲ್ ಎಸ್ಟೇಟ್ ಏಜೆಂಟ್ ರೇಣುಕಾ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಪೂರ್ವಿಕರಿಂದಲೂ ನಮ್ಮದು ಶ್ರೀಮಂತ ಕುಟುಂಬ.. ಕೆಎಎಸ್ ಅಧಿಕಾರಿ ಡಾ.ಸುಧಾ ನನಗೆ ಇತರೆ ಅಧಿಕಾರಿಗಳಂತೆ ಪರಿಚಿತರು. ಓರ್ವ ಅಧಿಕಾರಿಗೆ ಬೇನಾಮಿಯಾಗುವ ಇರಾದೆ ನನಗಿಲ್ಲ, ನನ್ನದೇ ಸ್ವಂತ ಉದ್ಯಮ ಇದೆ. ಆದ್ದರಿಂದ ಯಾವ ಉದ್ದೇಶ ಇಟ್ಟುಕೊಂಡು ನನ್ನ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದಾರೋ ನನಗೆ […]

ಬೆಂಗಳೂರು: ಕೆಎಎಸ್ ಅಧಿಕಾರಿ ಡಾ.ಸುಧಾ ಮತ್ತು ಸ್ನೇಹಿತೆ ರೇಣುಕಾ ಮನೆ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ9 ಗೆ ಡಾ.ಸುಧಾ ಸ್ನೇಹಿತೆ ರಿಯಲ್ ಎಸ್ಟೇಟ್ ಏಜೆಂಟ್ ರೇಣುಕಾ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಪೂರ್ವಿಕರಿಂದಲೂ ನಮ್ಮದು ಶ್ರೀಮಂತ ಕುಟುಂಬ.. ಕೆಎಎಸ್ ಅಧಿಕಾರಿ ಡಾ.ಸುಧಾ ನನಗೆ ಇತರೆ ಅಧಿಕಾರಿಗಳಂತೆ ಪರಿಚಿತರು. ಓರ್ವ ಅಧಿಕಾರಿಗೆ ಬೇನಾಮಿಯಾಗುವ ಇರಾದೆ ನನಗಿಲ್ಲ, ನನ್ನದೇ ಸ್ವಂತ ಉದ್ಯಮ ಇದೆ. ಆದ್ದರಿಂದ ಯಾವ ಉದ್ದೇಶ ಇಟ್ಟುಕೊಂಡು ನನ್ನ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದಾರೋ ನನಗೆ ಗೊತ್ತಿಲ್ಲ ಎಂದು ರೇಣುಕಾ ಹೇಳಿದ್ರು. ಅಲ್ಲದೆ ನನ್ನ ಪೂರ್ವಿಕರಿಂದಲೂ ನಮ್ಮದು ಶ್ರೀಮಂತ ಕುಟುಂಬ, ಎಸಿಬಿ ಅಧಿಕಾರಿಗಳ ದಾಳಿ ವೇಳೆ ನಮ್ಮ ಮನೆಯಲ್ಲಿ 30 ಲಕ್ಷ ನಗದು ಹಣ, ಹೆಚ್ಚಿನ ಪ್ರಮಾಣದಲ್ಲೇ ಚಿನ್ನಾಭರಣ ಇತ್ತು.
20 ವರ್ಷಗಳಿಂದಲೂ ನನ್ನದು ರಿಯಲ್ ಎಸ್ಟೇಟ್ ವ್ಯವಹಾರ.. ನನ್ನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ದಾಳಿಗೆ ಕೆಲವು ದಿನಗಳ ಹಿಂದೆಯಷ್ಟೇ ನನ್ನ ತಾಯಿ ಒಡವೆಗಳನ್ನ ನೀಡಿದ್ರು. ಕಳೆದ 20 ವರ್ಷಗಳಿಂದಲೂ ನಾನು ರಿಯಲ್ ಎಸ್ಟೇಟ್ ವ್ಯವಹಾರ ಮಾಡ್ತಿದ್ದೇನೆ. ನಾನು ರಿಯಲ್ ಎಸ್ಟೇಟ್ ವ್ಯವಹಾರದ ನಿಮಿತ್ತ ಹಲವು ಬಾರಿ ಬಿಡಿಎಗೆ ಭೇಟಿ ನೀಡಿದ್ದೇನೆ. ಹಾಗೂ ಮಹಿಳಾ ಅಧಿಕಾರಿಯಾಗಿದ್ದರಿಂದ ಡಾ.ಸುಧಾ ನನ್ನ ಸ್ನೇಹಿತರಾಗಿದ್ದರು. ಸ್ನೇಹ ಹೊರತಾಗಿ ಯಾವುದೇ ವ್ಯವಹಾರಿಕ ಸಂಬಂಧ ನಮ್ಮಲ್ಲಿ ಇರಲಿಲ್ಲ.
ನಾನು ಯಾವ ಅಧಿಕಾರಿಗೂ ಲಂಚ ನೀಡಿ ಕೆಲಸ ಮಾಡಿಸಿಕೊಂಡಿಲ್ಲ.. ನಾನು ಯಾವುದೇ ಕೆಲಸವನ್ನು ಯಾವ ಅಧಿಕಾರಿಗೂ ಲಂಚ ನೀಡಿ ಮಾಡಿಸಿಕೊಂಡಿಲ್ಲ. ನನ್ನ ಸಂಬಂಧಿ ವಕೀಲ ವೃತ್ತಿ ಮಾಡ್ತಿದ್ದು, ನನ್ನ ಮನೆಯಲ್ಲೇ ಕಕ್ಷಿದಾರರಿಗೆ ಸಲಹೆ ನೀಡ್ತಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿರುವುರಿಂದ ಕೆಲವು ಜಮೀನಿನ ದಾಖಲೆ ಪತ್ರಗಳಿದ್ದವು. ನನ್ನ ಮನೆಯಲ್ಲಿದ್ದ ಜಮೀನು ದಾಖಲೆಗಳು, ಮನೆ ಸದಸ್ಯರ ಮೊಬೈಲ್ ಫೋನ್ಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎಸಿಬಿ ಅಧಿಕಾರಿಗಳು ಪರಿಶೀಲನೆ ನಂತರ ನಮ್ಮ ದಾಖಲೆಗಳನ್ನು ವಾಪಾಸ್ ನೀಡಲಿದ್ದಾರೆಂಬ ವಿಶ್ವಾಸವಿದೆ ಎಂದು ಕೆಎಎಸ್ ಅಧಿಕಾರಿ ಡಾ.ಸುಧಾ ಸ್ನೇಹಿತೆ ರೇಣುಕಾ ಹೇಳಿಕೆ ನೀಡಿದ್ದಾರೆ.




