ಜಮೀನು ಒತ್ತುವರಿ ಪ್ರಶ್ನಿಸಿದ್ದಕ್ಕೆ ಸವರ್ಣಿಯರಿಂದ ಹಲ್ಲೆ ಆರೋಪ: ಅಟ್ರಾಸಿಟಿ ಕೇಸ್ ದಾಖಲು
ಪೊಲೀಸ್ ಠಾಣೆ ಎದುರು ಕೋಳಿ ಬಲಿಕೊಟ್ಟು ವಿಚಿತ್ರ ಆಚರಣೆ ಮಾಡಿರುವಂತಹ ಘಟನೆ ಜಿಲ್ಲೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕೋಳಿ ಕೊಯ್ದು ರಕ್ತವನ್ನು ಪೊಲೀಸ್ ಠಾಣೆಯ ಎರಡು ಗೋಡೆಗಳಿಗೆ ವ್ಯಕ್ತಿಗಳು ಹಚ್ಚಿದ್ದಾರೆ.
ತುಮಕೂರು: ಜಮೀನು ಒತ್ತುವರಿ ಪ್ರಶ್ನಿಸಿದ್ದಕ್ಕೆ ಸವರ್ಣಿಯರಿಂದ ದಲಿತರ ಮೇಲೆ ಹಲ್ಲೆ ಆರೋಪ ಮಾಡಿರುವಂತಹ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಭರಕಾನಳು ಗ್ರಾಮದಲ್ಲಿ ನಡೆದಿದೆ. ಗಂಗಾಧರ ಮತ್ತು ಮಂಗಳಮ್ಮ ಎಂಬುವರ ಮೇಲೆ ಹಲ್ಲೆ ಆರೋಪ ಮಾಡಲಾಗಿದೆ. ಅಜ್ಜಿ ಗುಡ್ಡೆ ಗ್ರಾಮದ ಸರ್ವೆ ನಂಬರ್ 76ರಲ್ಲಿ ಸುಮಾರು 20 ವರ್ಷಗಳಿಂದ ಮೂರು ಎಕರೆ ಜಾಗದಲ್ಲಿ ಗಂಗಾಧರ, ಮಂಗಳಮ್ಮ ಉಳುಮೆ ಮಾಡುತ್ತಿದ್ದರು. ಜಮೀನಿನ ಪಕ್ಕದಲ್ಲೇ ಇದ್ದ ಸವರ್ಣಿಯರು ಅಡ್ಡವಾಗಿ ಬದು ನಿರ್ಮಿಸಿದ್ದರು. ಈ ಬಗ್ಗೆ ಪ್ರಶ್ನಿಸಲು ಹೋಗಿದ್ದ ಗಂಗಾಧರ ಮತ್ತು ಮಂಗಳಮ್ಮ. ಈ ವೇಳೆ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ರಾಮಯ್ಯ, ತ್ರಿವೇಣಿ, ಕೃಷ್ಣಮೂರ್ತಿ ಸರ್ವಮಂಗಳ ಹಾಗೂ ತೀರ್ಥ ಪ್ರಸಾದ್ ಎಂಬುವರಿಂದ ಹಲ್ಲೆ ಆರೋಪ ಮಾಡಿದ್ದು, ಪಕ್ಕದ ಜಮೀನಿನವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು ಮಾಡಲಾಗಿದೆ. ಜೊತೆಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಕೂಡ ಮಾಡಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪ ಮಾಡುತ್ತಿರುವ ಗಂಗಾಧರ ಮತ್ತು ಮಂಗಳಮ್ಮ, ಹುಳಿಯಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಪೊಲೀಸ್ ಠಾಣೆ ಎದುರು ಕೋಳಿ ಬಲಿಕೊಟ್ಟು ವಿಚಿತ್ರ ಆಚರಣೆ
ಹಾಸನ: ಪೊಲೀಸ್ ಠಾಣೆ ಎದುರು ಕೋಳಿ ಬಲಿಕೊಟ್ಟು ವಿಚಿತ್ರ ಆಚರಣೆ ಮಾಡಿರುವಂತಹ ಘಟನೆ ಜಿಲ್ಲೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕೋಳಿ ಕೊಯ್ದು ರಕ್ತವನ್ನು ಪೊಲೀಸ್ ಠಾಣೆಯ ಎರಡು ಗೋಡೆಗಳಿಗೆ ವ್ಯಕ್ತಿಗಳು ಹಚ್ಚಿದ್ದಾರೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ. ಹಲವು ಅನುಮಾನಗಳಿಗೆ ಕೋಳಿ ಬಲಿ ಪ್ರಕರಣ ಕಾರಣವಾಗಿದೆ. ಅಮವಾಸ್ಯೆ ಹಿಂದಿನ ದಿನ ಕೋಳಿ ಬಲಿಕೊಟ್ಟು ರಕ್ತದರ್ಪಣ ನೀಡಿ ಪೂಜೆ ಮಾಡಲಾಗಿದೆ. ಪೊಲೀಸ್ ಠಾಣೆ ಎದುರಿನ ಕೋಳಿ ಬಲಿ ವಿಡಿಯೋ ವೈರಲ್ ಆಗಿದೆ.
ದರೋಡೆಕೋರರ ಗ್ಯಾಂಗ್ ಅರೆಸ್ಟ್
ಹುಬ್ಬಳ್ಳಿ: ಸಾರ್ವಜನಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ದರೋಡೆಕೋರರ ಗ್ಯಾಂಗ್ನ್ನ ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಅಲಿಯಾಸ್ ಇಡ್ಲಿ ಪೂಜಾರ, ಅನಿಲ್ ದೊಡ್ಡಮನಿ, ಕುಮಾರ ಗಬ್ಬೂರ, ಮಂದೀಶ್ ರಾಮ್ಜಿ, ಅವಿನಾಶ್ ಮುದ್ದಿ ಹುಬ್ಬಳ್ಳಿ ಗೋಕುಲ ರೋಡ್ ಠಾಣೆ ಪೊಲೀಸರಿಂದ ಆರೋಪಿಗಳ ಸೆರೆ ಹಿಡಿಯಲಾಗಿದೆ. ಪ್ರೇಮಿಗಳು, ಕುಡಿದ ಮತ್ತಿನಲ್ಲಿ ಅಡ್ಡಾಡುವವರೇ ಇವರ ಟಾರ್ಗೆಟ್. 2 ಬೈಕ್, 600 ರೂ. ನಗದು, ಚಾಕು, ಕಬ್ಬಿಣದ ರಾಡ್ಗಳು ಜಪ್ತಿ ಮಾಡಲಾಗಿದೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಹಾಸನ: ಮನೆಗೆ ಪೆಟ್ರೋಲ್ ಸುರಿದು ದುಷ್ಕರ್ಮಿಗಳು ಬೆಂಕಿ ಹಚ್ಚಿರುವಂತಹ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದಿದೆ. ಸೋಮನಹಳ್ಳಿಯಲ್ಲಿ ರಮೇಶ್ ಎಂಬುವರ ಮನೆಗೆ ಬೆಂಕಿ ಹಚ್ಚಲಾಗಿದೆ. ರಂಗಸ್ವಾಮಿ ಹಾಗೂ ಸಹಚರರಿಂದ ಬೆಂಕಿ ಹಚ್ಚಿದ ಆರೋಪ ಮಾಡಲಾಗಿದೆ. ಅವಘಡದಲ್ಲಿ ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ. ಘಟನೆ ಸಂಬಂಧ ಐವರನ್ನ ವಶಕ್ಕೆ ಪಡೆದ ಪೊಲೀಸರು, ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಪವಿತ್ರಾ ಲೋಕೇಶ್ ನಮ್ಮ ಮನೆಗೆ ಬಂದಾಗ ಬೆಳ್ಳಿ ತಟ್ಟೆಯಲ್ಲಿ ಊಟ ಹಾಕಿದ್ವಿ; ನರೇಶ್ ಹೆಂಡತಿಯ ಮಾತು