ಕಾಂಗ್ರೆಸ್ ಭವನಕ್ಕೆ ಸರ್ಕಾರದಿಂದ ಜಾಗ ಮಂಜೂರು: ಸಿಎಂ ಸೇರಿ ಹಲವರ ವಿರುದ್ಧ ಇಡಿಗೆ ದೂರು
ತುಮಕೂರಿನಲ್ಲಿ ಕಾಂಗ್ರೆಸ್ ಭವನಕ್ಕೆ ಎರಡು ಎಕರೆ ಜಮೀನು ಅಪಮೌಲ್ಯದಲ್ಲಿ ಪರಭಾರೆಯಾಗಿದೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಬಸವರಾಜು ಇಡಿಗೆ ದೂರು ಸಲ್ಲಿಸಿದ್ದಾರೆ. 25 ಕೋಟಿ ರೂ. ಮೌಲ್ಯದ ಭೂಮಿಯನ್ನು ಕೇವಲ 17 ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಇಡಿ ದೂರು ನೀಡಿದ್ದಾರೆ.

ತುಮಕೂರು, ಸೆಪ್ಟೆಂಬರ್ 07: ಕೊಪ್ಪಳ, ಬಾದಾಮಿ ಮತ್ತು ಪುತ್ತೂರಿನಲ್ಲಿ ಕಾಂಗ್ರೆಸ್ (congress) ಭವನ ನಿರ್ಮಾಣಕ್ಕೆ ಸೂಕ್ತ ಜಾಗವನ್ನು ಕಾಂಗ್ರೆಸ್ ಭವನ ಟ್ರಸ್ಟ್ಗೆ ಮಂಜೂರು ಮಾಡಲು ಸಂಪುಟ ಸಭೆ ಅಸ್ತು ಎಂದಿದೆ. ಆದರೆ ಇತ್ತ ತುಮಕೂರಿನಲ್ಲಿ (Tumakuru) ಕಾಂಗ್ರೆಸ್ ಭವನ ಜಾಗ ವಿವಾದ ಮುಂದುವರಿದಿದೆ. ನಿಯಮ ಗಾಳಿಗೆ ತೂರಿ 2 ಎಕರೆ ಜಮೀನು ಮಂಜೂರು ಆರೋಪ ಕೇಳಿಬಂದಿದ್ದು, ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಇಡಿ ಅಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ಬಸವರಾಜು ದೂರು ನೀಡಿದ್ದಾರೆ.
ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವ ಮರುಳೂರು ದಿಣ್ಣೆಯಲ್ಲಿರುವ 87/1 ಮತ್ತು 87/2 ಸರ್ವೆನಂ ಎರಡು ಎಕರೆ ವಿವಾದಿತ ಜಾಗ ಕಾಂಗ್ರೆಸ್ ಭವನ ಟ್ರಸ್ಟ್ಗೆ ವಿವಾದಿತ ಜಮೀನು ಪರಭಾರೆ ಮಾಡಲಾಗಿದೆ.
ಸಿಎಂ ಸೇರಿ ಹಲವರ ವಿರುದ್ಧ ದೂರು
ಸಿಎಂ ಸಿದ್ದರಾಮಯ್ಯ, ಸಚಿವರಾದ ಜಿ.ಪರಮೇಶ್ವರ್, ಭೈರತಿ ಸುರೇಶ್, ಸಬ್ ರಿಜಿಸ್ಟ್ರಾರ್ ನಂಜೇಶ್, ಪಾಲಿಕೆ ಕಮಿಷನರ್ ಅಶ್ವಿಜಾ ವಿರುದ್ಧ ಸಾಮಾಜಿಕ ಹೋರಾಟಗಾರ ಬಸವರಾಜು ದೂರು ನೀಡಿದ್ದಾರೆ.
ಇದನ್ನೂ ಓದಿ: ಬಾನು ಮುಷ್ತಾಕ್ರಿಂದ ದಸರಾ ಉದ್ಘಾಟನೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ
25 ಕೋಟಿ ರೂ ಮೌಲ್ಯದ 2 ಎಕರೆ ಜಮೀನು 17 ಲಕ್ಷ ರೂ.ಗೆ ಪರಭಾರೆ ಮಾಡಲಾಗಿದೆ. ಆ ಮೂಲಕ ಜಮೀನು ಪರಭಾರೆಯಲ್ಲಿ ಸರ್ಕಾರದಿಂದ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ನೋಂದಣಿ ಮೌಲ್ಯವನ್ನು ಅಪಮೌಲ್ಯ ಮಾಡಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟವಾಗಿದೆ. ಪ್ರಕರಣವನ್ನು ತನಿಖೆ ನಡೆಸುವಂತೆ ದಾಖಲೆ ಸಮೇತ ದೂರು ನೀಡಿದ್ದಾರೆ.
ಇದನ್ನೂ ಓದಿ: ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ: ಅಧ್ಯಕ್ಷ ರವಿಕುಮಾರ್ ಕೊನೆಗೂ ರಾಜೀನಾಮೆ
ಈಗಾಗಲೇ ಸಂಪುಟ ಕೊಪ್ಪಳ, ಬಾದಾಮಿ ಮತ್ತು ಪುತ್ತೂರಿಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅಸ್ತು ಅಂದಿದೆ. ಕೊಪ್ಪಳದಲ್ಲಿ 12 ಎಕರೆ 28 ಗುಂಟೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಬಡಾವಣೆಯಲ್ಲಿ 3749 ಚ.ಮೀ. ವಿಸ್ತೀರ್ಣದ ನಾಗರಿಕ ಸೌಲಭ್ಯದ ನಿವೇಶನ, ಇನ್ನು ಬಾದಾಮಿ ಪಟ್ಟದಲ್ಲಿ 613 ಚ. ಮೀಟರ್ ವಿಸ್ತೀರ್ಣದ ನಾಗರಿಕ ಸೌಲಭ್ಯದ ನಿವೇಶನ, ಅದೇ ರೀತಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಸಬಾ ಗ್ರಾಮದಲ್ಲಿ 8 ಸೆಂಟ್ ಜಾಗವನ್ನು ಕಾಂಗ್ರೆಸ್ ಭವನ ಟ್ರಸ್ಟ್ಗೆ ನೀಡಲು ಸಂಪುಟ್ಟ ಒಪ್ಪಿಗೆ ಸೂಚಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



