AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಮುನ್ನೆಲೆಗೆ ಬಂದ ವಿವಾದಿತ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ: ಪರ, ವಿರೋಧ ಚರ್ಚೆ ಶುರು

ತುಮಕೂರು ಜಿಲ್ಲೆಯ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಸರ್ಕಾರ ಮರುಜೀವ ನೀಡಲು ಮುಂದಾಗಿದ್ದು, ಜಿಲ್ಲೆಯ ಶಾಸಕರು ಹಾಗೂ ರೈತರ ನಡುವೆ ಮತ್ತೆ ಪರ-ವಿರೋಧದ ಹೋರಾಟದ ಕಿಡಿ ಹೊತ್ತಿಕೊಂಡಿದೆ. ಈ ಯೋಜನೆ ಆರಂಭದಿಂದಲೇ ವಿವಾದಕ್ಕೆ ಕಾರಣವಾಗಿತ್ತು. ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಇದೀಗ ಸರ್ಕಾರ ಮತ್ತೆ ಕಾಮಗಾರಿ ಆರಂಭಿಸಲು ಮುಂದಾಗಿರುವುದರಿಂದ, ಜಿಲ್ಲೆಯಲ್ಲಿ ಹೇಮಾವತಿ ಹೋರಾಟದ ಕಾವು ಮತ್ತೊಮ್ಮೆ ಜೋರಾಗುವ ಲಕ್ಷಣ ಗೋಚರಿಸಿದೆ.

ಮತ್ತೆ ಮುನ್ನೆಲೆಗೆ ಬಂದ ವಿವಾದಿತ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ: ಪರ, ವಿರೋಧ ಚರ್ಚೆ ಶುರು
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆImage Credit source: Tv9 Kannada
Jagadisha B
| Edited By: |

Updated on:Jun 11, 2026 | 7:24 AM

Share

ತುಮಕೂರು, ಜೂನ್​​ 11: ಹೇಮಾವತಿ ನೀರನ್ನು ಲಿಂಕಿಂಗ್ ಕೆನಾಲ್ ಮೂಲಕ ಕುಣಿಗಲ್​​ಗೆ ಹರಿಸುವ ನಿರ್ಧಾರ ತುಮಕೂರು ಜಿಲ್ಲೆಯಲ್ಲಿ ವಿವಾದ ಸೃಷ್ಟಿಸಿತ್ತು. ಕಾಮಗಾರಿ ಸ್ಥಳದಲ್ಲಿ ನಡೆದ ಭಾರಿ ಹೈಡ್ರಾಮಾ ಬಳಿಕ ಯೋಜನೆಗೆ ಬ್ರೇಕ್ ಬಿದಿತ್ತು. ಆದರೆ ಹತ್ತು ತಿಂಗಳ ಬಳಿಕ ಈ ಯೋಜನೆಗೆ ಸರ್ಕಾರ ಮರು ಜೀವ ನೀಡಲು ಮುಂದಾಗಿರೋದು ಜಿಲ್ಲೆಯ ಶಾಸಕರ ನಡುವೆಯೇ ಪರ-ವಿರೋಧಕ್ಕೆ ನಾಂದಿ ಹಾಡಿದೆ. ಹೀಗಾಗಿ ಮತ್ತೆ ವಿರೋಧ ಕಿಡಿ ಹೊತ್ತಿಕೊಳ್ಳುವ ಮುನ್ಸೂಚನೆ ಸಿಕ್ಕಿದೆ.

ಮುಖ್ಯಾಂಶಗಳು

  • ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಮರುಜೀವ
  • ಕಾಮಗಾರಿಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರದ ಸಿದ್ಧತೆ
  • ಜಿಲ್ಲೆಯ ಶಾಸಕರ ನಡುವೆಯೇ ಪರ-ವಿರೋಧ ಚರ್ಚೆ ಆರಂಭ

ಕಳೆದ 10 ತಿಂಗಳಿಂದ ರೈತರ ವಿರೋಧದ ಹಿನ್ನೆಲೆ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಮುಂದುವರಿಸಲಾಗುವುದು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಮತ್ತೊಂದೆಡೆ ಕುಣಿಗಲ್ ಶಾಸಕ ಡಾ.ರಂಗನಾಥ್, ನಮಗೆ ಬರಬೇಕಾದ ಹೇಮಾವತಿ ನೀರಿನ ಪಾಲನ್ನು ಪಡೆಯಲೇಬೇಕು. ಕುಣಿಗಲ್ ಭಾಗಕ್ಕೆ ನ್ಯಾಯ ಸಿಗಬೇಕಿದ್ದು, ಯಾವುದೇ ಕಾರಣಕ್ಕೂ ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತುಮಕೂರು – ಚಿತ್ರದುರ್ಗ – ದಾವಣಗೆರೆ ನೇರ ರೈಲು ಮಾರ್ಗದ ಬಗ್ಗೆ ಸಚಿವ ಸೋಮಣ್ಣ ಬಿಗ್ ಅಪ್​ಡೇಟ್

ಆದರೆ ಯೋಜನೆಗೆ ವಿರೋಧದ ಧ್ವನಿಯೂ ಅಷ್ಟೇ ಬಲವಾಗಿ ಕೇಳಿಬರುತ್ತಿದೆ. ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿಗಣೇಶ್, ಯಾವುದೇ ಕಾರಣಕ್ಕೂ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಗುಬ್ಬಿಯಿಂದ ಕುಣಿಗಲ್ ಮಾರ್ಗವಾಗಿ ಮಾಗಡಿವರೆಗೆ ಹೇಮಾವತಿ ನೀರನ್ನು ಸಾಗಿಸುವ ಉದ್ದೇಶದ ಈ ಯೋಜನೆ ಆರಂಭದಿಂದಲೇ ವಿವಾದಕ್ಕೆ ಕಾರಣವಾಗಿತ್ತು. ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಇದೀಗ ಸರ್ಕಾರ ಮತ್ತೆ ಕಾಮಗಾರಿ ಆರಂಭಿಸಲು ಮುಂದಾಗಿರುವುದರಿಂದ, ಜಿಲ್ಲೆಯಲ್ಲಿ ಹೇಮಾವತಿ ಹೋರಾಟದ ಕಾವು ಮತ್ತೊಮ್ಮೆ ಜೋರಾಗುವ ಲಕ್ಷಣಗಳು ಕಾಣಿಸುತ್ತಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:23 am, Thu, 11 June 26

Follow Us
Jagadisha B
Jagadisha B

ಜಗದೀಶ್​ ಬಸವರಾಜು ಟಿವಿ9 ಕನ್ನಡದ ವರದಿಗಾರರಲ್ಲಿ ಒಬ್ಬರು. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ.

Read More