ತುಮಕೂರು ಲೋಕಸಭೆ ಕ್ಷೇತ್ರದ ಟಿಕೆಟ್ಗೆ ಬೇಡಿಕೆ ಇಟ್ಟಿದ್ದೇನೆ: ಸಚಿವ ಕೆಎನ್ ರಾಜಣ್ಣ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಹಕಾರ ಇಲಾಖೆ ಸಚಿವ ಕೆ.ಎನ್.ರಾಜಣ್ಣ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಅಂತಾ ನನಗೆ ಆಸೆ ಇದೆ. ಹಾಗಾಗಿ ತುಮಕೂರು ಲೋಕಸಭೆ ಕ್ಷೇತ್ರದ ಟಿಕೆಟ್ಗೆ ಬೇಡಿಕೆ ಇಟ್ಟಿದ್ದೇನೆ ಎಂದು ಹೇಳಿದ್ದಾರೆ. ಹೈಕಮಾಂಡ್ ನಿಲ್ಲು ಅಂದರೆ ನಿಲುತ್ತೇನೆ. ಇಲ್ಲ ಅಂದರೆ ಸುಮ್ಮನೆ ಇರುತ್ತೇನೆ ಎಂದಿದ್ದಾರೆ.
ತುಮಕೂರು, ನವೆಂಬರ್ 13: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಅಂತಾ ನನಗೆ ಆಸೆ ಇದೆ. ಹಾಗಾಗಿ ತುಮಕೂರು ಲೋಕಸಭೆ ಕ್ಷೇತ್ರದ ಟಿಕೆಟ್ಗೆ ಬೇಡಿಕೆ ಇಟ್ಟಿದ್ದೇನೆ ಎಂದು ಸಹಕಾರ ಇಲಾಖೆ ಸಚಿವ ಕೆ.ಎನ್.ರಾಜಣ್ಣ (KN Rajanna) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅರ್ಹತೆ ಇಲ್ವಾ ಎಂದು ಪ್ರಶ್ನಿಸಿದ್ದಾರೆ. ಸೋಮಣ್ಣ ಬೇಡಿಕೆ ಇಟ್ಟಿದ್ದಾರೇನೋ ಗೊತ್ತಿಲ್ಲ, ನಾನು ಲೋಕಸಭೆ ಕ್ಷೇತ್ರದ ಟಿಕೆಟ್ಗೆ ಬೇಡಿಕೆ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.
ಹೈಕಮಾಂಡ್ ನಿಲ್ಲು ಅಂದರೆ ನಿಲುತ್ತೇನೆ. ಇಲ್ಲ ಅಂದರೆ ಸುಮ್ಮನೆ ಇರುತ್ತೇನೆ. ರಾಜ್ಯ ರಾಜಕಾರಣದಲ್ಲಿ ಯಾವ ಚುನಾವಣೆಯಲ್ಲೂ ಸ್ಪರ್ಧೆ ಮಾಡಲ್ಲ. ಲೋಕಸಭೆ ಹೇಗಿರುತ್ತೆ ಅಂತಾ ನೋಡೋಣ ಅಂತಾ ಅಷ್ಟೇ. ಜಾತಿಗಣತಿ ವರದಿ ಬಿಡುಗಡೆ ಆಗುತ್ತೆ ಎಂದು ಹೇಳಿದ್ದಾರೆ.
ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸೇರಲು ಒಲವು ತೋರಿದ್ದಾರೆ ಅನ್ನೋ ಮಾಹಿತಿ ಇದೆ. ಪರಮೇಶ್ವರ್ ಬಳಿಯೂ ಬಹಳಷ್ಟು ಜನರು ಬಂದು ಹೇಳುತ್ತಿದ್ದಾರೆ. ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಗೊತ್ತಿಲ್ಲ. ಸೇರೋರು ಯಾರು ಅಂತಾ ಗೊತ್ತಿಲ್ಲ, ಬಿಡುವವರ ಬಗ್ಗೆಯೂ ಗೊತ್ತಿಲ್ಲ. ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬರಲಿ. ಒಂದೊಂದು ಘಟನೆ ಕೂಡ ಒಂದೊಂದು ಕ್ರಿಯೆಗೆ ಕಾರಣ ಆಗುತ್ತೆ. ಯಾರೇನು ಸನ್ಯಾಸಿಗಳು ಇರಲ್ಲ ಎಂದಿದ್ದಾರೆ.
ವಿಜಯೇಂದ್ರಗೆ ಬಿಎಸ್ ಯಡಿಯೂರಪ್ಪ ಹೆಸರೇ ಬಂಡವಾಳ
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ನಾಯಕರಿಗೆ ಜ್ಞಾನೋದಯ ಆಗಿ ಅಧ್ಯಕ್ಷ ಸ್ಥಾನ ತುಂಬಿದ್ದಾರೆ. ವಿಜಯೇಂದ್ರರನ್ನು ನೇಮಕ ಮಾಡಿದ್ದಕ್ಕೆ ಅಸಮಾಧಾನ ಹೊರಬರ್ತಿದೆ. ಯಾವುದೇ ನಾಲ್ಕು ಉಪ ಚುನಾವಣೆಗಳನ್ನು ಗೆಲ್ಲಿಸಿದ ಮಾತ್ರಕ್ಕೆ ಸಂಘಟನಾ ಚತುರ ಅಂತಾ ಸರ್ಟಿಫಿಕೇಟ್ ಕೊಡುವುದಕ್ಕೆ ಆಗಲ್ಲ.
ಇದನ್ನೂ ಓದಿ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಲಿಂಗಾಯತ ಅಭ್ಯರ್ಥಿ, ಚಿಕ್ಕೋಡಿಗೆ ಯಾರು?: ಸುಳಿವು ಕೊಟ್ಟ ಸತೀಶ್ ಜಾರಕಿಹೊಳಿ
ಉಪ ಚುನಾವಣೆಯಲ್ಲಿ ಯಾವ ಆಧಾರದಲ್ಲಿ ಗೆಲ್ತಾರೆ ಅಂತಾ ಗೊತ್ತು. ಗುಂಡ್ಲುಪೇಟೆ, ನಂಜನಗೂಡು ಬೈಎಲೆಕ್ಷನ್ನಲ್ಲಿ ಕಾಂಗ್ರೆಸ್ ಗೆದ್ದಿತ್ತು. ಇದು ಅವರ ಮನೆ ವಿಚಾರ, ನಾನು ಪ್ರತಿಕ್ರಿಯೆ ಕೊಡಲು ಹೋಗಲ್ಲ. ವಿಜಯೇಂದ್ರ ಬಹಳ ಉತ್ಸಾಹದಲ್ಲಿ ಇದ್ದಾರೆ, ಅವರಿಗೆ ಒಳ್ಳೆಯದಾಗಲಿ. ವಿಜಯೇಂದ್ರರದ್ದು ಏನು ಹೋರಾಟ ಇದೆ, ಬಿಎಸ್ ಯಡಿಯೂರಪ್ಪ ಹೆಸರೇ ಬಂಡವಾಳ. ಮುಂದಿನ ದಿನಗಳಲ್ಲಿ ನೋಡೋಣ, ಯಾವ ಮಟ್ಟಕ್ಕೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ಪಕ್ಷ ಕಟ್ಟಿದಾಕ್ಷಣಕ್ಕೆ ವಿಶ್ವಾಸಗಳಿಸದೇ ಇದ್ದರೆ ಏನ್ ಮಾಡುವುದಕ್ಕೆ ಆಗುತ್ತೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪ: ಹೆಚ್ಡಿ ಕುಮಾರಸ್ವಾಮಿಗೆ ಬಿಗ್ ರಿಲೀಫ್
ವಿ.ಸೋಮಣ್ಣ ಕಾಂಗ್ರೆಸ್ ಪಕ್ಷ ಸೇರುತ್ತಾರೆ ವಿಚಾರವಾಗಿ ಮಾತನಾಡಿದ ಅವರು, ಸೋಮಣ್ಣ ಸಿದ್ದಗಂಗಾ ಮಠದಲ್ಲಿ 6ನೇ ತಾರೀಖು ಕಾರ್ಯಕ್ರಮ ಮಾಡುತ್ತಿದ್ದಾರೆ. ಕಾರ್ಯಕ್ರಮಕ್ಕೆ ಬರಬೇಕು ಅಂತಾ ನನಗೆ ಪೋನ್ ಮಾಡಿದ್ದರು. ನಾನು ಅವಾಗ ಅಸೆಂಬ್ಲಿ ಇರುತ್ತೆ ಅಂದೆ. ನಾನು ಆ ಕಾರ್ಯಕ್ರಮಕ್ಕೆ ಬರಬೇಕು ಅನ್ನೋ ಅಭಿಲಾಷೆ ಇಟ್ಟುಕೊಂಡಿದ್ದೀನಿ. ನೋಡೋಣ ವಿಧಾನಸಭೆ ಕಾರ್ಯಕಲಾಪ ಆದ್ಮೇಲೆ ಸಮಯ ಆದರೆ ಬಂದು ಹೋಗುತ್ತೇನೆ ಎಂದರು.
ಇದೊಂಥರ ಸಮುದ್ರ ಇದ್ದಂಗೆ. ಗಂಗಾ ನದಿ ನೀರು ಬರುತ್ತೆ. ಚರಂಡಿ ನೀರು ಬಂದು ಬೀಳುತ್ತೆ. ಸಮುದ್ರದಲ್ಲಿ ಅಮೃತನೂ ಇದೆ, ವಿಷನೂ ಇದೆ. ಅಮೃತ ಸಿಗುವವರಿಗೆ ಅಮೃತ ಸಿಗುತ್ತೆ, ವಿಷ ಸಿಗುವವರಿಗೆ ವಿಷ ಸಿಗುತ್ತೆ. ಕಾಂಗ್ರೆಸ್ ಮಾಸ್ ಬೇಸಡ್ ಪಾರ್ಟಿ, ಕೇಡರ್ ಬೇಸಡ್ ಪಾರ್ಟಿ ಅಲ್ಲಾ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.