ವ್ಯಕ್ತಿಯೋರ್ವ ಬೈಕ್​ ಮೇಲೆ ಊರಿಗೆ ಹೋಗುತ್ತಿದ್ದಾಗ ದಿಢೀರ್ ಅಡ್ಡಬಂದ ಕರಡಿ, ಬಳಿಕ ಆಗಿದ್ದೇನು?

ವ್ಯಕ್ತಿಯೋರ್ವ ಬೈಕ್​ ಮೇಲೆ ಊರಿಗೆ ಹೋಗುತ್ತಿದ್ದಾಗ ದಿಢೀರ್ ಕರಡಿ ಅಡ್ಡಬಂದಿದೆ. ಇದರಿಂದ ಭಯಗೊಂಡ ಬೈಕ್​ ಸವಾರ ತಪ್ಪಿಸಿಕೊಳ್ಳಲು ಹೋಗಿ ಬಿದ್ದಿದ್ದಾನೆ.

ವ್ಯಕ್ತಿಯೋರ್ವ ಬೈಕ್​ ಮೇಲೆ ಊರಿಗೆ ಹೋಗುತ್ತಿದ್ದಾಗ ದಿಢೀರ್ ಅಡ್ಡಬಂದ ಕರಡಿ, ಬಳಿಕ ಆಗಿದ್ದೇನು?
Follow us
ರಮೇಶ್ ಬಿ. ಜವಳಗೇರಾ
|

Updated on:Jun 04, 2023 | 6:55 PM

ತುಮಕೂರು: ಇಲ್ಲೊಬ್ಬ ಬೈಕ್​ ಸವಾರನೊಬ್ಬ ಕರಡಿ(bear) ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತಕ್ಕೀಡಾಗಿರುವ ಘಟನೆ ತುಮಕೂರು(Tumakuru) ಜಿಲ್ಲೆಯ ಮಧುಗಿರಿ ತಾಲೂಕು ಹನುಮಂತಪುರದಲ್ಲಿ ನಡೆದಿದೆ. ಹನುಮಂತಪುರದ ಮೂಲದ ನಿವಾಸಿ ಕೃಷ್ಣ (34) ಎಂಬುವವರು ಮಿಡಿಗೇಶಿಯಿಂದ ತಮ್ಮ ಊರಿಗೆ ಹಿಂದಿರುಗುತ್ತಿದ್ದಾಗ ಕರಡಿ ಅಡ್ಡಬಂದಿದೆ. ಇದರಿಂದ ಗಾಬರಿಗೊಂಡ ಕೃಷ್ಣ ಅದರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​ನಿಂದ ಬಿದ್ದಿದ್ದಾನೆ.

ಇದನ್ನೂ ಓದಿ: ನಾಯಿಯನ್ನು ಹೊತೊಯ್ದಿದ್ದ ಮನೆಗೆ ಮತ್ತೆ ಬಂದ ಚಿರತೆ: ರಾಜ ಗಾಂಭೀರ್ಯ ನಡಿಗೆ ಸಿಸಿ ಟಿವಿಯಲ್ಲಿ ಸೆರೆ

ಇಂದು(ಜೂನ್ 04) ಕೃಷ್ಣ ಬೈಕ್​ ಮೇಲೆ ಸ್ವಂತ ಊರಿಗೆ ಹಿಂತಿರುಗುತ್ತಿದ್ದಾಗ ಮಾರ್ಗ ಮಧ್ಯೆ ಏಕಾಏಕಿ ಕರಡಿ ಅಡ್ಡಬಂದಿದೆ. ಇದರಿಂದ ಅವಕ್ಕಾದ ಕೃಷ್ಣ ಕರಡಿಯಿಂದ ತಪ್ಪಿಸಿಕೊಳ್ಳಲು ಹೋಗಿ ​ಆಯತಪ್ಪಿ ಬಿದ್ದಿದ್ದಾನೆ. ಇದರಿಂದ ಕೃಷ್ಣನಿಗೆ ಗಾಯಗಳಾಗಿವೆ. ನಂತರ ಸ್ಥಳೀಯರ ಸಹಾಯದಿಂದ ಕೃಷ್ಣ ಮಧುಗಿರಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಾಹಿತಿ ತಿಳಿದ ಅರಣ್ಯಾಧಿಕಾರಿ ಮುತ್ತುರಾಜ್, ತಕ್ಷಣವೇ ಆಸ್ಪತ್ರೆಗೆ ಭೇಟಿ ಮಾಹಿತಿ ಪಡೆದುಕೊಂಡರು.

ಬೈಕ್ ಸ್ಟಂಟ್ ಮಾಡಲು ಹೋಗಿ ಬಿದ್ದ ಯುವಕರು

ವಿಜಯನಗರ: ಬೈಕ್ ಸ್ಟಂಟ್ ಮಾಡಲು ಹೋಗಿ ಯುವಕರು ಬಿದ್ದು ಗಾಯಗೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಹಗರಿಬೊಮ್ಮನಹಳ್ಳಿ ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿ ಸ್ಟಂಟ್ ಮಾಡಲು ಹೋಗಿದ್ದು, ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ಸ್ಥಳೀಯರು ಗಾಯಗೊಂಡ ಇಬ್ಬರು ಯುವಕರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಹಗರಿಬೊಮ್ಮನ ಹಳ್ಳಿ ಪೊಲೀಸ್ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಯುವಕರ ಹೆಸರು, ವಿಳಾಸ ಕಲೆ ಹಾಕಿದರು.

Published On - 6:53 pm, Sun, 4 June 23