ಕೃಷಿ ಹೊಂಡದಲ್ಲಿ ಸ್ಫೋಟ: ಡ್ರೋನ್​ ಪ್ರತಾಪ್​ಗೆ 10 ದಿನ ನ್ಯಾಯಾಂಗ ಬಂಧನ

ತುಮಕೂರಿನಲ್ಲಿ ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟಿಸಿದ ಪ್ರಕರಣದಲ್ಲಿ ಡ್ರೋನ್ ಪ್ರತಾಪ್ ಅವರನ್ನು ಮಿಡಿಗೇಶಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನುಮತಿಯಿಲ್ಲದೆ ಸ್ಫೋಟಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಅವರನ್ನು ಮಧುಗಿರಿ ಜೆಎಂಎಫ್‌ಸಿ ನ್ಯಾಯಾಲಯವು ಡಿಸೆಂಬರ್ 26 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ.

ಕೃಷಿ ಹೊಂಡದಲ್ಲಿ ಸ್ಫೋಟ: ಡ್ರೋನ್​ ಪ್ರತಾಪ್​ಗೆ 10 ದಿನ ನ್ಯಾಯಾಂಗ ಬಂಧನ
ಡ್ರೋನ್​ ಪ್ರತಾಪ್​
ಮಹೇಶ್ ಇ, ಭೂಮನಹಳ್ಳಿ Edited By: ವಿವೇಕ ಬಿರಾದಾರ

Updated on: Dec 16, 2024 | 12:17 PM

ತುಮಕೂರು, ಡಿಸೆಂಬರ್​ 16: ಕೃಷಿ ಹೊಂಡಕ್ಕೆ ಸೋಡಿಯಂ (Sodium) ಎಸೆದು ಸ್ಫೋಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್‌ಗೆ (Drone Pratap) ಡಿಸೆಂಬರ್‌ 26ರವರೆಗೂ ನ್ಯಾಯಾಂಗ ಬಂಧನ ಮಧುಗಿರಿಯ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ. ಅನುಮತಿ ಇಲ್ಲದೇ ಸ್ಫೋಟಗೊಳಿಸಿದ್ದಕ್ಕೆ ಡ್ರೋನ್​ ಪ್ರತಾಪ್​ನನ್ನು ಮಿಡಿಗೇಶಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸೋಮವಾರ (ಡಿ.16) ನ್ಯಾಯಾಲಯದ ಮುಂದೆ ಹಾಜಪಡಿಸಿದರು.

ತುಮಕೂರು ‌ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಬಳಿ ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟಿಸಿದ್ದಾರೆ ಎಂಬ ಆರೋಪದ ಮೇಲೆ ಡ್ರೋನ್​ ಪ್ರತಾಪ್​ ಅವರನ್ನು ಕಳೆದ ಗುರುವಾರ (ಡಿಸೆಂಬರ್​ 12) ಮಿಡಿಗೇಶಿ ಪೊಲೀಸರ ಬಂಧಿಸಿದ್ದರು. ಬಳಿಕ, ಪೊಲೀಸರು ಡ್ರೋನ್​ ಪ್ರತಾಪ್​ನನ್ನು ಶುಕ್ರವಾರ (ಡಿಸೆಂಬರ್​ 13) ರಂದು ‌ಮಧುಗಿರಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಪೊಲೀಸರ ಮನವಿ ಮೇರೆಗೆ ನ್ಯಾಯಾಲಯ ಡ್ರೋನ್​ ಪ್ರತಾಪ್​ ಅವರನ್ನು ಪೊಲೀಸ್​ ಕಸ್ಟಡಿಗೆ ನೀಡಿದ್ದರು.

ಸೋಮವಾರ (ಡಿ.16) ಪೊಲೀಸ್​ ಕಸ್ಟಡಿ ಅಂತ್ಯವಾಗಿದ್ದು, ಪೊಲೀಸರು ಡ್ರೋನ್​ ಪ್ರತಾಪ್​ ಅವರನ್ನು ನಾಯ್ಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯ ಡ್ರೋನ್​ ಪ್ರತಾಪ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಪ್ರಕರಣ ಸಂಬಂಧ ಡ್ರೋನ್​ ಪ್ರತಾಪ್​ ಅವರ ವಿರುದ್ಧ ಮಿಡಿಗೇಶಿ ಠಾಣೆ ಪೊಲೀಸರು BNS ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರ ಅಡಿ ಪ್ರಕರಣ ದಾಖಲಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:53 am, Mon, 16 December 24

Mahesha E

ಮಹೇಶ್ ಇ ಎಂಬ ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದ ನಿವಾಸಿ. ನಮ್ಮ ಹೆಮ್ಮೆಯ ಟಿವಿ9 ತುಮಕೂರು ಜಿಲ್ಲಾ ವರದಿಗಾರನಾಗಿ ಸತತ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದಾಗ ಆ ಸುದ್ದಿ ಬಿತ್ತರ ಬಗ್ಗೆ ಹಾಗೂ ಕೊನೆ ಕ್ಷಣದಲ್ಲಿ ದೇವರ ಜೊತೆಯಿದ್ದ ಎಲ್ಲಾ ಕಾರ್ಯಕ್ರಮಗಳನ್ನ ನೋಡಿ ವರದಿ ಮಾಡಿದ್ದು ನನ್ನ ಭಾಗ್ಯ..ಬಡ ಕುಟುಂಬದಿಂದ ಬಂದಿರುವ ನನಗೆ ಟಿವಿ9 ಸಂಸ್ಥೆ ತುಮಕೂರು ಅಂತಾ ಅತಿದೊಡ್ಡ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ...

Follow Us