AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಬ್ಬಿ ಪೊಲೀಸ್ ಠಾಣೆಯಿಂದ ಸರಗಳ್ಳ ಪರಾರಿ ಪ್ರಕರಣ; ಪಿಎಸ್‌ಐ ಸೇರಿ ನಾಲ್ವರು ಸಿಬ್ಬಂದಿ ಅಮಾನತು

ಗುಬ್ಬಿ ಪೊಲೀಸ್ ಠಾಣೆ(Gubbi police station)ಯಿಂದ ಸರಗಳ್ಳ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆ ಪಿಎಸ್‌ಐ ದೇವಿಕಾ ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿ ತುಮಕೂರು‌ ಎಸ್ಪಿ ಅಶೋಕ್ ಕೆ.ವಿ ಅವರು ಆದೇಶಿಸಿದ್ದಾರೆ. ಗುರುವಾರ ರಾತ್ರಿ ಪೊಲೀಸ್ ಠಾಣೆಯಿಂದಲೇ ಸರಗಳ್ಳ ಪರಾರಿಯಾಗಿದ್ದ. ಈ ಹಿನ್ನಲೆ ಕರ್ತವ್ಯಲೋಪದಡಿ ಅಮಾನತು ಆದೇಶ ಹೊರಡಿಸಲಾಗಿದೆ.

ಗುಬ್ಬಿ ಪೊಲೀಸ್ ಠಾಣೆಯಿಂದ ಸರಗಳ್ಳ ಪರಾರಿ ಪ್ರಕರಣ; ಪಿಎಸ್‌ಐ ಸೇರಿ ನಾಲ್ವರು ಸಿಬ್ಬಂದಿ ಅಮಾನತು
ಅಮಾನತುಗೊಂಡ ಪಿಎಸ್​ಐ
ಮಹೇಶ್ ಇ, ಭೂಮನಹಳ್ಳಿ
| Edited By: |

Updated on:Feb 03, 2024 | 9:54 PM

Share

ತುಮಕೂರು, ಫೆ.03: ಜಿಲ್ಲೆಯ ಗುಬ್ಬಿ ಪೊಲೀಸ್ ಠಾಣೆ(Gubbi police station)ಯಿಂದ ಸರಗಳ್ಳ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆ ಪಿಎಸ್‌ಐ ದೇವಿಕಾ ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿ ತುಮಕೂರು‌ ಎಸ್ಪಿ ಅಶೋಕ್ ಕೆ.ವಿ ಅವರು ಆದೇಶಿಸಿದ್ದಾರೆ. ಕಳೆದ ಗುರುವಾರ ರಾತ್ರಿ ಪೊಲೀಸ್ ಠಾಣೆಯಿಂದಲೇ ಸರಗಳ್ಳ ಸೈಯದ್ ಅಲಿ ಎಂಬಾತ ಎಸ್ಕೇಪ್ ಆಗಿದ್ದ. ಈ ಹಿನ್ನಲೆ ಕರ್ತವ್ಯಲೋಪದಡಿ ಅಮಾನತು ಆದೇಶ ಹೊರಡಿಸಲಾಗಿದೆ.

ಆರೋಪಿ ಪತ್ತೆಗೆ ಮೂರು ತಂಡ

ಇನ್ನು ಪರಾರಿಯಾದ ಆರೋಪಿ ಸೈಯದ್ ಅಲಿ ಪತ್ತೆಗೆ ಮೂರು ತಂಡವನ್ನು ರಚಿಸಲಾಗಿದ್ದು, ಪೊಲೀಸರು ಗದಗ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಶೋಧ ಕಾರ್ಯ ಶುರುಮಾಡಿದ್ದಾರೆ. ಜೊತೆಗೆ ಇಂದು ಶಿರಾ ಬೈಪಾಸ್‌ನಲ್ಲಿ ಬೆಳಗಿನ ಜಾವದವರೆಗೂ ಬಾಂಬೆ, ಗದಗ ಕಡೆ ಹೋಗುವ ಬಸ್‌ಗಳನ್ನ ತಪಾಸಣೆ ಮಾಡಿದ್ದಾರೆ. ಈಗಾಗಲೇ ಬಾಂಬೆಗೆ ತೆರಳಿರುವ ಪೊಲೀಸರ ಮತ್ತೊಂದು ತಂಡ ತನಿಖೆ ಶುರುಮಾಡಿದೆ.

ಇದನ್ನೂ ಓದಿ:ಕರ್ತವ್ಯ ನಿರ್ಲಕ್ಷ್ಯ ಆರೋಪ: ಡಿಡಿಪಿಐ ಹಾಗೂ ಇಬ್ಬರು ಹಿರಿಯ ಉಪನ್ಯಾಸಕರ ಅಮಾನತು

ಟಿಪ್ಪು ಭಾವಚಿತ್ರಕ್ಕೆ ಅಪಮಾನ ಪ್ರಕರಣ; ಇಬ್ಬರು ಕಾನ್ಸ್​​ಟೇಬಲ್​ಗಳು ಅಮಾನತು

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಸಿರವಾರದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಕರ್ತವ್ಯ ಲೋಪದಡಿ ಇಬ್ಬರು ಕಾನ್ಸ್​​ಟೇಬಲ್​ಗಳನ್ನು ಅಮಾನತುಗಳಿಸಿ ರಾಯಚೂರು (Raichur) ಎಸ್​​ಪಿ ಬಿ.ನಿಖಿಲ್ ಆದೇಶಿಸಿದ್ದರು. ಸಿರವಾರ ಪಟ್ಟಣದ ಮಟನ್ ಮಾರ್ಕೆಟ್ ಬಳಿ ಇರುವ ಟಿಪ್ಪು ಸರ್ಕಲ್‌ನಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ರಾತ್ರೋರಾತ್ರಿ ಕೆಲ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿದ್ದರು. ಇದನ್ನು ನೋಡಿದ ಮುಸ್ಲಿಂ ಮುಖಂಡರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಬಳಿಕ ಸಿರವಾರ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಭಟನಾಕಾರರು ರಸ್ತೆ ಮಧ್ಯದಲ್ಲಿ ಕುಳಿತು ಸಂಚಾರಕ್ಕೆ ಬಂದ್ ಮಾಡಿ, ರಸ್ತೆ ಮಧ್ಯೆ ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:49 pm, Sat, 3 February 24