ತುಮಕೂರಿನ ಹುಲಿಯೂರುದುರ್ಗದಲ್ಲಿ ಭಾರಿ ದುರಂತ: ಕ್ವಾರಿ ಗುಂಡಿಗೆ ಲಾರಿ ಬಿದ್ದು ಚಾಲಕ, ಕ್ಲೀನರ್ ದುರ್ಮರಣ

ತುಮಕೂರಿನ ಹುಲಿಯೂರುದುರ್ಗದಲ್ಲಿ ಕ್ವಾರಿ ಗುಂಡಿಗೆ ಲಾರಿ ಉರುಳಿ ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತ ದೇವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್, ಟಿಪ್ಪರ್ ಮತ್ತು ಟಿಟಿ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತುಮಕೂರಿನ ಹುಲಿಯೂರುದುರ್ಗದಲ್ಲಿ ಭಾರಿ ದುರಂತ: ಕ್ವಾರಿ ಗುಂಡಿಗೆ ಲಾರಿ ಬಿದ್ದು ಚಾಲಕ, ಕ್ಲೀನರ್ ದುರ್ಮರಣ
ಕ್ವಾರಿಯ ಗುಂಡಿಗೆ ಬಿದ್ದ ಲಾರಿ
Image Credit source: Tv9 Kannada
Edited By:

Updated on: Jul 20, 2026 | 6:23 PM

ಮುಖ್ಯಾಂಶಗಳು

  • ಗಣಿಗಾರಿಕೆ ಪ್ರದೇಶದಲ್ಲಿ ರಸ್ತೆ ಕುಸಿದು ಭಾರಿ ಅನಾಹುತ
  • ಸುಮಾರು 50 ಮೀಟರ್​​ ಆಳಕ್ಕೆ ಉರುಳಿಬಿದ್ದ ಲಾರಿ
  • ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್​​ ದುರ್ಮರಣ

ತುಮಕೂರು, ಜುಲೈ 20: ಗಣಿಗಾರಿಕೆ ಪ್ರದೇಶದಲ್ಲಿ ರಸ್ತೆ ಕುಸಿದ ಪರಿಣಾಮ ಲಾರಿ ಕ್ವಾರಿಯ ಗುಂಡಿಗೆ ಬಿದ್ದು ಚಾಲಕ ಮತ್ತು ಕ್ಲೀನರ್​​ ದುರ್ಮರಣ ಹೊಂದಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖಾಲಿ ಲಾರಿಯನ್ನು ಯೂಟರ್ನ್​​ ತೆಗೆದುಕೊಳ್ಳುವ ವೇಳೆ ಅವಘಡ ನಡೆದಿದೆ ಎನ್ನಲಾಗಿದ್ದು, ಸುಮಾರು 50 ಮೀಟರ್​​ ಆಳಕ್ಕೆ ವಾಹನ ಉರುಳಿ ಬಿದ್ದಿದೆ. ಪರಿಣಾಮ ಗಂಭೀರ ಗಾಯಗೊಂಡು ಲಾರಿಯಲ್ಲಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ತೀವ್ರತೆಗೆ ಲಾರಿ ಪೀಸ್​​ ಪೀಸ್

ಅಪಘಾತದಲ್ಲಿ ಮೃತಪಟ್ಟವರನ್ನು ಜಾರ್ಖಂಡ್​​ ಮೂಲದ ಅಕ್ಷಯ್​​ (30) ಮತ್ತು ಧ್ಯಪ್ರದೇಶ ಸಹದೇವ್ (25) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಹುಲಿಯೂರುದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪಘಾತದ ತೀವ್ರತೆಗೆ ಲಾರಿ ಪೀಸ್​​ ಪೀಸ್​​ ಆಗಿದ್ದು, ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರೋದು ಕಂಡುಬಂದಿದೆ.

ಇದನ್ನೂ ಓದಿ:  ಪ್ರತ್ಯೇಕ ರಸ್ತೆ ಅಪಘಾತ; ನವ ವಿವಾಹಿತೆ ಸೇರಿ ಮೂವರು ದಾರುಣ ಸಾವು

ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ

Devanahalli Accident

ಸರಣಿ ಅಪಘಾತ

ಟಿಪ್ಪರ್, ಬಸ್​ ಮತ್ತು ಟಿಟಿ‌ ವಾಹನದ ನಡುವೆ ಸರಣಿ ಅಪಘಾತ ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ‌‌ ಗ್ರಾಮದ ಬಳಿ ನಡೆದಿದೆ. ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದ್ದು, ಅಪಘಾತದಲ್ಲಿ ಟಿಟಿ ವಾಹನದಲ್ಲಿದ್ದ ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಟಿಟಿ ವಾಹನದ ಒಂದು ಬದಿ ಸಂಪೂರ್ಣ ಜಖಂ ಆಗಿದ್ದರೆ ಟಿಪ್ಪರ್​​ ಮತ್ತು ಬಸ್​​ಗೆ ಸಣ್ಣಪುಟ್ಟ ಹಾನಿಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:15 pm, Mon, 20 July 26

Follow Us