ಉದ್ಯೋಗ ಕೊಡಿಸುವುದಾಗಿ 20ಕ್ಕೂ ಹೆಚ್ಚು ಜನರಿಗೆ ವಂಚನೆ! ಹಣ ವಾಪಸ್ ಕೇಳಿದ್ದ ಯುವಕರ ಮೇಲೆ ಹಲ್ಲೆ
ಆರೋಪಿಗಳು ಯುವಕರಿಗೆ ಟ್ರೈನಿಂಗ್ ಕೊಡುವುದಾಗಿ ಕರೆಸಿಕೊಂಡು ತುಮಕೂರಿನ ಅಂತರಸನಹಳ್ಳಿಯಲ್ಲಿ ಉಳಿಸಿಕೊಂಡಿದ್ದರಂತೆ. ಜೊತೆಗೆ ಮತ್ತೊಬ್ಬರನ್ನ ಕರೆತಂದರೆ 17 ಸಾವಿರ ಕೊಡುವುದಾಗಿ ವಂಚಿಸಿದ್ದಾರೆ.
ತುಮಕೂರು: ಉದ್ಯೋಗ (Job) ಕೊಡಿಸುತ್ತೇವೆಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿಎಲ್ವೈ ಕಂಪನಿ (CLY Company) ಹೆಸರಿನಲ್ಲಿ 20ಕ್ಕೂ ಹೆಚ್ಚು ಯುವಕರಿಗೆ ಅಪರಿಚಿತರು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಕೈಗಾರಿಕಾ ಕಾರ್ಖಾನೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ತುಮಕೂರು, ಬೆಂಗಳೂರು, ಶಿವಮೊಗ್ಗ, ಚಾಮರಾಜನಗರದಲ್ಲಿ ವಂಚಿಸಿದ್ದಾರೆಂದು ಮೋಸ ಹೋದ ಯುವಕರು ತುಮಕೂರು ಗ್ರಾಮಾಂತರ ಠಾಣೆಗೆ ದೂರು ದಾಖಲಿಸಿದ್ದಾರೆ. 2,800 ರಿಂದ 45 ಸಾವಿರ ರೂ.ವರೆಗೆ ಹಣ ಕಟ್ಟಿಸಿಕೊಂಡಿದ್ದಾರೆ. ರೂಮ್ ಶುಲ್ಕ ಸೇರಿದಂತೆ ಇತರೆ ವಸ್ತುಗಳ ಹಣ ಕಟ್ಟಿಸಿಕೊಂಡಿದ್ದರು. ಅಲ್ಲದೆ ಟ್ರೈನಿಂಗ್ ಹೆಸರಿನಲ್ಲಿ ಕೆಲ ಯುವತಿಯರನ್ನ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಯುವಕರು ಆರೋಪಿಸಿದ್ದಾರೆ.
ಆರೋಪಿಗಳು ಯುವಕರಿಗೆ ಟ್ರೈನಿಂಗ್ ಕೊಡುವುದಾಗಿ ಕರೆಸಿಕೊಂಡು ತುಮಕೂರಿನ ಅಂತರಸನಹಳ್ಳಿಯಲ್ಲಿ ಉಳಿಸಿಕೊಂಡಿದ್ದರಂತೆ. ಜೊತೆಗೆ ಮತ್ತೊಬ್ಬರನ್ನ ಕರೆತಂದರೆ 17 ಸಾವಿರ ಕೊಡುವುದಾಗಿ ವಂಚಿಸಿದ್ದಾರೆ. ಯುವಕರು ಕಟ್ಟಿರುವ 11 ಸಾವಿರ ಹಣ ವಾಪಸ್ ಕೇಳಿದ್ದಕ್ಕೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: Alia Bhatt: ಪ್ರೆಗ್ನೆನ್ಸಿ ಬೆನ್ನಲ್ಲೇ ಆಲಿಯಾಗೆ ವಿಪರೀತ ಕೋಪ; ಅದಕ್ಕೆ ಕಾರಣ ಗಂಡನ ಕುರಿತ ಒಂದೇ ಒಂದು ಗಾಸಿಪ್
ಆರೋಪಿಗಳು ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡರೆ, ಯುವಕರಿಂದ ಪ್ರವೇಶ ಶುಲ್ಕ ಎಂದು ಸಾವಿರಾರು ರೂ. ಪೀಕಿದ್ದಾರೆ. ಹೀಗೆ ನೂರಾರು ಯುವಕಗೆ ಲಕ್ಷಾಂತರ ರೂ. ವಂಚಿಸಿದ್ದಾರೆ. ಇತ್ತ ಕೆಲಸ ಇಲ್ಲದೆ, ಅತ್ತ ದುಡ್ಡೂ ಇಲ್ಲದೆ ಯುವಕ-ಯುವತಿಯರು ಸಂಕಷ್ಟ ಅನುಭವಿಸಿವಂತಾಗಿದೆ. ಕೆಲ ಯುವತಿಯರನ್ನ ಲೈಂಗಿಕವಾಗಿ ಬಳಸಿಕೊಂಡ ಫೋಟೋ, ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಯುವಕರು ತುಮಕೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: Mirage Fighter Jet: ಭಾರತೀಯ ವಾಯುಪಡೆಗೆ ‘ಮಿರಾಜ್–2000’ ಯುದ್ಧ ವಿಮಾನದ ಮೇಲೆ ವ್ಯಾಮೋಹವೇಕೆ?
Published On - 8:40 am, Wed, 29 June 22