ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಟಿವಿ9ನ ಹೆಚ್.ವಿ. ಕಿರಣ್ ನೇಮಕ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿವಿಧ ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 11 ಸದಸ್ಯರನ್ನು ನೇಮಕ ಮಾಡಲಾಗಿದೆ. ಈ ಪೈಕಿ ಟಿವಿ9ನ ಕ್ರೈಂ ವಿಭಾಗದ ಮುಖ್ಯ ವರದಿಗಾರ ಹೆಚ್ವಿ ಕಿರಣ್ ಅವರನ್ನು ಸದಸ್ಯರನ್ನಾಗಿ ನೇಮಿಸಿದೆ.
ಬೆಂಗಳೂರು (ಸೆಪ್ಟೆಂಬರ್ 26): ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರನ್ನಾಗಿ ಟಿವಿ9ನ ಕ್ರೈಂ ವಿಭಾಗದ ಮುಖ್ಯ ವರದಿಗಾರ ಹೆಚ್ವಿ ಕಿರಣ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಇಂದು(ಸೆಪ್ಟೆಂಬರ್ 26) ಕರ್ನಾಟಕ ಸಚಿವಾಲಯದಿಂದ ಹೊರಡಿಸಲಾದ ಅಧಿಸೂಚನೆಯಲ್ಲಿ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ 11 ಜನ ಹಿರಿಯ ಪತ್ರಕರ್ತರು ಮತ್ತು ವರದಿಗಾರರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಈ ಪೈಕಿ ಹೆಚ್ವಿ ಕಿರಣ್ ಅವರು ಹನ್ನೊಂದು ಸದಸ್ಯರ ಬಳಗದಲ್ಲಿದ್ದಾರೆ.
ಇನ್ನು ಇದರ ಜೊತೆಗೆ ಎರಡು ಪತ್ರಿಕೋದ್ಯಮ ಕಾಲೇಜುಗಳ ಮುಖ್ಯಸ್ಥರನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಈ ಸದಸ್ಯರು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದವರು
- ಶಿವಾನಂದ ತಗಡೂರು, ಬೆಂಗಳೂರು
- ಎಂ.ಇ. ಮಂಜುನಾಥ್, ದಾವಣಗೆರೆ
- ಸಂಗಮೇಶ ಚೂರಿ, ವಿಜಯಪುರ
- ಶೋಭಾ ಎಂ.ಸಿ, ಬೆಂಗಳೂರು
- ಜೆ. ಅಬ್ಬಾಸ್ ಮುಲ್ಲಾ, ಧಾರವಾಡ
- ಹೆಚ್.ವಿ. ಕಿರಣ್, ಬೆಂಗಳೂರು
- ಅನಿಲ್ ವಿ. ಗೆಜ್ಜಿ, ಬೆಂಗಳೂರು
- ಕೆಂಚೇಗೌಡ, ಬೆಂಗಳೂರು
- ಯು. ಸುರೇಂದ್ರ ಶೆಣೈ, ಉಡುಪಿ
- ರವಿ ಕೋಟಿ, ಮೈಸೂರು
- ರಶ್ಮಿ ಎಸ್, ಬೆಂಗಳೂರು
ಪದನಿಮಿತ್ತ ಸದಸ್ಯರು
- ಮೈಸೂರು ಮಾನಸ ಗಂಗೋತ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು.
- ಮಂಗಳೂರು ಮಂಗಳ ಗಂಗೋತ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು.