ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
1. ಇಪಿಎಫ್ ಬಡ್ಡಿದರ ಶೇ 8.5 ನಿಗದಿ
ಪಿಎಫ್ ಬಡ್ಡಿದರವನ್ನು ಕಡಿಮೆ ಮಾಡಬಹುದು ಎಂದು ಹಣಕಾಸು ತಜ್ಞರು ವಿಶ್ಲೇಷಿಸಿದ್ದರು. ಆದರೆ ಅಧಿಕೃತ ಮಾಹಿತಿ ಪ್ರಕಾರ ಶೇ 8.5ರ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
Link: 5 ಕೋಟಿ ಕಾರ್ಮಿಕರಿಗೆ ಖುಷಿಕೊಟ್ಟ ನಿರ್ಧಾರ
2. ವಾಸ ಯೋಗ್ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ
ಈಸ್ ಆಫ್ ಲಿವಿಂಗ್ ಇಂಡೆಕ್ಸ್ (EOLI) ಅಂದರೆ, ದೇಶದಲ್ಲಿ ವಾಸಿಸಲು ಯೋಗ್ಯವಾದ ಅತ್ಯುತ್ತಮ ನಗರಗಳ ಸಾಲಿನಲ್ಲಿ ಬೆಂಗಳೂರು ಮೊದಲನೇ ಸ್ಥಾನ ಪಡೆದಿದೆ.
Link: ಬೆಂಗಳೂರಿಗೆ ಮೊದಲ ಸ್ಥಾನ
3. ಮೆಟ್ರೊಮ್ಯಾನ್ ಇ.ಶ್ರೀಧರನ್ ಕೇರಳದ ಮುಖ್ಯಮಂತ್ರಿ ಅಭ್ಯರ್ಥಿ
ಭಾರತದ ಮೆಟ್ರೊಮ್ಯಾನ್ ಎಂದೇ ಪ್ರಸಿದ್ಧಿಯಾಗಿರುವ ಇ.ಶ್ರೀಧರನ್ ಅವರನ್ನು ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಣೆ ಮಾಡಿದೆ. ಈ ಕುರಿತು ಕೇರಳ ರಾಜ್ಯ ಬಿಜೆಪಿ ಮುಖ್ಯಸ್ಥ ಸುರೇಂದ್ರನ್ ಮಾಹಿತಿ ನೀಡಿದ್ದಾರೆ.
Link: ಇ.ಶ್ರೀಧರನ್ ಕೇರಳ ಸಿಎಂ ಅಭ್ಯರ್ಥಿ
4. ಓಟಿಟಿ ಕಂಟೆಂಟ್ ಪ್ರಸಾರಕ್ಕೂ ಮುನ್ನ ಪರಿಶೀಲಿಸಿ
ಓಟಿಟಿ ವೇದಿಕೆಗಳು ಕಂಟೆಂಟ್ ಪ್ರಸಾರ ಮಾಡುವ ಮುನ್ನವೇ ಕಂಟೆಂಟ್ ಪರಿಶೀಲನೆ ನಡೆಸಬೇಕು. ಪರಿಶೀಲನೆ ನಡೆಸದೇ ಓಟಿಟಿ ವೇದಿಕೆಗಳು ಕಂಟೆಂಟ್ ಪ್ರಸಾರ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
Link: ಓಟಿಟಿ ಕಂಟೆಂಟ್ ಪ್ರಸಾರಕ್ಕೂ ಮುನ್ನ ಪರಿಶೀಲನೆ ಅಗತ್ಯ; ಸುಪ್ರೀಕೋರ್ಟ್
5. ಅಚ್ಚಿಗೂ ಮೊದಲು: 3019 AD- ಗತಕಾಲವು ಸದಾ ನಮ್ಮೊಂದಿಗೇ ಇರುತ್ತದೆ
ಈ ಕಾದಂಬರಿಯಲ್ಲಿ ತೀರಾ ಮುಂದುವರಿದ ತಂತ್ರಜ್ಞಾನದ ಜಗತ್ತನ್ನು, ಗುರುತಿಸಲಾಗದಷ್ಟು ಬದಲಾಗಿ ಹೋದ ಮಾನವ ಬದುಕನ್ನು ಕಾಣುತ್ತೀರಿ.
Link: ವಿಲಕ್ಷಣವಾದ ಜೀವನ ಮೌಲ್ಯಗಳ ತಿಕ್ಕಾಟ
6. ‘ಹೌದು ನಾನು ಆರ್ಎಸ್ಎಸ್, ನೀವ್ಯಾರು?’ ಸದನದಲ್ಲಿ ಯಡಿಯೂರಪ್ಪ ಪ್ರಶ್ನೆ
ಕಾಂಗ್ರೆಸ್ ಶಾಸಕರು ‘ನೀವೆಲ್ಲಾ ಆರ್ಎಸ್ಎಸ್’ ಎಂದು ಬಿಜೆಪಿ ಶಾಸಕರನ್ನು ದೂಷಿಸಿದರು. ಉತ್ತರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಹೌದು, ನಾನು ಆರ್ಎಸ್ಎಸ್, ನೀವ್ಯಾರು?’ ಎಂದರು.
Link: ‘ಹೌದು ನಾನು ಆರ್ಎಸ್ಎಸ್’
7. ಪ್ರಶಾಂತ್ ಸಂಬರಗಿಯನ್ನು ಜೈಲಿಗೆ ಕಳುಹಿಸಲು ಬೇಡಿಕೆ ಇಟ್ಟ ನಿಧಿ ಸುಬ್ಬಯ್ಯ
ಸಾಕಷ್ಟು ವಿವಾದಗಳಿಂದಲೇ ಸುದ್ದಿಯಾಗಿದ್ದ ಪ್ರಶಾಂತ್ ಸಂಬರಗಿ, ಈಗ ಬಿಗ್ ಬಾಸ್ ಮನೆ ಒಳಗೂ ಜಗಳಕ್ಕೆ ಕಾರಣರಾಗುತ್ತಿದ್ದಾರೆ. ಅವರನ್ನು ಮನೆ ಒಳಗೆ ಇರುವ ಜೈಲಿಗೆ ಕಳುಹಿಸುವಂತೆ ನಿಧಿ ಸುಬ್ಬಯ್ಯ ಬಿಗ್ ಬಾಸ್ಗೆ ಆಗ್ರಹಿಸಿದ್ದಾರೆ.
Link: ಬಿಗ್ ಬಾಸ್ ಎದುರು ಹೊಸ ಬೇಡಿಕೆ ಇಟ್ಟ ನಿಧಿ ಸುಬ್ಬಯ್ಯ
8. ತಾಯಿ ಆಗಲಿದ್ದಾರೆ ಶ್ರೇಯಾ ಘೋಶಾಲ್: ವೈರಲ್ ಆಯ್ತು ಗಾಯಕಿಯ ಹೊಸ ಫೋಟೋ
ಶ್ರೇಯಾ ಘೋಶಾಲ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಹಾಕಿಕೊಂಡಿದ್ದಾರೆ. ಶ್ರೇಯಾ ಹೊಟ್ಟೆ ಉಬ್ಬಿರುವುದು ಫೋಟೋದಲ್ಲಿ ಕಾಣುತ್ತದೆ. ಇದಕ್ಕೆ ಅಡಿಬರಹ ನೀಡಿರುವ ಅವರು, ಬೇಬಿ ಶ್ರೇಯಾದಿತ್ಯ ಶೀಘ್ರವೇ ಬರಲಿದ್ದಾರೆ. ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಶಿಲಾದಿತ್ಯ ಮತ್ತು ನಾನು ಸಂತೋಷಗೊಂಡಿದ್ದೇವೆ ಎಂದಿದ್ದಾರೆ.
Link: ತಾಯಿ ಆಗಲಿದ್ದಾರೆ ಶ್ರೇಯಾ ಘೋಶಾಲ್
9. ಶಾಸಕ ಬಿ.ಕೆ.ಸಂಗಮೇಶ್ ಒಂದು ವಾರಗಳ ಕಾಲ ಅಮಾನತು
ವಿಧಾನಸಭೆ ಕಲಾಪದಲ್ಲಿ ಶರ್ಟ್ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದ ಭದ್ರಾವತಿ ಶಾಸಕ ಸಂಗಮೇಶ್ ಅವರನ್ನು ಒಂದು ವಾರದ ಅವಧಿಗೆ ಸದನದಿಂದ ಅಮಾನತು ಮಾಡಲಾಗಿದೆ.
Link: ಶಾಸಕ ಅಮಾನತು
ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.
Published On - 5:22 pm, Thu, 4 March 21