AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Kannada News Live: ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್​ ಅಸಲಿ ಸತ್ಯ ಬಿಚ್ಚಿಟ್ಟ ಯತೀಂದ್ರ

Karnataka News Today Live Updates: ವಿಧಾನಪರಿಷತ್ತಿನ 4 ಕ್ಷೇತ್ರಗಳಿಗೆ ಬಿಗಿ ಭದ್ರತೆಯಲ್ಲಿ ಮತದಾನ ನಡೆಯುತ್ತಿದ್ದು, ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಸಿಸಿಬಿ ತನಿಖೆ ತೀವ್ರಗೊಳಿಸಿದೆ. ಮತ್ತೊಂದೆಡೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ ಮುಂದುವರಿದಿದೆ. ಇಂದಿನ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ಸ್ ಇಲ್ಲಿದೆ.

TV9 Kannada News Live: ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್​ ಅಸಲಿ ಸತ್ಯ ಬಿಚ್ಚಿಟ್ಟ ಯತೀಂದ್ರ
ಸಿದ್ದರಾಮಯ್ಯ ಸ್ಟಿಂಗ್​ನಲ್ಲಿ ಕಾಂಗ್ರೆಸ್​ನವರೂ ಶಾಮೀಲು: ಯತೀಂದ್ರ
ಭಾವನಾ ಹೆಗಡೆ
| Edited By: |

Updated on:Oct 23, 2026 | 1:01 PM

Share

LIVE NEWS & UPDATES

  • 23 Oct 2026 12:58 PM (IST)

    ಸಿದ್ದರಾಮಯ್ಯ ಸ್ಟಿಂಗ್ ವಿಡಿಯೋ ಅಸಲಿ ಸತ್ಯ ಬಿಚ್ಚಿಟ್ಟ ಯತೀಂದ್ರ

    ಮಾಜಿ ಸಿಎಂ ಸಿದ್ದರಾಮಯ್ಯ ಬ್ಲ್ಯಾಕ್​ಮೇಲ್​ಗೆಂದೇ ಸ್ಟಿಂಗ್ ಆಪರೇಷನ್, ಕಾಂಗ್ರೆಸ್​ನವರೂ ಶಾಮೀಲಾಗಿದ್ದಾರೆ ಎಂದು ಸಚಿವ ಯತೀಂದ್ರ ಗಂಭೀರ ಆರೋಪ ಮಾಡಿದ್ದಾರೆ. ಮತ್ತಷ್ಟು ಓದಿ

  • 23 Oct 2026 12:31 PM (IST)

    ಮಂಡ್ಯ: ಮೈಸೂರು-ಬೆಂಗಳೂರು ಹೈವೆ ಬಂದ್ ಮಾಡಿ ರೈತಸಂಘದಿಂದ ಉಗ್ರ ಪ್ರತಿಭಟನೆ

    ಮಂಡ್ಯದ ಗಣಂಗೂರು ಟೋಲ್ ಬಳಿ ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಬಂದ್ ಮಾಡಿ ರೈತಸಂಘದಿಂದ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ರೈತರು ರಸ್ತೆ ತಡೆ ನಡೆಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಾಕಾರರನ್ನು ಮನವೊಲಿಸಲು ಮಂಡ್ಯ ಎಸ್‌ಪಿ ಡಾ. ಶೋಭಾರಾಣಿ ಹಾಗೂ ಮೈಸೂರು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಹರಸಾಹಸ ಪಡುತ್ತಿದ್ದು, ರೈತರು ಮಾತ್ರ ಹೆದ್ದಾರಿ ತೆರವುಗೊಳಿಸಲು ಪಟ್ಟು ಹಿಡಿದಿದ್ದಾರೆ.

  • 23 Oct 2026 12:28 PM (IST)

    ಸ್ಟಿಂಗ್ ಆಪರೇಷನ್ ಪ್ರಕರಣ: ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಬಸವರಾಜ ಹೊರಟ್ಟಿ

    ಹುಬ್ಬಳ್ಳಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ,  ಸಿದ್ದರಾಮಯ್ಯ ಅಂತಹ ವ್ಯಕ್ತಿಯಲ್ಲ, ಅವರ ಹೆಸರು ಕೆಡಿಸಲು ಈ ರೀತಿ ಮಾಡಲಾಗಿದೆ ಎಂದಿದ್ದಾರೆ. ಎಐ ತಂತ್ರಜ್ಞಾನ ಬಳಸಿ ಹೀಗೆ ಮಾಡಿರಬಹುದು ಎಂದಿರುವ ಅವರು, ಪ್ರಕರಣವನ್ನು ಸಿಬಿಐಗೆ ವಹಿಸಿ ತಪ್ಪಿತಸ್ಥರನ್ನು ಜೈಲಿಗಟ್ಟಬೇಕೆಂದು ಆಗ್ರಹಿಸಿದ್ದಾರೆ.

  • 23 Oct 2026 12:08 PM (IST)

    ಮತಗಟ್ಟೆ ಬಳಿ ಬಿಜೆಪಿ ಶಾಸಕ ಮುನಿರತ್ನ ಮೇಲೆ ಹಲ್ಲೆಗೆ ಯತ್ನ!

    ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ನಾಗರಬಾವಿಯ ಡಾ. ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಪರ ಬೆಂಬಲ ಸೂಚಿಸಲು ಆಗಮಿಸಿದ್ದ ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.

  • 23 Oct 2026 12:06 PM (IST)

    ಕೆಎಸ್‌ಒಯು ಪರೀಕ್ಷೆಯಲ್ಲಿ ಮಾಸ್ ಕಾಪಿ ಆರೋಪ ತಳ್ಳಿಹಾಕಿದ ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ!

    ಶಿವಮೊಗ್ಗದ ಕೆಎಸ್‌ಒಯು ಪ್ರಾದೇಶಿಕ ಕಚೇರಿಯಲ್ಲಿ ಮಾಸ್ ಕಾಪಿ ಮತ್ತು ಹಣ ವಸೂಲಿ ಆರೋಪವನ್ನು ನಿರ್ದೇಶಕ ಬಿ.ಎಂ. ಸ್ವಾಮಿ ಟಿವಿ9ಗೆ ನೀಡಿದ ಹೇಳಿಕೆಯಲ್ಲಿ ತಳ್ಳಿಹಾಕಿದ್ದಾರೆ. ತಮ್ಮ ಕಚೇರಿಯಲ್ಲಿ ಯಾವುದೇ ನಕಲು ನಡೆಯುತ್ತಿಲ್ಲವೆಂದಿರುವ ಅವರು, ಈ ಕುರಿತು ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ.

  • 23 Oct 2026 12:05 PM (IST)

    ಚಿನ್ಮಯ ಅಮೃತ ಮಹೋತ್ಸವ: ದೆಹಲಿಯ ಭಾರತ್ ಮಂಟಪಂನಲ್ಲಿ ಪ್ರಧಾನಿ ಮೋದಿ ಚಾಲನೆ

    ದೆಹಲಿಯ ಭಾರತ್ ಮಂಟಪಂನಲ್ಲಿ ನಡೆದ ‘ಚಿನ್ಮಯ ಅಮೃತ ಮಹೋತ್ಸವ’ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಚಿನ್ಮಯ ಮಿಷನ್ ಸಂಸ್ಥೆಯ ಸಾಂಸ್ಕೃತಿಕ, ಸಾಮಾಜಿಕ ಸೇವೆಯನ್ನು ಶ್ಲಾಘಿಸಿ, ದೇಶದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವಲ್ಲಿ ಅದರ ಪಾತ್ರ ಹಿರಿದು ಎಂದರು.

  • 23 Oct 2026 12:03 PM (IST)

    ಜೋಳದ ಬೆಲೆ ದಿಢೀರ್ ಏರಿಕೆ, ರೊಟ್ಟಿ ದರವೂ ಹೆಚ್ಚಳ?

    ಉತ್ತರ ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿಯಿಂದಾಗಿ ಮಾಲ್ದಂಡಿ ಜೋಳದ ಬೆಲೆ ಕ್ವಿಂಟಾಲ್‌ಗೆ ₹5,500 ರಿಂದ ₹9,200 ರವರೆಗೆ ದ್ವಿಗುಣಗೊಂಡಿದೆ. ಇದರ ಬೆನ್ನಲ್ಲೇ ರಾಜ್ಯಾದ್ಯಂತ ದಿನನಿತ್ಯದ ಆಹಾರವಾದ ಜೋಳದ ರೊಟ್ಟಿ ದರವೂ ಹೆಚ್ಚಾಗುವ ಆತಂಕ ಸಾರ್ವಜನಿಕರಲ್ಲಿ ಎದುರಾಗಿದೆ. ಮತ್ತಷ್ಟು ಓದಿ

  • 23 Oct 2026 11:34 AM (IST)

    ಪಶ್ಚಿಮ ಪದವೀಧರ ಚುನಾವಣೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದಂಪತಿಯಿಂದ ಹಕ್ಕು ಚಲಾವಣೆ

    ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಅವರ ಪತ್ನಿ ಜ್ಯೋತಿ ಜೋಶಿ ಅವರು ಕೇಶ್ವಾಪುರ ಬಳಿಯ ಫಾತಿಮಾ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

  • 23 Oct 2026 11:33 AM (IST)

    ಸ್ಟಿಂಗ್ ಆಪರೇಷನ್ ಪ್ರಕರಣ: ಜೆ.ಪಿ ಭವನದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ

    ಜೆ.ಪಿ. ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ಟಿಂಗ್ ಆಪರೇಷನ್ ಪ್ರಕರಣ ಹಾಗೂ ವಿಕ್ಕಿ ಎಂಬ ವ್ಯಕ್ತಿಯ ಅಸಹಜ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿರುವ ಅವರು, ಸರ್ಕಾರ ಮತ್ತು ಸಿಎಂ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

  • 23 Oct 2026 10:49 AM (IST)

    ಅರುಣಾಚಲ ಪ್ರದೇಶ ಗಡಿಯಲ್ಲಿ ಭಾರತ-ಚೀನಾ ಸಂಘರ್ಷ

    ಅರುಣಾಚಲ ಪ್ರದೇಶ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿದೆ ಎಂದು ಐಟಿಬಿಪಿ ಮಹಾನಿರ್ದೇಶಕರು ದೃಢಪಡಿಸಿದ್ದಾರೆ. ಚೀನಾ ಸೇನೆ ಎಲ್‌ಎಸಿ ಬಳಿ ಪ್ರಚೋದನೆ ನೀಡಿದ್ದು, ಐಟಿಬಿಪಿ ಶೌರ್ಯ ಕಮಾಂಡೋಗಳು ತಕ್ಕ ತಿರುಗೇಟು ನೀಡಿವೆ. ಗಡಿಯಲ್ಲಿ ಜಂಟಿ ಎಚ್ಚರಿಕೆ ವಹಿಸಲಾಗಿದೆ. ಮತ್ತಷ್ಟು ಓದಿ

  • 23 Oct 2026 10:28 AM (IST)

    ಕೆಎಸ್‌ಒಯು ಪರೀಕ್ಷೆಯಲ್ಲಿ ಮಾಸ್ ಕಾಪಿ!

    ಶಿವಮೊಗ್ಗದ ಆಲ್ಕೋಳ ವೃತ್ತದ KSOU ಪ್ರಾದೇಶಿಕ ಕಚೇರಿಯಲ್ಲಿ ನಡೆಯುತ್ತಿರುವ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು (ಮಾಸ್ ಕಾಪಿ) ನಡೆದಿದೆ. ಪ್ರಾದೇಶಿಕ ನಿರ್ದೇಶಕ ಬಿ.ಎಂ.ಸ್ವಾಮಿ ಕುಮ್ಮಕ್ಕಿನಿಂದ ಹಣ ಪಡೆದು ವಿದ್ಯಾರ್ಥಿಗಳಿಗೆ ಕಾಪಿ ಹೊಡೆಯಲು ಅವಕಾಶ ನೀಡಲಾಗಿದೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಮತ್ತಷ್ಟು ಓದಿ

  • 23 Oct 2026 10:24 AM (IST)

    ನಾಗರಬಾವಿ ಮತಗಟ್ಟೆಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ!

    ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ನಾಗರಬಾವಿ ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಮಾಜಿ ಕಾರ್ಪೊರೇಟರ್ ಮೋಹನ್ ಕುಮಾರ್ ನಿಂದನೆ ಆರೋಪ ಕೇಳಿಬಂದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಬ್ಯಾರಿಕೇಡ್ ಹಾಕಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

  • 23 Oct 2026 10:03 AM (IST)

    111 ಕೋಟಿ ಕ್ಲಬ್ ಸೇರಿದ ‘ಪ್ರೇಮದ ಊರಲಿ’ ಸಿನಿಮಾ

    ಕನ್ನಡದ ಹೆಮ್ಮೆಯ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಬಿಡುಗಡೆಯಾಗಿ ನಾಲ್ಕು ವಾರಗಳು ಕಳೆದರೂ ಪ್ರೇಕ್ಷಕರ ಸಾಗರವೇ ಹರಿದುಬರುತ್ತಿದ್ದು, ಜಾಗತಿಕ ಮಟ್ಟದಲ್ಲಿ 111 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.

  • 23 Oct 2026 09:55 AM (IST)

    ಟಿಬೆಟ್‌ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ: 18 ಸಾವು

    ಟಿಬೆಟ್‌ನಲ್ಲಿ ಸಂಭವಿಸಿದ 7.0 ತೀವ್ರತೆಯ ಪ್ರಬಲ ಭೂಕಂಪಕ್ಕೆ 18 ಜನರು ಮೃತಪಟ್ಟು, 46 ಮಂದಿ ಗಾಯಗೊಂಡಿದ್ದಾರೆ. 300ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಭಾರತದ ಗಡಿ ಭಾಗದಲ್ಲೂ ಇದರ ಕಂಪನದ ಅನುಭವವಾಗಿದೆ. ಮತ್ತಷ್ಟು ಓದಿ

  • 23 Oct 2026 09:53 AM (IST)

    ‘ಅಯ್ಯನ ಮನೆ 2’ ವೆಬ್ ಸೀರಿಸ್ ಜೀ5ನಲ್ಲಿ ಪ್ರಸಾರ ಆರಂಭ

    ಜನಪ್ರಿಯ ವೆಬ್ ಸೀರಿಸ್ ‘ಅಯ್ಯನ ಮನೆ 2’ ಇಂದಿನಿಂದ ಜೀ5 ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ಖುಷಿ ರವಿ ಅವರ ಅದ್ಭುತ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಒಟ್ಟು ಆರು ಎಪಿಸೋಡ್‌ಗಳನ್ನು ಹೊಂದಿರುವ ಈ ರೋಚಕ ಸೀರಿಸ್ ಪ್ರೇಕ್ಷಕರನ್ನು ಸಂಪೂರ್ಣವಾಗಿ ರಂಜಿಸುತ್ತಿದೆ.

  • 23 Oct 2026 09:49 AM (IST)

    ಪಾಕ್‌ಗೆ ವಿಶ್ವಸಂಸ್ಥೆಯಲ್ಲಿ ಭಾರತದಿಂದ ತಪರಾಕಿ: ಕಾರ್ಗಿಲ್ ಸೈನಿಕರ ಶವಗಳ ತಿರಸ್ಕಾರದ ಸತ್ಯ ಬಯಲು

    ಸ್ವಂತ ಸೈನಿಕರ ಶವಗಳನ್ನೇ ತಿರಸ್ಕರಿಸಿದ ದೇಶ ಪಾಕಿಸ್ತಾನ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಕಟುವಾಗಿ ಟೀಕಿಸಿದೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಹಾಗೂ ಅಲ್ಪಸಂಖ್ಯಾತರನ್ನು ದಮನ ಮಾಡುವ ಪಾಕಿಸ್ತಾನಕ್ಕೆ ಮಾನವ ಹಕ್ಕುಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಮತ್ತಷ್ಟು ಓದಿ

  • 23 Oct 2026 09:46 AM (IST)

    ಮಾಂಜಾ ದಾರ ಹಾವಳಿ: ಹುಬ್ಬಳ್ಳಿಯಲ್ಲಿ ಪೊಲೀಸರ ದಿಢೀರ್ ದಾಳಿ, 500+ ರೋಲ್ ವಶ

    ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿಯಾದ ಬೆನ್ನಲ್ಲೇ, ಧಾರವಾಡ ಸಿಟಿ ಬಸ್ ನಿಲ್ದಾಣದ ವೃತ್ತದ ಬಳಿಯ ಅಂಗಡಿಗಳ ಮೇಲೆ ಪೊಲೀಸರು ಗುರುವಾರ ಅನಿರೀಕ್ಷಿತ ದಾಳಿ ನಡೆಸಿದ್ದಾರೆ. ಸಾರ್ವಜನಿಕರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಅಧಿಕಾರಿಗಳು, 500ಕ್ಕೂ ಹೆಚ್ಚು ನಿಷೇಧಿತ ಮಾರಕ ಮಾಂಜಾ ದಾರದ ರೋಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

  • 23 Oct 2026 09:44 AM (IST)

    ಅಣ್ಣಾಮಲೈ ಸ್ಪಷ್ಟನೆ: ಸಿಜೆಪಿಯನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ, ಅವರ ಅಜೆಂಡಾವೇ ಬೇರೆ

    ಸಿಜೆಪಿ ಸಂಘಟನೆಯನ್ನು ಎಂದಿಗೂ ಬೆಂಬಲಿಸುವುದಿಲ್ಲ, ಅವರ ಅಜೆಂಡಾ ಬೇರೆಯಾಗಿದೆ ಎಂದು ತೀವ್ರ ವಿವಾದದ ಬೆನ್ನಲ್ಲೇ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕನ್ನು ಸಮರ್ಥಿಸಿದ ಅವರು, ಆಡಳಿತದ ತಪ್ಪುಗಳನ್ನು ಪ್ರಶ್ನಿಸುವ ಹಕ್ಕು ನಮಗಿದೆ ಎಂದರು. ಮತ್ತಷ್ಟು ಓದಿ

  • 23 Oct 2026 09:41 AM (IST)

    ದೊಡ್ಡಬಳ್ಳಾಪುರ ಸೇರಿದಂತೆ ಗ್ರಾಮಾಂತರ ಜಿಲ್ಲೆಯಲ್ಲಿ ಬಿರುಸಿನ ಮತದಾನ

    ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಇಂದು ಬೆಳಿಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಮತಗಟ್ಟೆಗಳತ್ತ ಆಗಮಿಸುತ್ತಿರುವ ಶಿಕ್ಷಕರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ಮತಗಟ್ಟೆಯಲ್ಲಿ ಮತದಾನ ಮಾಡಿ ಹೊರ ಬರುತ್ತಿರುವ ಮತದಾರರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 2,863 ಶಿಕ್ಷಕ ಮತದಾರರಿದ್ದು, ಇದರಲ್ಲಿ 1,411 ಪುರುಷರು ಮತ್ತು 1,452 ಮಹಿಳಾ ಮತದಾರರು ಸೇರಿದ್ದಾರೆ. ಸುಗಮ ಮತದಾನಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 6 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

  • 23 Oct 2026 09:33 AM (IST)

    ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ರಾಯಚೂರಿನಲ್ಲಿ ಬಿಗಿ ಭದ್ರತೆಯಲ್ಲಿ ಮತದಾನ ಆರಂಭ

    ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇಂದು ಬೆಳಿಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದ್ದು, ರಾಯಚೂರಿನಲ್ಲಿ ಒಟ್ಟು 16 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Breaking News Today Live Updates in Kannada: ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ವಿಚಾರಣೆ ನಡೆಸಿದ ಹಿರಿಯ ಪತ್ರಕರ್ತರೊಬ್ಬರು ನೋಟಿಸ್ ಪಡೆದ ಬೆನ್ನಲ್ಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ, ಕರ್ನಾಟಕ ವಿಧಾನಪರಿಷತ್ತಿನ ಬೆಂಗಳೂರು, ಈಶಾನ್ಯ ಶಿಕ್ಷಕರ ಹಾಗೂ ಪಶ್ಚಿಮ, ಆಗ್ನೇಯ ಪದವೀಧರ ಕ್ಷೇತ್ರಗಳ ಒಟ್ಟು 4 ಸ್ಥಾನಗಳಿಗೆ ಇಂದು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯುತ್ತಿದ್ದು, ಕಣದಲ್ಲಿರುವ 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.ಇನ್ನು ಬೆಂಗಳೂರಿನ ಕೆ.ಆರ್. ಮಾರ್ಕೆಟ್, ಗಿರಿನಗರ ಸೇರಿದಂತೆ ಹಲವೆಡೆ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆಯಾಗಿದ್ದು, ಅಕ್ಟೋಬರ್ 24 ರವರೆಗೆ ರಾಜ್ಯಾದ್ಯಂತ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

LIVE TV

Published On - Oct 23,2026 9:32 AM

Follow Us
ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ!
ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ!
ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ  ಹಿರಿಯ ಪತ್ರಕರ್ತನಿಗೆ ಸಿಸಿಬಿ ಗ್ರಿಲ್​​
ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ  ಹಿರಿಯ ಪತ್ರಕರ್ತನಿಗೆ ಸಿಸಿಬಿ ಗ್ರಿಲ್​​
ಕೆಎಸ್ಒಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ಮಾಸ್ ಕಾಪಿ!
ಕೆಎಸ್ಒಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ಮಾಸ್ ಕಾಪಿ!
ಕರ್ನಾಟಕ ಸ್ಟಿಂಗ್ ಸಮರ ಹೈಕಮಾಂಡ್ ಅಂಗಳಕ್ಕೆ
ಕರ್ನಾಟಕ ಸ್ಟಿಂಗ್ ಸಮರ ಹೈಕಮಾಂಡ್ ಅಂಗಳಕ್ಕೆ
ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜೀವನ್!
ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜೀವನ್!
ಅಂಗಡಿಗಳ ಮೇಲೆ ಪೊಲೀಸರ ಹಠಾತ್ ದಾಳಿ: 500ಕ್ಕೂ ಹೆಚ್ಚು ರೋಲ್‌ ಮಾಂಜಾ ದಾರ ವಶ
ಅಂಗಡಿಗಳ ಮೇಲೆ ಪೊಲೀಸರ ಹಠಾತ್ ದಾಳಿ: 500ಕ್ಕೂ ಹೆಚ್ಚು ರೋಲ್‌ ಮಾಂಜಾ ದಾರ ವಶ
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್