
SIR ವೇಳೆ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ ಆರೋಪ ಸಂಬಂಧ ಬಳ್ಳಾರಿಯಲ್ಲಿ ಕಾಂಗ್ರೆಸ್, ಬಿಜೆಪಿ ನಡುವಿನ ಜಟಾಪಟಿ ತಾರಕಕ್ಕೇರಿದೆ. ಇಂದು ಬೃಹತ್ ಹೋರಾಟಕ್ಕೆ ಬಿಜೆಪಿ ಕರೆ ನೀಡಿದ್ದು, ಎಫ್ಐಆರ್ ದಾಖಲಾದ ಠಾಣೆಗಳಿಗೆ ಮುತ್ತಿಗೆ ಹಾಕಲು ನಿರ್ಧರಿಸಿದೆ. ನಾವು ಯಾವುದೇ ಸಮುದಾಯವನ್ನು ಟಾರ್ಗೆಟ್ ಮಾಡಿ ಪಟ್ಟಿ ನೀಡಿರಲಿಲ್ಲ. ಮತದಾರರ ಪಟ್ಟಿ ಪರಿಶೀಲನೆ ಮಾಡಿ ಎಂದು ಲೆಟರ್ ಕೊಟ್ಟಿದ್ದೆವು. ಹೀಗಾಗಿ ನಾವು ಠಾಣೆಗಳಿಗೆ ಮುತ್ತಿಗೆ ಹಾಕ್ತೇವೆ ಎಂದು ಎಚ್ಚರಿಕೆ ನೀಡಿದ್ದು, ಬಳ್ಳಾರಿಯ ರಾಯಲ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ಬಳಿಕ ಬ್ರೂಸ್ ಪೇಟೆ, ಎಪಿಎಂಸಿ ಠಾಣೆಗೆ ಮುತ್ತಿಗೆ ಹಾಕಲು ಬಿಜೆಪಿ ನಿರ್ಧರಿಸಿದೆ.
ಉಗ್ರರ ಜೊತೆ ನಂಟು ಹೊಂದಿದ್ದ ಆರೋಪಿತ ಯುವಕ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಏಣಕೂರು ಗ್ರಾಮದ ವಿಶಾಲ್ ಮೇತ್ರೆ ಸೇರಿದಂತೆ 7 ಜನರ ವಿರುದ್ಧ FIR ದಾಖಲಾಗಿದೆ. FIRನಲ್ಲಿ ವಿಶಾಲ್ ಮೇತ್ರೆ ಕುರಿತು ಹಲವು ಸ್ಫೋಟಕ ಅಂಶ ಉಲ್ಲೇಖಿಸಲಾಗಿದ್ದು, ಪಾಕಿಸ್ತಾನ ಮೂಲದ ಉಗ್ರರ ಜಾಲದ ಜೊತೆ ವಿಶಾಲ್ ಮೇತ್ರೆ ನಂಟಿನ ಬಗ್ಗೆಯೂ ಮಾಹಿತಿ ಸಿಕ್ಕಿದೆ. ವಾಟ್ಸ್ಆ್ಯಪ್, ಇನ್ಸ್ಟಾಗ್ರಾಮ್ ಮೂಲಕ ಪಾಕ್ ಮೂಲದ ಶಹಜಾದ್ ಭಟ್ಟಿ ರಾಣಾ ಹುನೇನ್ ಜೊತೆ ವಿಶಾಲ್ ಮೇತ್ರೆ ಸಂಪರ್ಕ ಹೊಂದಿದ್ದ. ಅಕ್ರಮಶಸ್ತ್ರಾಸ್ತ್ರ ಖರೀದಿ,ಸಾಗಣೆ ಕುರಿತು ಚರ್ಚಿಸಿದ್ದ ಎಂಬ ಬಗ್ಗೆ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. 2025 ಡಿಸೆಂಬರ್ನಿಂದಲೇ ದೇಶವಿರೋಧಿ ಚಟುವಟಿಕೆಯಲ್ಲಿ ಈತ ಭಾಗಿಯಾಗಿದ್ದ ಎನ್ನಲಾಗಿದೆ. ಘಟನೆ ಸಂಬಂಧ ಪಾಕ್ ಮೂಲದ ಶಹಜಾದ್ ಭಟ್ಟಿ ನೋಮಿ ಖಾನ್ ರಾನಾ ಹುನೈನ, ಯುಪಿ ಮೂಲದ ಅಶು ಶರ್ಮಾ, ಮಧ್ಯಪ್ರದೇಶದ ರಾಜೀವ್ ಭಾಯ್ ಸೇರಿ ಏಳು ಆರೋಪಿಗಳ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನ ಹುಸ್ಕೂರು ಕೋಡಿಪಾಳ್ಯ ಬಳಿಯ ಕಂಪನಿಯಲ್ಲಿ ಹಿಂದಿ ಭಾಷಿಗ ಮೇಲ್ವಿಚಾರಕನೊಬ್ಬ ಕನ್ನಡಿಗರಿಗೆ ಆವಾಜ್ ಹಾಕಿರುವ ಘಟನೆ ನಡೆದಿದೆ. ಕೆಲಸಕ್ಕೆ ಬರಬೇಕು ಅಂದ್ರೆ ಹಿಂದಿ ಕಲಿತು ಬನ್ನಿ. ಇದು ಕರ್ನಾಟಕ ಆದರೇನು? ನಮ್ಗೆ ಹಿಂದಿ ಭಾಷೆ ನಡೆಯುತ್ತದೆ. ನಿಮಗೂ ಅದೇ ಭಾಷೆ ಬರಬೇಕು ತಾಕೀತು ಮಾಡಿದ್ದಾನೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ಚುನಾವಣಾ ಆಯೋಗದ ಕಚೇರಿ ಮುಂದೆ ಸಿಎಂ ಮತ್ತು ಸಚಿವರ ಧರಣಿ ವಿಚಾರ ಸಂಬಂಧ ಇಂದು ಚುನಾವಣಾ ಆಯೋಗಕ್ಕೆ ಬಿಜೆಪಿ – ಜೆಡಿಎಸ್ನಿಂದ ದೂರು ಸಲ್ಲಿಕೆಯಾಗಲಿದೆ. ಸಾಂವಿಧಾನಿಕ ಸಂಸ್ಥೆಯ ಮೇಲೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಿ ಕುಮಾರಸ್ವಾಮಿ, ಆರ್.ಅಶೋಕ್ ನೇತೃತ್ವದಲ್ಲಿ ಸಿಎಂ, ಸಚಿವರು, ‘ಕೈ’ ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮೈತ್ರಿ ಪಡೆ ದೂರು ನೀಡಲಿದೆ. ಚುನಾವಣಾ ಆಯೋಗದ ಮುಂದೆ ಧರಣಿ ನಡೆಸಿದರೂ ಕ್ರಮವಾಗಿಲ್ಲ. ಹೀಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯುಕ್ತರಿಗೆ ಆ ಮೂಲಕ ಆಗ್ರಹಿಸಲಿವೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಇಂದು ಕಾಡಿನಿಂದ ನಾಡಿಗೆ ನಿಶಾನೆ ಆನೆ ಅಭಿಮನ್ಯು ಆಗಮಿಸಲಿದೆ. ಬೆಳಗ್ಗೆ 9 ಗಂಟೆಗೆ ಅರಮನೆಗೆ ಅಭಿಮನ್ಯು ಬರಲಿದ್ದು, ಚಿನ್ನದ ಅಂಬಾರಿ ಹೊರುವ ಕಾಯಕದಿಂದ ನಿವೃತ್ತಿ ಹೊಂದಿರುವ ಅಭಿಮನ್ಯು ಈ ಬಾರಿ ಮತ್ತೊಂದು ಮಹತ್ವದ ಜವಾಬ್ದಾರಿ ಹೊರಲಿದ್ದಾನೆ. ದಸರಾ ಮಹೋತ್ಸವದಲ್ಲೇ ಅಭಿಮನ್ಯುವಿಗೆ ಬೀಳ್ಕೊಡುಗೆ ನೀಡಬೇಕೆಂದು ಅಭಿಮನ್ಯು ಅಭಿಮಾನಿಗಳು ಒತ್ತಾಯಿಸಿದ್ದ ಹಿನ್ನೆಲೆ, ಅವರ ಆಸೆಯಂತೆ ಈ ಬಾರಿಯ ದಸರಾದಲ್ಲಿ ಅಭಿಮನ್ಯು ಭಾಗಿಯಾಗುತ್ತಿದ್ದಾನೆ.
ಬಾಗಲಕೋಟೆ ಜಿಲ್ಲೆಗೆ ಇಂದು ಡಾ.ಮಾನ್‌ಸಿಂಗ್ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಲಿದೆ. ಬೆಳಗ್ಗೆ 8.30ಕ್ಕೆ ಗುಳೇದಗುಡ್ಡ ತಾಲೂಕಿನ ಹಳದೂರಿಗೆ ಭೇಟಿ ನೀಡಿ, ಹುಸೇನಬಿ ಡಾಲಾಯತ್ ಹೊಲದಲ್ಲಿ ತಂಡ ಮೆಕ್ಕೆಜೋಳ ವೀಕ್ಷಿಸಲಿದೆ. ಬಳಿಕ ಬಾಗಲಕೋಟೆ ತಾಲೂಕಿನ ಶಿರೂರಿಗೆ ಭೇಟಿ ನೀಡುವ ತಂಡ, ರುದ್ರಪ್ಪರ ಕಬ್ಬು ಬೆಳೆ, ಬಸಯ್ಯ ಹೊಲದಲ್ಲಿ ಮೆಕ್ಕೆಜೋಳ ಬೆಳೆ ವೀಕ್ಷಣೆ ಮಾಡಲಿದೆ. ನಂತರ ಮಹಾಂತೇಶ್ ಗುಳೇದ ಹೊಲದಲ್ಲಿ ಈರುಳ್ಳಿ ಬೆಳೆ ವೀಕ್ಷಿಸಿ, ಭಗವತಿ ಕ್ರಾಸ್‌ನಲ್ಲಿ ಸೂರ್ಯಕಾಂತಿ, ತೊಗರಿ ಬೆಳೆಯ ಪರಿಶೀಲನೆ ನಡೆಸಲಿದೆ. ಹುನಗುಂದ ತಾಲೂಕಿನ ಅಮರಾವತಿ, ಇಳಕಲ್ ತಾಲೂಕಿನ ಚಿಕ್ಕಕೊಡಗಲಿ, ಗುಗ್ಗಲಮರಿ ಕ್ರಾಸ್‌ನಲ್ಲಿಯೂ ಬೆಳೆ ಹಾನಿ ಬಗ್ಗೆ ತಂಡ ಮಾಹಿತಿ ಕಲೆಹಾಕಲಿದೆ.
ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನೂರು ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಇಲಾಖಾವಾರು ನೂರು ದಿನಗಳ ರಿಪೋರ್ಟ್ ಪರಿಶೀಲನೆಗೆ ಸಿಎಂ ಮುಂದಾಗಿದ್ದಾರೆ. ಇಂದು
ಗೃಹ ಕಚೇರಿ ಕೃಷ್ಣದಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ಕೃಷಿ, ಜವಳಿ, ಸಕ್ಕರೆ, ತೋಟಗಾರಿಕೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಪಶುಸಂಗೋಪನೆ ಇಲಾಖೆ ಜೊತೆ ಮೀಟಿಂಗ್ ನಡೆಯಲಿದೆ. ಗಣಿ ಮತ್ತು ಭೂವಿಜ್ಞಾನ, ಸಣ್ಣ ಕೈಗಾರಿಕೆ ವಾಣಿಜ್ಯ ಮತ್ತು ಕೈಗಾರಿಕೆ , ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಿಂದಲೂ ಮುಖ್ಯಮಂತ್ರಿಗಳು ಮಾಹಿತಿ ಪಡೆಯಲಿದ್ದಾರೆ.
ಎಸ್ಐಆರ್ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ನಡುವೆ ಸಂಘರ್ಷ ಮುಂದುರಿದಿದೆ. ಫಾರ್ಮ್ -7 ವಿಚಾರವಾಗಿ ರಾಜಕೀಯ ಬೆಳವಣಿಗೆಗಳು ತೀವ್ರಗೊಂಡಿದ್ದು, ದೂರು-ಪ್ರತಿದೂರುಗಳು ದಾಖಲಾಗುತ್ತಿವೆ. ಫ್ಲೈದುಬೈ ವಿಮಾನದಲ್ಲಿ ಮುಖ್ಯ ಪೈಲಟ್ ಮೇಲೆ ಸಹ ಪೈಲಟ್ನಿಂದ ದಾಳಿ ಘಟನೆ ಸಂಬಂಧವೂ ಮಹತ್ವದ ಅಪ್ಡೇಟ್ಸ್ಗಳು ಸಿಕ್ಕಿವೆ. ಮತ್ತೊಂದೆಡೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ತಯಾರಿಯೂ ಭರ್ಜರಿಯಿಂದ ನಡೆಯುತ್ತಿದೆ. ಇದರೊಂದಿಗೆ ಕರ್ನಾಟಕದ ಇತರ ವಿದ್ಯಮಾನಗಳು, ಬಿಗ್ ಬಾಸ್ ಹಾಗೂ ಸಿನಿಮಾ ಸಂಬಂಧಿತ ಸುದ್ದಿಗಳು, ರಾಷ್ಟ್ರ-ಅಂತರರಾಷ್ಟ್ರೀಯ ಮಾಹಿತಿ, ಕ್ರೀಡಾ ವಿಷಯಗಳಿಗೆ ಸಂಬಂಧಿಸಿದ ತಾಜಾ ಮಾಹಿತಿ ಇಲ್ಲಿ ಲಭ್ಯ. ಅದಕ್ಕಾಗಿ ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Published On - 6:25 am, Mon, 5 October 26