ಏಮ್ಸ್ ಎಂಸಿಹೆಚ್ ಪರೀಕ್ಷೆ; ಕರ್ನಾಟಕದ ಡಾ ರಜತ್ ಶೆಟ್ಟಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ

ಮೈಸೂರ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಅಧ್ಯಯನ ಮಾಡಿ ದೆಹಲಿಯ ರಾಮ ಮನೋಹರ ಲೋಹಿಯ ವೈದ್ಯಕೀಯ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವ ರಜತ್ ಶೆಟ್ಟಿ, 2022 ರಲ್ಲಿ ಎಂಎಸ್ ಪದವಿ ಪಡೆದಿದ್ದಾರೆ.

ಏಮ್ಸ್ ಎಂಸಿಹೆಚ್ ಪರೀಕ್ಷೆ; ಕರ್ನಾಟಕದ ಡಾ ರಜತ್ ಶೆಟ್ಟಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ
ಡಾ. ರಜತ್ ಶೆಟ್ಟಿ
Edited By:

Updated on: Jun 05, 2023 | 8:45 PM

ಬೆಂಗಳೂರು: ದೇಶದ ಪ್ರತಿಷ್ಠಿತ ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ ಏಮ್ಸ್  (AIIMS) ಮತ್ತು ಇತರ ಐದು ವೈದ್ಯಕೀಯ ಸಂಸ್ಥೆಗಳ ಸೂಪರ್ ಸ್ಪೇಷಾಲಿಟಿ ವಿಭಾಗದಲ್ಲಿ 2023 ರ ಜುಲೈ ತಿಂಗಳಿನಿಂದ ಆರಂಭವಾಗುವ ಎಂಸಿಹೆಚ್ ಪದವಿಯ ಪ್ರವೇಶ ಪರೀಕ್ಷೆಯ ಯುರಾಲಜಿ ವಿಭಾಗದಲ್ಲಿ ಕರ್ನಾಟಕದ ಡಾ. ರಜತ್ ಶೆಟ್ಟಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಮೈಸೂರ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಅಧ್ಯಯನ ಮಾಡಿ ದೆಹಲಿಯ ರಾಮ ಮನೋಹರ ಲೋಹಿಯ ವೈದ್ಯಕೀಯ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವ ರಜತ್ ಶೆಟ್ಟಿ, 2022 ರಲ್ಲಿ ಎಂಎಸ್ ಪದವಿ ಪಡೆದಿದ್ದಾರೆ. ಪ್ರಸ್ತುತ ದೆಹಲಿಯ ಎಲ್​ಎನ್​ಜೆಪಿಯಲ್ಲಿ ಶಸ್ತ್ರ ಚಿಕಿತ್ಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರು ಉಡುಪಿ ಜಿಲ್ಲೆಯ ವಂಡಾರು ಮಾರ್ವಿ ಸದಾಶಿವ ಶೆಟ್ಟಿ ಮತ್ತು ಶಾಲಿನಿ ಶೆಟ್ಟಿಯವರ ಪುತ್ರರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us