AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Udupi News: ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ: 7 ಜನರು ಸಾವು, ಮೃತ 2 ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿಯಲ್ಲಿ ಮಹಾ ಮಳೆಗೆ 7 ಜನರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಗಾಳಿ ಮಳೆಗೆ ಮನೆಗಳು ಕುಸಿದಿದ್ದು, ಕೆಲವು ಮನೆಗಳಿಗೆ ‌ಭಾಗಶಃ ಹಾನಿಯಾಗಿದೆ. ಮಳೆ ಅನಾಹುತಗಳಿಂದ ಮೃತಪಟ್ಟ ಎರಡು ಕುಟುಂಬಗಳಿಗೆ ಸ್ಥಳದಲ್ಲಿಯೇ ತಲಾ 5 ಲಕ್ಷ ಪರಿಹಾರ ವಿತರಣೆ ಮಾಡಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ ಸಾಂತ್ವನ ಹೇಳಿದ್ದಾರೆ.

Udupi News: ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ: 7 ಜನರು ಸಾವು, ಮೃತ 2 ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಭಾರೀ ಮಳೆ
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on:Jul 08, 2023 | 2:48 PM

Share

ಉಡುಪಿ: ಕಳೆದ ಎರಡು ದಿನಗಳಿಂದ ಸುಯುತ್ತಿರುವ ಮಹಾ ಮಳೆ (Heavy rain) ಗೆ ಜಿಲ್ಲೆಯಲ್ಲಿ ಒಟ್ಟು 7 ಜನರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಗಾಳಿ ಮಳೆಗೆ ಮನೆಗಳು ಕುಸಿದಿದ್ದು, ಕೆಲವು ಮನೆಗಳಿಗೆ ‌ಭಾಗಶಃ ಹಾನಿಯಾಗಿದೆ. ಮಳೆ ಅನಾಹುತಗಳಿಂದ ಮೃತ ಎರಡು ಕುಟುಂಬಗಳಿಗೆ ಸ್ಥಳದಲ್ಲಿಯೇ ತಲಾ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ ಸಾಂತ್ವನ ಹೇಳಿದ್ದಾರೆ. ಮೃತಪಟ್ಟ ಇತರೆ ಕುಟ್ಟುಂಬಗಳ ಮಾಹಿತಿ ಪಡೆದು ಪರಿಹಾರ ನೀಡಲಿದ್ದಾರೆ. ಮನೆಗಳ ಕುಸಿತ, ಹಾನಿಯಾದವರಿಗೂ ಶೀಘ್ರದಲ್ಲೇ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದಿಷ್ಟು

ಸಾಂತ್ವನ ಬಳಿಕ ಉಡುಪಿಯ ಪಡುಬಿದ್ರಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪ್ರತಿಕ್ರಿಯೆ ನೀಡಿದ್ದು, ಉಡುಪಿಯಲ್ಲಿ ತಡವಾದರೂ ಕೂಡ ಜೋರಾಗಿ ಮಳೆ ಬರುತ್ತಿದೆ. ಬಜೆಟ್ ಇದ್ದ ಕಾರಣ ನಿನ್ನೆ ಉಡುಪಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಡಿಸಿ ಜೊತೆ ಹಾಗೂ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಕಡಲ ಕೊರೆತದಿಂದ ಸಾಕಷ್ಟು ಭೂಪ್ರದೇಶ ಹಾನಿಯಾಗಿದೆ ಎಂದರು.

ಇದನ್ನೂ ಓದಿ: Monsoon Rain: ಉಡುಪಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ; ಅಪಾಯದಲ್ಲಿದ್ದ ಕುಟುಂಬಗಳ ರಕ್ಷಣೆ

ಮೃತಪಟ್ಟವರ ಕುಟುಂಬಕ್ಕೆ 24 ಗಂಟೆಯೊಳಗೆ ಪರಿಹಾರ

ಜಿಲ್ಲೆಯಲ್ಲಿ ಮಳೆಗೆ 7 ಮಂದಿ ಮೃತಪಟ್ಟಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ. ಜಿಲ್ಲಾಧಿಕಾರಿಗಳ ಜೊತೆ ಪುನರ್ ಪರಿಶೀಲನಾ ಸಭೆ ಮಾಡುತ್ತೇನೆ. ಕಡಲ ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳುತ್ತೇವೆ. ಮುಂಜಾಗ್ರತಾ ಕ್ರಮಕೈಗೊಳ್ಳಲು ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮೃತಪಟ್ಟ 7 ಜನರ ಕುಟುಂಬಸ್ಥರಿಗೆ ಹಣ ಹಾಕಿದ್ದೇವೆ. ಮೃತಪಟ್ಟವರ ಕುಟುಂಬಕ್ಕೆ 24 ಗಂಟೆಯೊಳಗೆ ಪರಿಹಾರ ವಿತರಣೆ ಮಾಡಲಾಗುವುದು. ಮನೆಗಳಿಗೆ ಹಾನಿಯಾದರೆ ಎ, ಬಿ, ಸಿ ಅಂತ ವಿಂಗಡಿಸಿ ಪರಿಹಾರ ನೀಡುತ್ತೇವೆ. ಎಂದರು.

ಇದನ್ನೂ ಓದಿ: ಮುಂದುವರಿದ ಮಳೆ; ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿ ಐದು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

ಕಾಲು ಸಂಕದ ಸಮಸ್ಯೆ ಜಿಲ್ಲೆಯಲ್ಲಿ ಇದೆ. ಕಾಲು ಸಂಕದ ಬಗ್ಗೆ ಮೊದಲು ತಿಳಿದುಕೊಳ್ಳುತ್ತೇನೆ. ಬಳಿಕ ಶಾಶ್ವತವಾದ ಕಾಲು ಸಂಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:24 pm, Sat, 8 July 23