ಉಡುಪಿ ಯುವತಿ ರೇಪ್ ಕೇಸ್: ಪೊಲೀಸ್ ವಿಚಾರಣೆಯಲ್ಲಿ ಹಲವು ವಿಚಾರ ಬಾಯಿಬಿಟ್ಟ ಅಲ್ತಾಫ್
ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿ ಗೆಳಯನಂತಿದ್ದ ಅಲ್ತಾಫ್ ಯುವತಿ ಬಾಳಿಗೆ ಕೊಳ್ಳಿ ಇಟ್ಟಿದ್ದಾನೆ. ಯುವತಿ ಮೇಲೆ ಅತ್ಯಾಚಾರವೆಸಗಿದ ಪ್ರಮುಖ ಆರೋಪಿ ಅಲ್ತಾಫ್ ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಲ್ತಾಫ್ ಪೊಲೀಸರ ವಿಚಾರಣೆ ವೇಳೆ ಹಲವು ವಿಚಾರ ಬಾಯಿ ಬಿಟ್ಟಿದ್ದಾನೆ.
ಉಡುಪಿ, ಆಗಸ್ಟ್ 24: ಕಾರ್ಕಳ (Karkala) ಹಿಂದೂ ಯುವತಿಯ (Hindu Girl) ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಪ್ರಮುಖ ಅರೋಪಿ ಅಲ್ತಾಫ್ ಪೊಲೀಸರ ವಿಚಾರಣೆಯಲ್ಲಿ ಹಲವು ವಿಚಾರಗಳನ್ನು ಬಾಯಿ ಬಿಟ್ಟಿದ್ದಾನೆ. ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸಂತ್ರಸ್ಥ ಯುವತಿಯನ್ನು ಕಾರಿನಲ್ಲಿ ಕೂರಿಸಿಕೊಂಡೆ. ಬಳಿಕ ಕಾರಿನಲ್ಲಿ ಕಾರ್ಕಳದ ಕೆಲವು ಸ್ಥಳಗಳಲ್ಲಿ ಸುತ್ತಾಡಿದೆ.
ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆ ನಿರ್ಜನ ಪ್ರದೇಶಕ್ಕೆ ಯುವತಿಯನ್ನು ಕರೆದುಕೊಂಡು ಹೋದೆ. ಅಲ್ಲಿ ಸ್ನೇಹಿತರಿಗೆ ಕರೆ ಮಾಡಿ ಮದ್ಯ ತರಲು ಹೇಳಿದೆ. ಸ್ನೇಹಿತರು ಮದ್ಯ ತಂದ ಬಳಿಕ, ಅದರಲ್ಲಿ ಮಾದಕ ದ್ರವ್ಯ ಮಿಶ್ರಣ ಮಾಡಿ ಯುವತಿಗೆ ಕುಡಿಸಿ ಅತ್ಯಾಚಾರ ಎಸಗಿರುವುದಾಗಿ ಪೊಲೀಸರ ಮುಂದೆ ಆರೋಪಿ ಅಲ್ತಾಫ್ ಹೇಳಿದ್ದಾನೆ.
ಕಠಿಣ ಕ್ರಮಕ್ಕೆ ಹಿಂದೂ ಸಂಘಟನೆಗಳ ಆಗ್ರಹ
ಘಟನೆಯ ಹಿಂದೆ ಲವ್ ಜಿಹಾದ್ ಇದೆ. ಘಟನೆ ಹಿಂದೆ ಅತಿ ದೊಡ್ಡ ಜಾಲವಿದ್ದು, ಅದು ಬೆಳಕಿಗೆ ಬರಬೇಕು. ಲವ್ ಜಿಹಾದ್ ಜೊತೆ ಮಾದಕ ದ್ರವ್ಯದ ಜಿಹಾದ್ ಕೂಡ ಇರುವುದು ಸ್ಪಷ್ಟವಾಗಿದೆ. ಇಲಾಖೆ ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಪ್ರಕರಣದ ತನಿಖೆ ಮಾಡಬೇಕು. ಇನ್ನು ಪೋಷಕರು ಮನೆಯ ಹೆಣ್ಣು ಮಕ್ಕಳಿಗೆ ಎಚ್ಚರಿಕೆಯನ್ನು ತಿಳಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಆದ ಪರಿಚಯ ಈ ಹಂತಕ್ಕೆ ಬರಲು ಏನು ಕಾರಣ ತನಿಖೆಯಾಗಲಿ ಎಂದು ಹಿಂದೂ ಜಾಗರಣ ಮುಖಂಡ ಶ್ರೀಕಾಂತ್ ಶೆಟ್ಟಿ ಆಗ್ರಹಿಸಿದ್ದಾರೆ.
ಪೋಷಕರು ತಮ್ಮ ಹೆಣ್ಣು ಮಕ್ಕಳ ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಡಬೇಕು. ಸಾಕಷ್ಟು ಲವ್ ಜಿಹಾದ್ ಪ್ರಕರಣಗಳಿಗೆ ಕರಾವಳಿ ಸಾಕ್ಷಿಯಾಗಿದೆ. ಇದು ಈ ಪ್ರಕರಣದ ಮೂಲಕ ಅಂತ್ಯವಾಗಬೇಕು ಎಂದರು.
ಆರೋಪಿಗಳು ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರವೆಸಗಿದ್ದಾರೆ. ಈ ಅತ್ಯಾಚಾರ ಪ್ರಕರಣದಲ್ಲಿ ಇನ್ನೂ ನಾಲ್ಕೈದು ಜನ ಇದ್ದಾರೆ. ಎಲ್ಲ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು. ಡ್ರಗ್ಸ್ ಪತ್ತೆ ಹಚ್ಚುವ ಕೆಲಸವನ್ನೂ ಪೊಲೀಸರು ಮಾಡಬೇಕು. ಯುವತಿಯನ್ನು ಲವ್ ಜಿಹಾದ್ ಮಾಡಿ ಅತ್ಯಾಚಾರವೆಸಗಿದ್ದಾರೆ ಎಂದು ಬಜರಂಗದಳ ಮುಖಂಡ ಕೆ.ಆರ್.ಸುನೀಲ್ ಹೇಳಿದರು.
ಇದನ್ನೂ ಓದಿ: ಯುವತಿಗೆ ಮಾದಕ ಪದಾರ್ಥ ನೀಡಿ ಅತ್ಯಾಚಾರವೆಸಗಿದ ಅಲ್ತಾಫ್
ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲ: ಆರ್. ಅಶೋಕ್
ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದೂಗಳಿಗೆ ರಕ್ಷಣೆಯೇ ಇಲ್ಲ. ಅತ್ಯಾಚಾರ ಮಾಡುತ್ತಾರೆ, ಇಲ್ಲದಿದ್ರೆ ಕೇಸ್ಗಳನ್ನ ಮುಚ್ಚಿ ಹಾಕುತ್ತಾರೆ. ಹಾವೇರಿ, ಹುಬ್ಬಳ್ಳಿ ಆಯ್ತು, ಕಾರ್ಕಳ ತಾಲೂಕಿನಲ್ಲಿ ಕೃತ್ಯ ನಡೆದಿದೆ. ಐವನ್ ಡಿಸೋಜಾ ಕರ್ನಾಟಕವನ್ನ ಬಾಂಗ್ಲಾ ಮಾಡುತ್ತೇನೆ ಅಂದಿದ್ದಾರೆ. ಐವನ್ ಡಿಸೋಜಾ ಮೇಲೂ ಕಾಂಗ್ರೆಸ್ನವರು ಕ್ರಮ ಕೈಗೊಳ್ಳಲಿಲ್ಲ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ