ಉಡುಪಿ: ಕಾರ್ಮಿಕನ ಮೈಮೇಲೆ ಪ್ರೇತಾತ್ಮದ ಆವೇಶ, ಎದ್ನೋ ಬಿದ್ನೋ ಎಂದು ಓಡಿದ ಕಾರ್ಮಿಕರು, ವಿಡಿಯೋ ಇಲ್ಲಿದೆ

ಕಾರ್ಮಿಕನ ಮೈಮೇಲೆ ಪ್ರೇತಾತ್ಮದ ಆವೇಶ ಬಂದಿದ್ದಲ್ಲದೆ, ತನ್ನೊಂದಿಗೆ ಇದ್ದ ಸಹೋದ್ಯೋಗಿಗಳ ಮೇಲಿ ದಾಳಿ ನಡೆಸಿದೆ. ಬೆಚ್ಚಿಬಿದ್ದ ಕಾರ್ಮಿಕರು ಎದ್ನೋ ಬಿದ್ನೋ ಎಂದು ಓಡಿದ್ದಾರೆ. ಈ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉದ್ಯಾವರದ ಪಿತ್ರೋಡಿಯಲ್ಲಿ ನಡೆದಿದೆ.

Follow us
TV9 Web
| Updated By: Rakesh Nayak Manchi

Updated on: Nov 23, 2023 | 1:18 PM

ಉಡುಪಿ, ನ.23: ಕಾರ್ಮಿಕನ ಮೈಮೇಲೆ ಪ್ರೇತಾತ್ಮದ ಆವೇಶ ಬಂದು ದಾಳಿ ನಡೆಸಿದಾಗ ಸಹೋದ್ಯೋಗಿಗಳ ಎದ್ನೋ ಬಿದ್ನೋ ಎಂದು ಓಡಿದ ಘಟನೆ ಜಿಲ್ಲೆಯ (Udupi) ಕಾಪು ತಾಲೂಕಿನ ಉದ್ಯಾವರದ ಪಿತ್ರೋಡಿಯಲ್ಲಿ ನಡೆದಿದೆ. ಕಾರ್ಮಿಕರು ದಿಕ್ಕಾಪಾಲಾಗಿ ಓಡಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿತ್ತಿದೆ.

ಮೀನು ಕಟ್ಟಿಂಗ್ ಶೆಡ್​ನಲ್ಲಿ ಉತ್ತರ ಭಾರತದ 10 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎಲ್ಲರೂ ಒಂದೇ ರೂಮಿನಲ್ಲಿ ನೆಲೆಸಿದ್ದರು. ಆದರೆ, ತಡರಾತ್ರಿ 11 ರ ವೇಳೆಗೆ ಬಿಹಾರ ಮೂಲದ ಕಾರ್ಮಿಕನ ಮೈಮೇಲೆ ಪ್ರೇತಾತ್ಮದ ಆವೇಶವಾಗಿದೆ. ಪ್ರೇತಾತ್ಮ ಆಹ್ವಾನೆ ಆಗುತ್ತಲೇ ಸಹೋದ್ಯೋಗಿಗಳ ಮೇಲೆ ದಾಳಿ ನಡೆಸಿದ್ದಾನೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ರೂಮ್​ನಿಂದ ಒಬ್ಬರ ಮೇಲೆ ಒಬ್ಬರು ಬಿದ್ದು ಎದ್ದು ಓಡಿ ಹೋಗಿದ್ದಾರೆ. ಈ ವೇಳೆ ಕೆಲವರಿಗೆ ಗಾಯಗಳಾಗಿವೆ.

ಇದನ್ನೂ ಓದಿ: ಉಡುಪಿ: ತಂದೆಯ ಜೊತೆ ಸೇರಿ ಬೃಹತ್​ ಹೆಬ್ಬಾವು ಹಿಡಿದ ಮಗ; ಇಲ್ಲಿದೆ ವಿಡಿಯೋ

ಈ ಬಗ್ಗೆ ದೆವ್ವ ಆಹ್ವಾನೆಗೆ ಒಳಗಾದ ಕಾರ್ಮಿಕನೇ ಹೇಳಿಕೆ ನೀಡಿದ್ದಾರೆ. ನಾವು ಮಾರಿ ಕಟ್ಟೆಯ ಬಳಿ ಬಾಯಲ್ಲಿ ವಿಮಲ್ ಹಾಕಿಕೊಂಡು ಅಲ್ಲಿದ್ದ ಕುರ್ಚಿಯಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದೇವು. ಏಕಾಏಕಿ ನನ್ನ ಸುತ್ತ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು. ನಾನು ಭಯದಿಂದ ಕೂಗಿ ಕೊಳ್ಳುತ್ತಾ ಓಡಿದೆ ಎಂದರು.

ನನಗೆ ದೆವ್ವ ಹಿಡಿದಂತಾಗಿ ನಾನು ರೂಮಿಗೆ ಓಡಿ ಅಲ್ಲಿ ಕೂಡ ಕೂಗಾಡಿದೆ. ನಾನು ಏನು ಮಾಡುತ್ತಿದ್ದೇನೆ ಎಂದು ನನಗೆ ಅರಿವಿರಲಿಲ್ಲ. ನನ್ನ ಜೊತೆಗಿದ್ದವರು ನನಗೆ ಆಮೇಲೆ ತಿಳಿಸಿದರು. ಮಾರಿಕಟ್ಟಿ ಬಳಿಯಿಂದ ಒಬ್ಬ ವ್ಯಕ್ತಿ ತನ್ನ ಹಿಂದೆ ಇದ್ದ ಎನ್ನುವ ಅನುಭವವಾಗುತ್ತಿತ್ತು. ರೂಮಿನೊಳಗೆ ಹೋದಾಗಲೂ ಇದೇ ರೀತಿ ಆಯಿತು ಎಂದು ತನಗಾದ ಅನುಭವವನ್ನು ಕಾರ್ಮಿಕ ಹೇಳಿಕೊಂಡಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?