ಪ್ರತ್ಯೇಕ ಘಟನೆ: ಉಡುಪಿಯಲ್ಲಿ ನೀರಿನ ಹೊಂಡಕ್ಕೆ ಬಿದ್ದು ಮೂರು ವರ್ಷದ ಬಾಲಕಿ, ಕಾರವಾರದಲ್ಲಿ ವಿದ್ಯುತ್ ಪ್ರವಹಿಸಿ ಎಂಟು ತಿಂಗಳ ಮಗು ಸಾವು
ಉಡುಪಿಯಲ್ಲಿ ನೀರಿನ ಹೊಂಡಕ್ಕೆ ಬಿದ್ದು ಮೂರು ವರ್ಷದ ಬಾಲಕಿ ಸಾವನ್ನಪ್ಪಿದರೆ, ಇತ್ತ ಕಾರವಾರದಲ್ಲಿ ಮೊಬೈಲ್ ಚಾರ್ಜರ್ ವೈರ್ನಿಂದ ವಿದ್ಯುತ್ ಪ್ರವಹಿಸಿ 8 ತಿಂಗಳ ಮಗು ಸಾವನ್ನಪ್ಪಿದೆ.
ಉಡುಪಿ. ಆ.2: ನೀರಿನ ಹೊಂಡಕ್ಕೆ ಬಿದ್ದು ಮೂರು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೆಬ್ರಿ(Hebri)ತಾಲೂಕಿನ ನಾಲ್ಕೂರು ಗ್ರಾಮದ ಕಕ್ಕೆ ಅರಮನೆ ಜೆಡ್ಡು ಸಮೀಪ ನಡೆದಿದೆ. ಕೃತಿಕಾ(3) ಮೃತ ಬಾಲಕಿ. ನಿನ್ನೆ(ಆ.1) ರಾತ್ರಿ ಅಜ್ಜಿ ಮಂಜುಳಾ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಕತ್ತಲಲ್ಲಿ ರಸ್ತೆ ಪಕ್ಕದಲ್ಲಿರುವ ಹೊಂಡಕ್ಕೆ ಬಾಲಕಿ ಬಿದ್ದು ಕೊನೆಯುಸಿರೆಳೆದಿದ್ದಾಳೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್ ಚಾರ್ಜರ್ ವೈರ್ನಿಂದ ವಿದ್ಯುತ್ ಪ್ರವಹಿಸಿ ಮಗು ಸಾವು
ಉತ್ತರ ಕನ್ನಡ: ಜಿಲ್ಲೆಯ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ಮೊಬೈಲ್ ಚಾರ್ಜರ್ ವೈರ್ನಿಂದ ವಿದ್ಯುತ್ ಪ್ರವಹಿಸಿ ಮಗು ಸಾವನ್ನಪ್ಪಿದೆ. ಸಂಜನಾ ದಂಪತಿಯ 8 ತಿಂಗಳ ಹೆಣ್ಣು ಮಗು ಇದಾಗಿದ್ದು, ಮೊಬೈಲ್ ಚಾರ್ಜ್ಗೆ ಹಾಕಿ ಪೋಷಕರು ಆಪ್ ಮಾಡದೇ ಇಟ್ಟಿದ್ದರು. ಈ ವೇಳೆ ಆನ್ಇದ್ದ ಚಾರ್ಜರ್ನ್ನು ಮಗು ಬಾಯಲ್ಲಿಟ್ಟುಕೊಂಡಿದ್ದು ಕೂಡಲೇ ಶಾಕ್ನಿಂದ ಕೊನೆಯುಸಿರೆಳದಿದೆ.
ಇದನ್ನೂ ಓದಿ:Muharram: ಚಿತ್ರದುರ್ಗದಲ್ಲಿ ಮೊಹರಂ ಆಚರಣೆ ವೇಳೆ ಕೊಂಡ ಹಾಯುವಾಗ ಮಗುವಿನೊಂದಿಗೆ ಬೆಂಕಿಗೆ ಬಿದ್ದ ವ್ಯಕ್ತಿ
ಸಾರ್ವಜನಿಕರ ಮುಂದೆಯೇ ಅಂಗಡಿ ಶೆಟರ್ ಮುರಿದು ಕಳ್ಳತನ
ಬೆಂಗಳೂರು: ಮಹಾನಗರದಲ್ಲಿ ಪುಂಡರ ಹಾವಳಿ ನಿಲ್ಲುತ್ತಿಲ್ಲ. ಹೌದು, ಸಾರ್ವಜನಿಕರ ಮುಂದೆಯೇ ಅಂಗಡಿ ಶೆಟರ್ ಮುರಿದು ಕಳ್ಳತನ ಮಾಡಿದ ಘಟನೆ ಮಡಿವಾಳದ ಮಾರುತಿ ನಗರದಲ್ಲಿ ನಡೆದಿದೆ. ರಾಜಾರೋಷವಾಗಿ ಅಂಗಡಿ ಬೀಗ ಮುರಿದು 2 ಸಾವಿರ ಹಣ, ಸಿಸಿಟಿವಿ ಡಿವಿಆರ್ ಕಳ್ಳತನ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಲು ಬಂದ ಸ್ಥಳೀಯರ ಮಾತಿಗೂ ಡೊಂಟ್ ಕೇರ್ ಅಂದಿದ್ದಾರೆ. ಇನ್ನು ಕಳ್ಳರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:23 am, Wed, 2 August 23