ಕಾನೂನಿನಲ್ಲಿ ಕೇಳರಿಯದ ಸಂಗತಿ; ವಿವಾಹ ಪ್ರಮಾಣಪತ್ರ ನೀಡಿದ ವಕ್ಫ್ ಮಂಡಳಿ ಕುರಿತು ಹೈಕೋರ್ಟ್​ ಪ್ರತಿಕ್ರಿಯೆ

ವಕ್ಫ್ ಮಂಡಳಿಯು ಕಾನೂನಿನಲ್ಲಿ ಕೇಳರಿಯದ ರೀತಿಯಲ್ಲಿ ವಿವಾಹ ಪ್ರಮಾಣಪತ್ರಗಳನ್ನು ನೀಡುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಮೌಖಿಕ ಪ್ರತಿಕ್ರಿಯೆ ನೀಡಿದೆ. ವಿವಾಹಿತ ಮುಸ್ಲಿಂ ಅರ್ಜಿದಾರರಿಗೆ ವಿವಾಹ ಪ್ರಮಾಣಪತ್ರ ನೀಡಲು ವಕ್ಫ್ ಮಂಡಳಿಗೆ ಅಧಿಕಾರ ನೀಡಿದ ಸರ್ಕಾರಿ ಆದೇಶವು ಕಾನೂನಿನಲ್ಲಿ ಹಿಂದೆಂದೂ ಕೇಳರಿಯದ ಸಂಗತಿಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಕಾನೂನಿನಲ್ಲಿ ಕೇಳರಿಯದ ಸಂಗತಿ; ವಿವಾಹ ಪ್ರಮಾಣಪತ್ರ ನೀಡಿದ ವಕ್ಫ್ ಮಂಡಳಿ ಕುರಿತು ಹೈಕೋರ್ಟ್​ ಪ್ರತಿಕ್ರಿಯೆ
ಕರ್ನಾಟಕ ಹೈಕೋರ್ಟ್
Follow us
ಸುಷ್ಮಾ ಚಕ್ರೆ
|

Updated on: Nov 12, 2024 | 9:05 PM

ಬೆಂಗಳೂರು: ಮುಸ್ಲಿಂ ಅರ್ಜಿದಾರರಿಗೆ ವಿವಾಹ ಪ್ರಮಾಣಪತ್ರ ನೀಡಲು ವಕ್ಫ್ ಮಂಡಳಿಗೆ ಅಧಿಕಾರ ನೀಡುವ ಸರ್ಕಾರದ ಆದೇಶವು ಕಾನೂನಿನಲ್ಲಿ ಕೇಳರಿಯದ ವಿಷಯವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಇಂದು ಮೌಖಿಕವಾಗಿ ಪ್ರತಿಕ್ರಿಯೆ ನೀಡಿದೆ. ಈ ಆದೇಶವನ್ನು ಪ್ರಶ್ನಿಸಿ ಎ. ಆಲಂ ಪಾಷಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ ಅರವಿಂದ್ ಅವರಿದ್ದ ವಿಭಾಗೀಯ ಪೀಠ, ಆಕ್ಷೇಪಣೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಸೆಪ್ಟೆಂಬರ್ 30ರಂದು ಮದುವೆ ಪ್ರಮಾಣಪತ್ರ ನೀಡಲು ವಕ್ಫ್ ಮಂಡಳಿಗೆ ಅಧಿಕಾರ ನೀಡುವ ಆದೇಶವು ಕಾನೂನಿನಲ್ಲಿ ಪ್ರಸ್ತಾಪವಾಗದ ವಿಷಯವಾಗಿದೆ. ವಕ್ಫ್ ಕಾಯ್ದೆಯಡಿ ಪ್ರಮಾಣಪತ್ರಗಳನ್ನು ನೀಡುವ ಅಧಿಕಾರವನ್ನು ನಮಗೆ ತೋರಿಸಿ ಎಂದು ನ್ಯಾಯಪೀಠವು ಸೂಚಿಸಿದೆ.

ಇದನ್ನೂ ಓದಿ: Karnataka Rains: ಕರ್ನಾಟಕದ ಈ 5 ಜಿಲ್ಲೆಗಳಲ್ಲಿ ಧಾರಾಕಾರ ಮಳೆ, ಯೆಲ್ಲೋ ಅಲರ್ಟ್​

ಸರ್ಕಾರದ ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಇಲಾಖೆಯ ಅಧೀನ ಕಾರ್ಯದರ್ಶಿಯವರ ಕೈಯಲ್ಲಿ ಸೆಪ್ಟೆಂಬರ್ 2023ರ 30ರಂದು ಹೊರಡಿಸಲಾದ ಸರ್ಕಾರಿ ಆದೇಶವು ವಕ್ಫ್ ಕಾಯಿದೆ, 1995ರಲ್ಲಿ ಒಳಗೊಂಡಿರುವ ನಿಬಂಧನೆಗಳಿಗೆ ಅಸಮಂಜಸವಾಗಿದೆ ಎಂದು ಘೋಷಿಸಲು ಮನವಿ ಮಾಡಲಾಗಿತ್ತು ಎಂದು ಲೈವ್ ಲಾ ವರದಿ ಮಾಡಿದೆ.

ರಾಜ್ಯ ಸರ್ಕಾರವು ತನ್ನ ಆಕ್ಷೇಪಣೆಗಳನ್ನು ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ಕೋರಿದಾಗ ಹೈಕೋರ್ಟ್​ ಆ ಮನವಿಯನ್ನು ಪುರಸ್ಕರಿಸದೆ ನವೆಂಬರ್ 21ಕ್ಕೆ ವಿಚಾರಣೆಯನ್ನು ಮುಂದೂಡಿತು.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ
ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲೇ ಹೃದಯಾಘಾತದಿಂದ ಸಾವು!
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲೇ ಹೃದಯಾಘಾತದಿಂದ ಸಾವು!
ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ
ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ
ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ
ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ