Gokarna: ನೀರಿರುವ, ತೆರೆದ ಬಾವಿಗೆ ಬಿದ್ದಿದ್ದ ಮೂಕ ಜೀವಿಯ ಯಶಸ್ವೀ ರಕ್ಷಣೆ ಮಾಡಿದ ಗ್ರಾಮಸ್ಥರು!
ಮೂಕ ಪ್ರಾಣಿಯ ಜೀವ ರಕ್ಷಿಸಿ ಮಾನವೀಯತೆ ಮೆರೆದ ದೇವಾಲಯ ಸಿಬ್ಬಂದಿಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ವೇಳೆ, ಮುಂದೆ ಮತ್ಯಾವುದೇ ಅನಾಹುತ ಆಗದಂತೆ ಸುತ್ತ ಗಿಡಗಂಟೆ ಬೆಳೆದು ಪಾಳು ಬಿದ್ದಿರುವ ಬಾವಿಯನ್ನ ಮುಚ್ಚಲು ಜನ ಆಗ್ರಹಿಸಿದ್ದಾರೆ.
ಕಾರವಾರ: ತೆರೆದ ಆಳವಾದ ಬಾವಿಗೆ ಬಿದ್ದ ಹಸುವನ್ನು ಸ್ಥಳೀಯರು ಭಾರೀ ಸಾಹಸಪಟ್ಟು ರಕ್ಷಣೆ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಈ ಘಟನೆ ನಡೆದಿದೆ. ಗೋಕರ್ಣ ನಗರದ (Gokarna) ಗಾಯತ್ರಿ ಓಣಿಯ ಖಾಸಗಿ ಜಾಗದಲ್ಲಿನ ನೀರು ಇರುವ, ತೆರೆದ ಬಾವಿಗೆ ಹಸು (cow) ಬಿದ್ದಿತ್ತು. ಬಾವಿಯಲ್ಲಿ ಬಿದ್ದು (open well) ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಹಸುವನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಶ್ರೀ ಮಹಾಬಲೇಶ್ವರ ದೇವಾಲಯದ ಸಿಬ್ಬಂದಿ ಹಾಗೂ ಸ್ಥಳೀಯರು ಈ ಮೂಕಜೀವಿ ರಕ್ಷಣೆ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
ತೆರೆದ ಬಾವಿಯ ಸುತ್ತ ಗಿಡಗಂಟೆಗಳು ಬೆಳೆದಿದ್ದು, ಮೇವು ಅರಸುತ್ತ ಬಂದ ಸದರಿ ಹಸು ತಿಳಿಯದೆ ಬಾವಿಗೆ ಜಾರಿ ಬಿದ್ದಿದೆ. ತಕ್ಷಣವೇ ಹಸುವಿನ ರಕ್ಷಣೆಗೆ ಕಟಿಬದ್ಧರಾದ ದೇವಸ್ಥಾನದ ಸಿಬ್ಬಂದಿ ಮತ್ತ ಸುತ್ತಮುತ್ತಲ ಜನ ಭಾರೀ ಸಾಹಸ ಮಟ್ಟು ಹಸುವನ್ನು ರಕ್ಷಣೆ ಮಾಡಿದ್ದಾರೆ. ಮೂಕ ಪ್ರಾಣಿಯ ಜೀವ ರಕ್ಷಿಸಿ ಮಾನವೀಯತೆ ಮೆರೆದ ದೇವಾಲಯ ಸಿಬ್ಬಂದಿಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ವೇಳೆ, ಮುಂದೆ ಮತ್ಯಾವುದೇ ಅನಾಹುತ ಆಗದಂತೆ ಸುತ್ತ ಗಿಡಗಂಟೆ ಬೆಳೆದು ಪಾಳು ಬಿದ್ದಿರುವ ಬಾವಿಯನ್ನ ಮುಚ್ಚಲು ಜನ ಆಗ್ರಹಿಸಿದ್ದಾರೆ.
ಪೋಷಕರು ಜಮೀನು ಕೊಟ್ಟಿಲ್ಲ ಎಂದು ಹಿಪ್ಪು ನೇರಳೆ ಬೆಳೆಗೆ ವಿಷ ಸಿಂಪಡಣೆ ಮಾಡಿದ ಮಗಳು!
ಕೋಲಾರ: ಹೆತ್ತವರು ತನ್ನ ಪಾಲಿಗೆ ಜಮೀನು ಕೊಟ್ಟಿಲ್ಲ ಎಂದು ಅಸಮಾಧಾನಗೊಂಡ ಮನೆಯ ಮಗಳು ಹಿಪ್ಪು ನೇರಳೆ ಬೆಳೆಗೆ ವಿಷ ಸಿಂಪಡಣೆ ಮಾಡಿ, ಮನೆ ಮಕ್ಕಳಂತೆ ಬೆಳೆದು ನಿಂತಿದ್ದ ಬೆಳೆಯನ್ನು ನಾಶ ಮಾಡಿದ್ದಾಳೆ! ಕೋಲಾರ ತಾಲೂಕಿನ ಯಳಚೀಪುರ ಗ್ರಾಮದಲ್ಲಿ ಈ ಹೇಯ ಘಟನೆ ನಡೆದಿದೆ. ಗ್ರಾಮದ ರಾಮಣ್ಣ-ಲಕ್ಷ್ಮಮ್ಮ ಎಂಬ ವೃದ್ದ ದಂಪತಿ ಬೆಳೆದಿದ್ದ ರೇಷ್ಮೆ ಬೆಳೆಯನ್ನು ಅವರ ಮಗಳು ಚೌಡಮ್ಮ ನಾಶ ಮಾಡಿದ್ದಾರೆ.
ಹಿರಿಯ ಮಗಳಾದ ಚೌಡಮ್ಮನಿಗೆ ಜಮೀನು ನೀಡಿಲ್ಲ ಎಂಬ ಕಾರಣಕ್ಕೆ ಹಿಪ್ಪು ನೇರಳೆ ಬೆಳೆಗೆ ವಿಷ ಹಾಕಿದ್ದಾಳೆ ಎಂದು ರಾಮಣ್ಣ-ಲಕ್ಷ್ಮಮ್ಮ ಎಂಬ ವೃದ್ದ ದಂಪತಿ ಆರೋಪ ಮಾಡಿದ್ದಾರೆ. ವಿಷ ಸಿಂಪಡಣೆ ಮಾಡಿದ ಹಿಪ್ಪು ನೇರಳೆ ಸೊಪ್ಪು ತಿಂದು ಇದೀಗ ಹುಳುಗಳು ಸಾಯುತ್ತಿವೆ. 150 ಮೊಟ್ಟೆಯ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ರೇಷ್ಮೆ ಬೆಳೆ ನಾಶವಾಗಿದೆ.
ಸಾಲ ಮಾಡಿ, ಕಷ್ಟಪಟ್ಟು ಜೀವನದೂಡುತ್ತಿದ್ದರೆ ಇದೀಗ ಬಂಗಾರದಂತಹ ರೇಷ್ಮೆ ಬೆಳೆಗೆ ವಿಷ ಹಾಕಿದ್ದಾರೆಂದು ವೃದ್ದ ದಂಪತಿ ಕಣ್ಣೀರು ಹಾಕಿದ್ದಾರೆ. ವೃದ್ದ ದಂಪತಿಯ ಮಗಳಾದ ಚೌಡಮ್ಮ, ಅಳಿಯ ಲಕ್ಷ್ಮಣ್ ಮತ್ತು ಮೊಮ್ಮಗ ಆನಂದ ವಿಷ ಹಾಕಿರುವ ಆರೋಪಕ್ಕೆ ತುತ್ತಾಗಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Also Read: ರೌಡಿಶೀಟರ್ ಓಪನ್ ಮಾಡಿಸುವ ಬೆದರಿಕೆ ಹಾಕಿದ್ದ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ವಿರುದ್ಧ ಎಫ್‌ಐಆರ್ ದಾಖಲು
Published On - 11:07 am, Sat, 29 January 22