Karnataka Dam Water Level: ಒಂದೇ ದಿನದಲ್ಲಿ ಕೆಆರ್‌ಎಸ್‌ಗೆ 1 ಟಿಎಂಸಿ ನೀರು: ಲಿಂಗನಮಕ್ಕಿ, ಭದ್ರಾ, ಹೇಮಾವತಿ ಜಲಾಶಯಗಳ ಇಂದಿನ ಒಳಹರಿವು ಹೇಗಿದೆ?

ಕರ್ನಾಟಕದ ಜಲಾಶಯಗಳ ಜುಲೈ 10ರ ನೀರಿನ ಮಟ್ಟ: ಜುಲೈ 10ರಂದು ಕರ್ನಾಟಕದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಕೆಆರ್‌ಎಸ್, ಲಿಂಗನಮಕ್ಕಿ, ಭದ್ರಾ, ಹೇಮಾವತಿ, ಹಾರಂಗಿಯ ನೀರಿನ ಮಟ್ಟದ ಸಮಗ್ರ ವರದಿ ಇಲ್ಲಿದೆ. ಮುಂಗಾರು ಮಳೆಯಿಂದಾಗಿ ಹಲವು ಜಲಾಶಯಗಳಿಗೆ ಭಾರೀ ಒಳಹರಿವು ದಾಖಲಾಗಿದ್ದು, ವಿಶೇಷವಾಗಿ ಕೃಷ್ಣಾ ಕಣಿವೆಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿದೆ. ಪ್ರಸ್ತುತ ಜಲಾಶಯಗಳ ಸಂಗ್ರಹ ಸಾಮರ್ಥ್ಯ ಮತ್ತು ಹರಿವಿನ ವಿವರಗಳನ್ನು ತಿಳಿಯಿರಿ.

Karnataka Dam Water Level: ಒಂದೇ ದಿನದಲ್ಲಿ ಕೆಆರ್‌ಎಸ್‌ಗೆ 1 ಟಿಎಂಸಿ ನೀರು: ಲಿಂಗನಮಕ್ಕಿ, ಭದ್ರಾ, ಹೇಮಾವತಿ ಜಲಾಶಯಗಳ ಇಂದಿನ ಒಳಹರಿವು ಹೇಗಿದೆ?
ಸಾಂದರ್ಭಿಕ ಚಿತ್ರ

Updated on: Jul 10, 2026 | 9:55 AM

ಮುಖ್ಯಾಂಶಗಳು

  • ಜಲಾಶಯಗಳಿಗೆ ಭಾರಿ ಪ್ರಮಾಣದ ಒಳಹರಿವು
  • ಹಳೆ ಮೈಸೂರು ಭಾಗದ ಡ್ಯಾಂಗಳಿಗೆ ನೀರಿನ ಮಟ್ಟ ಗಣನೀಯವಾಗಿ ಏರಿಕೆ
  • ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವರದಿ ಇಲ್ಲಿದೆ

ಬೆಂಗಳೂರು, ಜು.10: ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕಾಗಿರುವುದರಿಂದ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಜಲಾಶಯಗಳಿಗೆ ಭಾರಿ ಪ್ರಮಾಣದ ಒಳಹರಿವು (Inflow) ದಾಖಲಾಗುತ್ತಿದೆ. ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯ ಸೇರಿದಂತೆ ಕರಾವಳಿ, ಮಲೆನಾಡು ಹಾಗೂ ಹಳೆ ಮೈಸೂರು ಭಾಗದ ಡ್ಯಾಂಗಳಿಗೆ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವರದಿ ಇಲ್ಲಿದೆ.

ಆಲಮಟ್ಟಿ ಜಲಾಶಯ (ವಿಜಯಪುರ)

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಮಹಾರಾಷ್ಟ್ರ ಹಾಗೂ ಕೃಷ್ಣಾ ಕೊಳ್ಳದಿಂದ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ.

ಗರಿಷ್ಠ ಮಟ್ಟ: 519.60 ಮೀಟರ್

ಇಂದಿನ ನೀರಿನ ಮಟ್ಟ: 514.30 ಮೀಟರ್

ಒಳಹರಿವು: 1,43,653 ಕ್ಯೂಸೆಕ್

ಹೊರಹರಿವು: 483 ಕ್ಯೂಸೆಕ್

ಕೆ.ಆರ್.ಎಸ್ ಜಲಾಶಯ (ಮಂಡ್ಯ)

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ತೀವ್ರಗೊಂಡಿರುವುದರಿಂದ ಕೃಷ್ಣರಾಜಸಾಗರ (KRS) ಡ್ಯಾಂಗೆ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 1 ಟಿಎಂಸಿ ನೀರು ಹರಿದುಬಂದಿದೆ.

ಗರಿಷ್ಠ ಮಟ್ಟ: 124.80 ಅಡಿ

ಇಂದಿನ ನೀರಿನ ಮಟ್ಟ: 87.50 ಅಡಿ

ಒಳಹರಿವು: 12,312 ಕ್ಯೂಸೆಕ್

ಹೊರಹರಿವು: 762 ಕ್ಯೂಸೆಕ್

ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ | ಇಂದಿನ ಸಂಗ್ರಹ: 14.503 ಟಿಎಂಸಿ

ಲಿಂಗನಮಕ್ಕಿ ಜಲಾಶಯ (ಶಿವಮೊಗ್ಗ)

ಸಾಗರ ತಾಲೂಕಿನ ಲಿಂಗನಮಕ್ಕಿ ಡ್ಯಾಂ ಭಾಗದಲ್ಲಿ ಮಳೆ ಸುರಿಯುತ್ತಿರುವುದರಿಂದ ಒಳಹರಿವು ಉತ್ತಮವಾಗಿದೆ.

ಗರಿಷ್ಠ ಮಟ್ಟ: 1819 ಅಡಿ

ಇಂದಿನ ನೀರಿನ ಮಟ್ಟ: 1762.05 ಅಡಿ

ಒಳಹರಿವು: 19,496 ಕ್ಯೂಸೆಕ್ | ಹೊರಹರಿವು: ಇಲ್ಲ (00)

ಗರಿಷ್ಠ ಸಾಮರ್ಥ್ಯ: 151.64 ಟಿಎಂಸಿ | ಇಂದಿನ ಸಂಗ್ರಹ: 29.91 ಟಿಎಂಸಿ

ಭದ್ರಾ ಜಲಾಶಯ (ಶಿವಮೊಗ್ಗ)

ಭದ್ರಾವತಿ ತಾಲೂಕಿನ ಭದ್ರಾ ಜಲಾಶಯಕ್ಕೂ ನೀರಿನ ಒಳಹರಿವು ಏರಿಕೆ ಹಾದಿಯಲ್ಲಿದೆ.

ಗರಿಷ್ಠ ಮಟ್ಟ: 186 ಅಡಿ

ಇಂದಿನ ನೀರಿನ ಮಟ್ಟ: 146.1 ಅಡಿ

ಒಳಹರಿವು: 13,123 ಕ್ಯೂಸೆಕ್

ಹೊರಹರಿವು: 218 ಕ್ಯೂಸೆಕ್

ಗರಿಷ್ಠ ಸಾಮರ್ಥ್ಯ: 71.535 ಟಿಎಂಸಿ | ಇಂದಿನ ಸಂಗ್ರಹ: 31.257 ಟಿಎಂಸಿ

ಇದನ್ನೂ ಓದಿ: ಎಲೆಕ್ಟ್ರಿಕ್ ಆಟೋಗಳಿಗೂ ಪರ್ಮಿಟ್ ಕಡ್ಡಾಯ: ಅಕ್ರಮಗಳಿಗೆ ಬ್ರೇಕ್ ಹಾಕಲು ಕ್ರಮ, ಉಚಿತವಾಗಿಯೇ ಸಿಗಲಿದೆ ಪರ್ಮಿಟ್

ಹೇಮಾವತಿ ಜಲಾಶಯ (ಹಾಸನ)

ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಸಂಗ್ರಹ ಕೊಂಚ ಕಡಿಮೆಯಿದೆ. (ಕಳೆದ ವರ್ಷ ಇದೇ ದಿನ 35.077 ಟಿಎಂಸಿ ನೀರಿತ್ತು).

ಗರಿಷ್ಠ ಮಟ್ಟ: 2922 ಅಡಿ (37 ಟಿಎಂಸಿ)

ಇಂದಿನ ಮಟ್ಟ: 2902.07 ಅಡಿ (21.062 ಟಿಎಂಸಿ)

ಒಳಹರಿವು: 11,470 ಕ್ಯೂಸೆಕ್

ಹೊರಹರಿವು: 300 ಕ್ಯೂಸೆಕ್

ಬಸವಸಾಗರ ಜಲಾಶಯ (ಯಾದಗಿರಿ)

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಜಲಾಶಯದಲ್ಲಿ ಸದ್ಯ ಒಳಹರಿವು ಸ್ಥಗಿತಗೊಂಡಿದೆ.

ಗರಿಷ್ಠ ಮಟ್ಟ: 492.25 ಮೀಟರ್

ಇಂದಿನ ನೀರಿನ ಮಟ್ಟ: 488.77 ಮೀಟರ್

ಒಳಹರಿವು: 00 ಕ್ಯೂಸೆಕ್

ಹೊರಹರಿವು: 322 ಕ್ಯೂಸೆಕ್

ಹಾರಂಗಿ ಜಲಾಶಯ (ಕೊಡಗು)

ಕೊಡಗಿನ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯಕ್ಕೆ ಕಾವೇರಿ ಹರಿವು ಉತ್ತಮವಾಗಿದೆ.

ಗರಿಷ್ಠ ಮಟ್ಟ: 2859 ಅಡಿ

ಇಂದಿನ ನೀರಿನ ಮಟ್ಟ: 2843.66 ಅಡಿ

ಒಳಹರಿವು: 2,751 ಕ್ಯೂಸೆಕ್

ಹೊರಹರಿವು (ನದಿಗೆ): 180 ಕ್ಯೂಸೆಕ್

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:54 am, Fri, 10 July 26

Follow Us