ಬಿಸಲಿನ ಬೇಗೆಗೆ ತತ್ತರಿಸಿದ ಕಾರವಾರದ ಜನ; ತಂಪು ಪಾನೀಯಗಳಿಗೆ ಭಾರಿ ಡಿಮ್ಯಾಂಡ್

ಈ ಬಾರಿ ರಾಜ್ಯದ ವಿವಿಧೆಡೆ ನಿಗದಿಗೂ ಮುನ್ನ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಬೇಯುತ್ತಿದ್ದ ಹಲವೆಡೆ ಮಳೆಯ ಆಗಮನದಿಂದ ತಂಪಾಗಿದೆ. ಆದ್ರೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿದಂತೆ ಕರಾವಳಿ ಭಾಗದಲ್ಲಿ ಮಾತ್ರ ವರುಣ ಇನ್ನು ಕಣ್ಣನ್ನ ತೆರೆದು ನೋಡಿಲ್ಲ. ಈ ಹಿನ್ನಲೆಯಲ್ಲಿ ದಿನದಿಂದ ದಿನಕ್ಕೆ ನಗರದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಬಿಸಿಲನ್ನ ತಡೆಯಲಾಗದೆ ಕೆಲವರು ತಂಪು ಪಾನೀಯಕ್ಕೆ ಮಾರುಹೊಗಿದ್ರೆ, ಇನ್ನು ಕೆಲವರು ಬಿಯರ್ ಕಡೆ ಮುಖ ಮಾಡಿದ್ದು, ಪರಿಣಾಮ ಜಿಲ್ಲೆಯಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಬಿಯರ್ ಮಾರಾಟ ಆಗಿದೆ.

ಬಿಸಲಿನ ಬೇಗೆಗೆ ತತ್ತರಿಸಿದ ಕಾರವಾರದ ಜನ; ತಂಪು ಪಾನೀಯಗಳಿಗೆ ಭಾರಿ ಡಿಮ್ಯಾಂಡ್
ಕಾರವಾರದ ಬಿಸಿಲಿಗೆ ಜನ ಕಂಗಾಲು
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 22, 2024 | 6:36 PM

ಉತ್ತರ ಕನ್ನಡ, ಮೇ.22: ರಾಜ್ಯದ ಹಲವೆಡೆ ಈ ಬಾರಿ ಮುಂಚಿತವಾಗಿಯೇ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಬೇಯುತ್ತಿದ್ದ ಹಲವೆಡೆ ವರುಣನ ಆಗಮನದಿಂದ ಸ್ವಲ್ಪ ಮಟ್ಟಿಗಾದರೂ ತಂಪಾಗಿದೆ. ಆದ್ರೆ, ಉತ್ತರ ಕನ್ನಡ(Uttara Kannada) ಜಿಲ್ಲೆಯ ಕರಾವಳಿ ಭಾಗದಲ್ಲಿ ಮಾತ್ರ ಇನ್ನೂ ಮಳೆಯ ಆಗಮನವಾಗಿಲ್ಲ. ಇದರಿಂದ ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿದೆ. ಕಳೆದ ಮೂರು ದಿನದಿಂದ ಕಾರವಾರದಲ್ಲಿ ಗರಿಷ್ಟ 38 ಡಿಗ್ರಿ ತಾಪಮಾನ ದಾಟಿದೆ. ಈ ಹಿನ್ನಲೆ ನಗರದಲ್ಲಿ ಸೆಕೆ ತಡೆಯಲಾಗದೆ ಜನರು ಪರದಾಡುವ ಪರಿಸ್ಥಿತಿ ಉದ್ಬವಿಸಿದೆ.

ಇನ್ನು ಆಗಾಗ ವಿದ್ಯುತ್ ವ್ಯತ್ಯಯ ಮಾಡುವುದರಿಂದ ಫ್ಯಾನ್, ಎಸಿ ಆಫ್ ಆಗುತ್ತಿದ್ದು, ಸೆಕೆಯನ್ನ ತಾಳಲಾರದೆ ಮನೆಯಲ್ಲಿ ಇರುವುದಕ್ಕೂ ಆಗುತ್ತಿಲ್ಲ. ಇತ್ತ ಬಿಸಿಲಿನ ಬೆಗೆಗೆ ಮನೆಯಿಂದ ಹೊರಗೆ ಹೆಜ್ಜೆ ಇಡುವುದಕ್ಕೂ ಆಗದೆ ನರಳಾಡುವಂತಾಗಿದೆ. ನಗರದಲ್ಲಿ ಬಿಸಿಲಿನ ಬೆಗೆಯಿಂದ ದೆಹಕ್ಕೆ ಸ್ವಲ್ಪ ತಂಪಾಗಿಸಲು ಅಂಗಡಿಗಳಿಗೆ ಮುಗಿಬಿದ್ದು ಜನರು ಎಳನೀರು, ಸೋಡಾ, ಸೇರಿದಂತೆ ಇನ್ನಿತರ ತಂಪು ಪಾನೀಯವನ್ನ ಕುಡಿಯುತ್ತಿದ್ದಾರೆ. ಪ್ರತಿ ಅಂಗಡಿಗಳಲ್ಲೂ ಪ್ರತಿದಿನ ಐನೂರಕ್ಕೂ ಹೆಚ್ಚು ಎಳನೀರು, ಸೋಡಾ ಮಾರಾಟವಾಗುತ್ತಿದೆ. ಇದಲ್ಲದೇ ಎಳನೀರು ಅಧಿಕವಾಗಿ ಮಾರಾಟವಾಗುತ್ತಿದ್ದು ಒಂದು ಎಳನೀರಿನ ಬೆಲೆ 30 ರೂಪಾಯಿ ಇದ್ದದ್ದು ಈಗ 50 ರೂಪಾಯಿ ದಾಟಿದೆ.

ಇದನ್ನೂ ಓದಿ:ಹುಬ್ಬಳ್ಳಿ ನಗರದಲ್ಲಿ ಧಾರಾಕಾರ ಮಳೆ; ಬಿಸಲಿನ ಬೇಗೆಗೆ ಕಂಗೆಟ್ಟಿದ್ದ ಜನರಿಗೆ ತಂಪೆರೆದ ವರುಣ

ದಾಹ ತಣಿಸಲು ಬಿಯರ್​ ಮೊರೆ; ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಯರ್ ಮಾರಾಟ

ಇತ್ತ ಯುವಕರು, ಚಿಕ್ಕ ಮಕ್ಕಳಂತೂ ಐಸ್​ ಕ್ರಿಮ್, ಬದಾಮ್ ಶೆಖನಂತ ತಂಪು ಪಾನೀಯಗಳಿಗೆ ಅಡಿಕ್ಟ್ ಆಗಿದ್ದು, ತಂಪು ಪಾನೀಯಗಳನ್ನು ಕುಡಿಯದೆ ಇದ್ರೆ ಸಮಾಧಾನ ಆಗುತ್ತಿಲ್ಲ. ಇನ್ನು ಬಿಸಲಿನಿಂದ ಇನ್ನಷ್ಟು ಜನ ಅತಿ ಹೆಚ್ಚು ಬಿಯರ್ ಖರೀದಿ ಮಾಡುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಯರ್ ಮಾರಾಟ ಆಗಿದೆ. ಇದಲ್ಲದೇ ಅನೇಕರು ನಗರದಲ್ಲಿ ಅತಿ ತಾಪಮಾನ ಹೆಚ್ಚಾಗಿರುವ ಹಿನ್ನಲೆಯಲ್ಲಿ ಶಾಲಾ ಕಾಲೇಜಿಗೆ ರಜೆ ಇರುವುದರಿಂದ ಬೇರೆ ಊರುಗಳಿಗೆ ತೆರೆಳಿದ್ದಾರೆ. ಒಟ್ಟಿನಲ್ಲಿ ಕಾರವಾರದಲ್ಲಿ ಬಿಸಿಲಿನ ಬೇಗೆಯಿಂದ ಜನರು ಪರದಾಡುವ ಪರಿಸ್ಥಿತಿ ಉದ್ಬವಿಸಿದ್ದು, ಯಾವಾಗ ವರುಣ ಈ ಭಾಗದತ್ತ ಆಗಮಿಸುತ್ತಾನೋ ಎಂದು ಜನರು ಕಾಯುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ