AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರಾಠಿ ಭಾಷಾ ವಿವಾದಕ್ಕೆ ಕಿಡಿ ಇಟ್ಟ ಕಾರವಾರ ನಗರಸಭೆ; ಮರಾಠಿ ಭಾಷೆ ನಾಮಫಲಕ ಅಳವಡಿಕೆ

ನಗರಸಭೆ ಹಿಂದಿ ಲಿಪಿಯಲ್ಲಿ ಮರಾಠಿ ಭಾಷೆ ಬರೆದು ನಾಮಫಲಕ ಹಾಕಿದೆ. ಮುರಳಿಧರ್ ಮಠ ರಸ್ತೆ, ಗ್ರೀನ್ ಸ್ಟ್ರೀಟ್ ರಸ್ತೆ ಇತರೆ ಕಡೆಗಳಲ್ಲಿ ನಾಮಫಲಕಗಳನ್ನ ಹಾಕಲಾಗಿದೆ.

ಮರಾಠಿ ಭಾಷಾ ವಿವಾದಕ್ಕೆ ಕಿಡಿ ಇಟ್ಟ ಕಾರವಾರ ನಗರಸಭೆ; ಮರಾಠಿ ಭಾಷೆ ನಾಮಫಲಕ ಅಳವಡಿಕೆ
ಮರಾಠಿ ಭಾಷೆಯಲ್ಲಿ ನಾಮಫಲಕ ಅಳವಡಿಸಲಾಗಿದೆ
TV9 Web
| Edited By: |

Updated on:Jun 12, 2022 | 12:45 PM

Share

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆ (Karwar Municipality) ಎಡವಟ್ಟೊಂದು ಮಾಡಿದ್ದು, ಮರಾಠಿ ಭಾಷಾ ವಿವಾದಕ್ಕೆ ಕಿಡಿ ಇಟ್ಟಿದೆ. ಕನ್ನಡದ ನೆಲದಲ್ಲಿ ಮರಾಠಿ ಭಾಷೆಯ ನಾಮಫಲಕವನ್ನು (Nameplate) ಅಳವಡಿಸುವ ಮೂಲಕ ಬೆಳಗಾವಿಗೆ ಸೀಮಿತವಾಗಿದ್ದ ಮರಾಠಿ ಭಾಷಾ ವಿವಾದ ಉತ್ತರ ಕನ್ನಡದಲ್ಲೂ ಸೃಷ್ಇಯಾಗುತ್ತಾ ಎಂಬ ಆತಂಕ ಶುರುವಾಗಿದೆ. ನಗರದ ಹಲವು ನಾಮಫಲಕಗಳಲ್ಲಿ ಮರಾಠಿ ಭಾಷೆ ಬಳಕೆ ಮಾಡಿದ್ದಾರೆ. ಕಾರವಾರ ನಗರಸಭೆ ಎಡವಟ್ಟಿಗೆ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಜೊತೆಗೆ ಅನ್ಯಭಾಷೆಯ ನಾಮಫಲಕವನ್ನು ತೆಗೆಯುವಂತೆ ಕರವೇ ಆಗ್ರಹಿಸಿದೆ.

ನಗರಸಭೆ ಹಿಂದಿ ಲಿಪಿಯಲ್ಲಿ ಮರಾಠಿ ಭಾಷೆ ಬರೆದು ನಾಮಫಲಕ ಹಾಕಿದೆ. ಮುರಳಿಧರ್ ಮಠ ರಸ್ತೆ, ಗ್ರೀನ್ ಸ್ಟ್ರೀಟ್ ರಸ್ತೆ ಇತರೆ ಕಡೆಗಳಲ್ಲಿ ನಾಮಫಲಕಗಳನ್ನ ಹಾಕಲಾಗಿದೆ.

ಈ ಹಿಂದೆ ಕನ್ನಡ ರಾಜ್ಯೋತ್ಸವಕ್ಕೇ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದಾಗ ಎಂಇಎಸ್​ ಪುಂಡರು ಕಿರಿಕ್ ಮಾಡಿದ್ದರು. ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕುವಂತೆ ಎಂಇಎಸ್ ಪುಂಡರು ಕ್ಯಾತೆ ತೆಗೆದಿದ್ದರು. ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ಪ್ರತಿಭಟನೆಗೆ ಮುಂದಾಗಿತ್ತು. ಸಂಭಾಜಿ ವೃತ್ತದಲ್ಲಿ ಎಂಇಎಸ್ ಕಾರ್ಯಕರ್ತರು ಧರಣಿ ನಡೆಸಿದ್ದರು. ರಸ್ತೆಯಲ್ಲಿ ಹಾಕಿದ್ದ ಬ್ಯಾರಿಕೆಟ್ ತಳ್ಳಿ ಎಂಇಎಸ್ ಪುಂಡರು ಪುಂಡಾಟ ನಡೆಸಿ, ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದರು.

ಇದನ್ನೂ ಓದಿ
Image
Jai Jagadeesh: ವ್ಯಕ್ತಿ ಮೇಲೆ ಹಲ್ಲೆ ಆರೋಪ: ಪೊಲೀಸ್​ ಠಾಣೆಗೆ ಬಂದ ನಟ ಜೈ ಜಗದೀಶ್​; ಇಲ್ಲಿದೆ ಘಟನೆಯ ವಿವರ
Image
ಪೊಲೀಸ್ ಪಾಠ: ಎಸ್​ಎಸ್​ಎಲ್​ಸಿ ಫೇಲಾದ ವಿದ್ಯಾರ್ಥಿಗಳ ಕೈ ಹಿಡಿದ ಇನ್​ಸ್ಪೆಕ್ಟರ್, ಓದು ಮುಂದುವರೆಸಲು ನೆರವು
Image
Funny Video: ವಿಮಲ್ ಪಾನ್ ಮಸಾಲ ಬೆರೆಸಿ ಮ್ಯಾಗಿ ಸವಿದ ಯುವಕ, ವಿಲಕ್ಷಣ ವಿಡಿಯೋ ವೈರಲ್
Image
ಕರ್ನಾಟಕದಲ್ಲಿ 3 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ; ಉಗ್ರ ತಾಲಿಬ್ ಹುಸೇನ್ ಬಂಧನದ ಬೆನ್ನಲ್ಲೇ ಐಎಸ್​ಡಿ ಅಲರ್ಟ್

ಇದನ್ನೂ ಓದಿ: Jai Jagadeesh: ವ್ಯಕ್ತಿ ಮೇಲೆ ಹಲ್ಲೆ ಆರೋಪ: ಪೊಲೀಸ್​ ಠಾಣೆಗೆ ಬಂದ ನಟ ಜೈ ಜಗದೀಶ್​; ಇಲ್ಲಿದೆ ಘಟನೆಯ ವಿವರ

ಮರಾಠಿ ಭಾಷಿಕರ ಮೇಲೆ ಅನ್ಯಾಯವಾಗುತ್ತಿದೆ. ಗಡಿ ಭಾಗ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿ ಕರ್ನಾಟಕ ಸರ್ಕಾರದ ವಿರುದ್ಧ ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಮನವಿ ಸ್ವೀಕರಿಸಲು ಬಂದ ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಎದುರೇ ನಾಡದ್ರೋಹಿಗಳು ಘೋಷಣೆ ಕೂಗಿದ್ದರು. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದಿದ್ದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Sun, 12 June 22

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ