ಕರಾವಳಿ ಕಾವಲು ಪಡೆಯ ಹೊಸ ಕಮಾಂಡರ್ ಆಗಿ ಕಾರವಾರದ ಮನೋಜ್ ವಸಂತ ಬಾಡ್ಕರ್ ಅಧಿಕಾರಕ್ಕೆ

ಕರಾವಳಿ ಕಾವಲು ಪಡೆಯ ಹೊಸ ಕಮಾಂಡರ್ ಆಗಿ ಕಾರವಾರದ ಮನೋಜ್ ವಸಂತ ಬಾಡ್ಕರ್ ಅಧಿಕಾರಕ್ಕೆ

ಕರಾವಳಿ ಕಾವಲು ಪಡೆಯ ಹೊಸ ಕಮಾಂಡರ್ ಆಗಿ ಕಾರವಾರದ ಮನೋಜ್ ವಸಂತ ಬಾಡ್ಕರ್ ಅಧಿಕಾರಕ್ಕೆ
ಕರಾವಳಿ ಕಾವಲು ಪಡೆಯ ಹೊಸ ಕಮಾಂಡರ್ ಆಗಿ ಕಾರವಾರದ ಮನೋಜ್ ವಸಂತ ಬಾಡ್ಕರ್ ನೇಮಕ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 12, 2022 | 6:03 PM

ಕರಾವಳಿ ಕಾವಲು ಪಡೆಯ ( Indian Coast Guard -ICG) ಹೊಸ ಕಮಾಂಡರ್ ಆಗಿ ಕಾರವಾರ (Karwar) ಮೂಲದ ಮನೋಜ್ ವಸಂತ ಬಾಡ್ಕರ್ (Manoj Vasanth Badkar) ನೇಮಕವಾಗಿದ್ದಾರೆ. ಮುಂಬೈನಲ್ಲಿ ನಡೆದ ಸೆರೆಮೊನಿಯಲ್ ಪರೇಡ್‌ನಲ್ಲಿ ಕಮಾಂಡರ್ ಆಗಿ ಮನೋಜ್ ವಸಂತ ಅವರು ಅಧಿಕಾರ ಸ್ವೀಕಾರ (Commander of Coastal Force) ಮಾಡಿದ್ದಾರೆ. ಭಾರತೀಯ ಕೋಸ್ಟ್ ಗಾರ್ಡ್​​ ಪಶ್ಚಿಮ ವಲಯದ ಕಮಾಂಡರ್ ಮನೋಜ್ ಆಗಿರುವ ಮನೋಜ್ ವಸಂತ ಬಾಡ್ಕರ್ ಅವರಿಗೆ ಇನ್ನು ಮಹಾರಾಷ್ಟ್ರ, ಗೋವಾ, ಕೇರಳ, ಲಕ್ಷದ್ವೀಪ, ಕರ್ನಾಟಕದ ಮುಖ್ಯಸ್ಥ ಎಂಬ ಜವಾಬ್ದಾರಿ ಹೆಗಲೇರಿದೆ. ಮನೋಜ್ ವಸಂತ ಬಾಡ್ಕರ್ 36 ವರ್ಷಗಳಿಂದ ಭಾರತೀಯ ಕೋಸ್ಟ್ ಗಾರ್ಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

2018 ರಲ್ಲಿ ಐಜಿ ಶ್ರೇಣಿಯ ಬಡ್ತಿ ಪಡೆಯುವ ಮೊದಲು ಮತ್ತು ದೆಹಲಿಯಲ್ಲಿ ಸಿಜಿಎಸ್‌ಬಿ ಅಧ್ಯಕ್ಷರಾಗಿದ್ದ ಮನೋಜ್ 2006 ರಿಂದ 2008 ರ ವರಗೆ ಕರ್ನಾಟಕ ಮತ್ತು ಗೋವಾ ರಾಜ್ಯಕ್ಕೆ ಕೋಸ್ಟ್ ಗಾರ್ಡ್ ಮುಖ್ಯಸ್ಥರಾಗಿದ್ದರು. ಮನೋಜ್ ಕಾರವಾರ ಸೇಂಟ್ ಜೋಸೆಫ್ ಪ್ರೌಢಶಾಲೆ ಮತ್ತು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಹಳೆಯ ವಿದ್ಯಾರ್ಥಿ.