ಕಾರವಾರ: ಖುರಾನ್ ಓದಲು ಮಸೀದಿಗೆ ಬರುತ್ತಿದ್ದ ಬಾಲಕನ ಮೇಲೆ ದೌರ್ಜನ್ಯ, ಮೌಲ್ವಿ ಪೊಲೀಸ್ ವಶಕ್ಕೆ

| Updated By: ರಮೇಶ್ ಬಿ. ಜವಳಗೇರಾ

Updated on: Sep 24, 2023 | 5:43 PM

ಖುರಾನ್ ಓದಲು ಮಸೀದಿಗೆ ಬರುತ್ತಿದ್ದ ಅಪ್ರಾಪ್ತ ಬಾಲಕನ ಮೇಲೆ ಮುಸ್ಲಿಂ ಮೌಲ್ವಿಯೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಇದೀಗ ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಕುಮಟಾದ ಮಸೀದಿಯೊಂದರ ಮೌಲ್ವಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಕಾರವಾರ: ಖುರಾನ್ ಓದಲು ಮಸೀದಿಗೆ ಬರುತ್ತಿದ್ದ ಬಾಲಕನ ಮೇಲೆ ದೌರ್ಜನ್ಯ, ಮೌಲ್ವಿ ಪೊಲೀಸ್ ವಶಕ್ಕೆ
ಮೌಲ್ವಿ
Follow us on

ಕಾರವಾರ, (ಸೆಪ್ಟೆಂಬರ್ 26): ಬಾಲಕನ ಮೇಲೆ ಮೌಲ್ವಿಯೋರ್ವ ಲೈಂಗಿಕ ದೌರ್ಜನ್ಯ(sexually assaulting) ನಡೆಸಿದ ಆರೋಪ ಕೇಳಿಬಂದಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ಪಟ್ಟಣ ಮಸೀದಿಯೊಂದಕ್ಕೆ ಖುರಾನ್ ಓದಲು ಬರುತ್ತಿದ್ದ ಬಾಲಕ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದುಬಂದಿದ್ದು, ಇದೀಗ ಕುಮಟಾ ಠಾಣೆ ಪೊಲೀಸರು, ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಪಶ್ಚಿಮ ಬಂಗಾಳ ಮೂಲದ ಮೌಲ್ವಿ ಮೌಲಾನ ಅಬ್ದುಲ್ ಎನ್ನುವಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಶ್ವಾನದ ಜೊತೆ ಅಸಹಜ ಲೈಂಗಿಕ ಕ್ರಿಯೆ, ಆರೋಪಿ ಬಂಧನ

ಮೌಲಾನ ಅಬ್ಬುಸ್ ಸಮದ್ ಜಿಯಾಯಿ(25) ಲೈಂಗಿಕ ದೌರ್ಜನ್ಯವೆಸಗಿದ ಮೌಲ್ವಿಯಾಗಿದ್ದು, ಈತ ಸೆಪ್ಟೆಂಬರ್ 23ರ ರಾತ್ರಿ 8 ಗಂಟೆಗೆ ಖುರಾನ್ ಓದಲು ಮಸೀದಿಗೆ ತೆರಳಿದ್ದ ಬಾಲಕನ ಬಟ್ಟೆ ಬಿಚ್ಚಿ ಬಳಿಕ ಗುಪ್ತಾಂಗ ಸ್ಪರ್ಶಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಓ ಹಿಂದೆಯೂ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮಾಡಿದ್ದು, ಬಾಲಕನ ತಂದೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಕುಮಟಾ ಪೊಲೀಸರು, ಪೋಕ್ಸೋ ಪ್ರಕರಣದ ಅಡಿಯಲ್ಲಿ ಮೌಲ್ವಿ ಮೌಲಾನ ಅಬ್ಬುಸ್ ಸಮದ್ ಜಿಯಾಯಿ ಎನ್ನುವಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

Published On - 5:34 pm, Sun, 24 September 23